ಟ್ರೇಲರ್‌ನೊಂದಿಗೆ ಬಿಚ್ಚಿಕೊಳ್ಳಲಿದೆ ಭರಮಣ್ಣನ ಚರಿತೆ!

[adning id="4492"]

ನ್ನಡ ಸಿನಿಮಾರಂಗದಲ್ಲಿ ಈಗಾಗಲೇ ಸಂಚಲನ ಸೃಷ್ಟಿಸಿರುವ ಚಿತ್ರ ಬಿಚ್ಚುಗತ್ತಿ ಭರಮಣ್ಣ ನಾಯಕ. ಹರಿ ಸಂತೋಷ್ ನಿರ್ದೇಶನದ ಈ ಸಿನಿಮಾ ಈಗಾಗಲೇ ತನ್ನ ಮೇಕಿಂಗ್ ಮತ್ತು ಅದ್ದೂರಿತನದ ಕಾರಣದಿಂದ ಭಾರೀ ನಿರೀಕ್ಷೆ ಮೂಡಿಸಿದೆ. ಇದರ ಬಗ್ಗೆ ಪ್ರೇಕ್ಷಕರೆಲ್ಲ ಇನ್ನೊಂದಷ್ಟು ಮಾಹಿತಿಗಾಗಿ ಕಾದಿರುವಾಗಲೇ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ನಾಳೆಯೇ ಬಿಚ್ಚುಗತ್ತಿ ಭರಮಣ್ಣ ನಾಯಕ ಟ್ರೇಲರ್ ಮೂಲಕ ಅಬ್ಬರಿಸಲಿದ್ದಾನೆ. ಈಗಾಗಲೇ ಈ ಸಿನಿಮಾದತ್ತ ಪಡಿಮೂಡಿಕೊಂಡಿರೋ ಸಮಸ್ತ ಪ್ರಶ್ನೆಗಳಿಗೂ ನಾಳೆ ಒಂದು ಮಟ್ಟಿಗೆ ಉತ್ತರ ಸಿಗುವ ನಿರೀಕ್ಷೆಗಳಿದ್ದಾವೆ.


ಖ್ಯಾತ ಹಾಸ್ಯ ನಟ ರಾಜವರ್ಧನ್ ನಟಿಸಿರೋ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿಯೇ ದಾಖಲೆಯಂಥಾ, ಪರ ಭಾಷಾ ನೆಲದಲ್ಲಿಯೂ ಸದ್ದು ಮಾಡುವಂಥ ಚಿತ್ರವಾಗಿ ಹೊರಹೊಮ್ಮುವ ಸ್ಪಷ್ಟ ಸೂಚನೆಗಳೇ ದಟ್ಟೈಸಿವೆ. ಈಗಾಗಲೇ ಯುವ ಆವೇಗದ ಒಂದಷ್ಟು ಸಿನಿಮಾಗಳ್ನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿರುವವರು ಹರಿ ಸಂತೋಷ್ ಈ ಸಿನಿನಾವನ್ನು ನಿರ್ದೇಶನ ಮಾಡಿದ್ದಾರೆ. ಎಲ್ಲ ಬಗೆಯ ಸಿನಿಮಾಗಳನ್ನೂ ನಿರ್ವಹಿಸುವ ಛಾತಿ ಹೊಂದಿರುವ ಅವರು ಬಿಚ್ಚುಗತ್ತಿಯನ್ನು ಅದೆಷ್ಟು ಚೆಂದಗೆ ರೂಪಿಸಿದ್ದಾರೆಂಬುದಕ್ಕೆ ಈಗಾಗಲೇ ನಾನಾ ಸಾಕ್ಷಿಗಳು ಸಿಕ್ಕಿವೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟೀಸರ್, ವಿಡಿಯೋ ಸಾಂಗ್ ಮೂಲಕ ಬಿಚ್ಚುಗತ್ತಿಯ ಬಗ್ಗೆ ಭರಪೂರ ಚರ್ಚೆಗಳು ಆರಂಭವಾಗಿವೆ.
ರಾಜವರ್ಧನ್ ಕೂಡಾ ಖದರ್‌ನ ಹಿಮ್ಮೇಳದೊಂದಿಗೆ ನಾಯಕನಾಗಿ ನೆಲೆ ಕಂಡುಕೊಳ್ಳುವ ನಿರೀಕ್ಷೆಗಳೂ ಇದ್ದಾವೆ. ಓರ್ವ ನಟನಾಗಿ ರಾಜವರ್ಧನ್ ಎಲ್ಲರಿಗೂ ಮಾದರಿಯೆಂಬಂಥಾ ಪೂರ್ವ ತಯಾರಿಯನ್ನು ಬಿಚ್ಚುಗತ್ತಿಗಾಗಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಬಿಚ್ಚುಗತ್ತಿಯಂಥಾ ರಿಯಲಿಸ್ಟಿಕ್ ಕಥೆಯಲ್ಲಿ ಭರಮಣ್ಣ ನಾಯಕನಾಗಿ ಅಬ್ಬರಿಸೋದೆಂದರೆ ಸಾಮಾನ್ಯದ ಸಂಗತಿಯಲ್ಲ. ಅದಕ್ಕೆ ವರ್ಷಗಟ್ಟಲೆ ತಯಾರಿ ಬೇಕಾಗುತ್ತದೆ. ಕಷ್ಟಗಳನ್ನು ಕಂಡುಂಡು ಬೆಳೆದಿರುವ ರಾಜವರ್ಧನ್‌ಗೆ ನಟನಾಗಿ ಮಹತ್ತರವಾದುದನ್ನು ಸಾಧಿಸೋ ಹಸಿವಿದೆ. ಈ ಕಾರಣದಿಂದಲೇ ವರ್ಷಗಟ್ಟಲೆ ಬೆವರುಹರಿಸಿ ತಯಾರಿ ನಡೆಸಿದ್ದಾರೆ. ಅದರ ಪ್ರತಿಫಲ ಎಂಥಾದ್ದೆಂಬುದು ನಾಳೆ ಟ್ರೇಲರ್ ಮೂಲಕ ಜಾಹೀರಾಗಲಿದೆ.

[adning id="4492"]

LEAVE A REPLY

Please enter your comment!
Please enter your name here