ಮದಗಜನಿಗಾಗಿ ಹಳ್ಳಿ ಅವತಾರವೆತ್ತಿದಳು ಆಶಿಕಾ ರಂಗನಾಥ್!

[adning id="4492"]

ರೋರಿಂಗ್ ಸ್ಟಾರ್ ಶ್ರೀಮುರುಳಿ ಭರಾಟೆಯ ನಂತರ ನಟಿಸಲಿರೋ ಚಿತ್ರ ಮದಗಜ ಎಂಬ ಬಗ್ಗೆ ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು. ಅಯೋಗ್ಯ ಎಂಬ ಸಿನಿಮಾ ಮೂಲಕ ಗೆಲುವು ದಕ್ಕಿಸಿಕೊಂಡಿದ್ದ ಮಹೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿದೆ ಎನ್ನಲಾಗಿದ್ದ ಈ ಸಿನಿಮಾ ಸುತ್ತಾ ಆರಂಭ ಕಾಲದಿಂದಲೂ ಒಂದಷ್ಟು ಗೊಂದಲಗಳೇ ಹಬ್ಬಿಕೊಂಡಿದ್ದವು. ನಿಂತಲ್ಲಿ ಕುಂತಲ್ಲಿ ಪ್ರಚಾರಕ್ಕೆ  ಹಾತೊರೆಯೋ ಮಹೇಶನ ಮನಸ್ಥಿತಿಯೂ ಅದಕ್ಕೆ ಕಾರಣವಾಗಿದ್ದಿರಬಹುದು. ಇದೀಗ ಅಂಥ ಗೊಂದಲಗಳೆಲ್ಲವೂ ನಿವಾರಣೆಯಾಗಿದೆ. ಪ್ರೇಮಿಗಳ ದಿನದಂದೇ ಮದಗಜನಿಗೊಬ್ಬಳು ಮನದರಸಿಯೂ ಸಿಕ್ಕಿದ್ದಾಳೆ!


ಮದಗಜ ಚಿತ್ರದ ಸ್ಕ್ರಿಫ್ಟ್ ಸೇರಿದಂತೆ ಉಳಿದುಕೊಂಡಿದ್ದ ಒಂದಷ್ಟು ಕೆಲಸ ಕಾರ್ಯಗಳೂ ಮುಗಿದು ಇದೀಗ ರೋರಿಂಗ್ ಸ್ಟಾರ್ ಶ್ರೀಮುರುಳಿ ಚಿತ್ರೀಕರಣಕ್ಕೆ ತಯಾರಾಗಿ ನಿಂತಿದ್ದಾರೆ. ಈ ಹೊತ್ತಿನಲ್ಲಿಯೇ ಈ ಸಿನಿಮಾ ನಾಯಕಿ ಯಾರಾಗುತ್ತಾರೆಂಬ ಊಹೆಯನ್ನು ಚಿತ್ರತಂಡ ಪ್ರೇಕ್ಷಕರ ಮುಂದಿಟ್ಟು ನಾಐಖೀ ಐಅಋಏಮS ಬಗ್ಗೆ ಗೆಸ್ ಮಾಡುವ ಚಾಲೆಂಜು ನೀಡಿತ್ತು. ಇದೀಗ ಆಶಿಕಾ ರಂಗನಾಥ್ ಮದಗಜನ ಮನದರಸಿಯಾಗಿ ನಿಕ್ಕಿಯಾಗಿದ್ದಾಳೆ. ಶ್ರೀ ಮುರುಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿ ಆಶಿಕಾಗೆ ವೆಲ್‌ಕಮ್ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ಆಶಿಕಾ ಲಂಗ ಧಾವಣಿ ತೊಟ್ಟು ಪಕ್ಕಾ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾಳೆ.


ಆಶಿಕಾ ರಂಗನಾಥ್ ಯೋಗರಾಜ ಭಟ್ ನಿರ್ದೇಶನದ ಮುಗುಳುನಗೆ ಚಿತ್ರದ ಮೂಲಕವೇ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದ ಹುಡುಗಿ. ಆ ನಂತರದಲ್ಲಿ ಸ್ಟಾರ್ ನಟರೊಂದಿಗೂ ನಟಿಸೋ ಅವಕಾಶ ಗಿಟ್ಟಿಕೊಂಡು ಇದೀಗ ಬೇಡಿಕೆಯ ನಟಿಯಾಗಿ ನೆಲೆ ಕಂಡುಕೊಂಡಿದ್ದಾಳೆ. ನಮದಗಜ ಚಿತ್ರಕ್ಕೆ ಪರಭಾಷಾ ನಟಿಯರ ಹೆಸರುಗಳೂ ನಾಯಕಿ ಪಟ್ಟಕ್ಕಾಗಿ ಕೇಳಿ ಬಂದಿದ್ದವು. ಕನ್ನಡದಲ್ಲಿಯೇ ಒಂದಷ್ಟು ನಟಿಯರಿಗೂ ಈ ಮೂಲಕ ಪ್ರಚಾರ ಸಿಕ್ಕಿತ್ತು. ಆದರೆ ಕಡೆಗೂ ಆಶಿಕಾಗೆ ನಾಯಕಿಯಾಗೋ ಅವಕಾಶ ಒದಗಿ ಬಂದಿದೆ. ಇದುವರೆಗೂ ಆಶಿಕಾ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಿದ್ದಾಳೆ. ನಟಿಸಿರೋದು ಕೆಲವೇ ಚಿತ್ರಗಳಲ್ಲಿಯಾದರೂ ಬಗೆ ಬಗೆಯ ಪಾತ್ರಗಳನ್ನು ಮಾಡಿದ್ದಾಳೆ. ಆದರೆ ಈ ಚಿತ್ರದಲ್ಲಿ ಆಕೆಗೆ ಡೀಗ್ಲಾಮ್ ಪಾತ್ರ ಒಲಿದು ಬಂದಿದೆ.

[adning id="4492"]

LEAVE A REPLY

Please enter your comment!
Please enter your name here