ಪುಟ್ಟ ಮನಸಿನ ಕನಸಿಗೆ ರೆಕ್ಕೆ ಮೂಡಿಸಿದ ಸಿಂಗಂ!

ದೆಷ್ಟೇ ಎತ್ತರಕ್ಕೇರಿದ್ದರೂ ಮಗುತನವನ್ನು ಮನಸೊಳಗೆ ಕಾಯ್ದಿಟ್ಟುಕೊಂಡ, ಪರರ ಖುಷಿಯಲ್ಲಿಯೇ ಸುಖ ಕಾಣುವ ಮನಸ್ಥಿತಿಯ ಮಂದಿ ಸಿನಿಮಾ ರಂಗದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆ ಸಾಲಿಗೆ ಸಿಂಗಂ ಖ್ಯಾತಿಯ ತಮಿಳು ನಟ ಸೂರ್ಯ ಕೂಡಾ ಸೇರಿಕೊಳ್ಳುತ್ತಾರೆ. ಇದೀಗ ಅವರು ಕರ್ನಾಟಕದವರೇ ಆದ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಸೊರರೈ ಪೊಟ್ಟರು ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಹಾಡುಗಳ ಬಿಡುಗಡೆಯ ನೆಪದಲ್ಲಿ ನೋರು ಪುಟ್ಟ ಮಕ್ಕಳ ಕನಸಿಗೆ ರೆಕ್ಕೆ ಮೂಡಿಸುವ ಸಾರ್ಥಕ ಕೆಲಸವನ್ನು ಸೂರ್ಯ ಮಾಡಿದ್ದಾರೆ. ಸಿನಿಮಾ ಸಮಾರಂಭದ ನೆಪದಲ್ಲಿ ನಡೆದಿರೋ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಮೆಚ್ಚುಗೆಗಳು ಕೇಳಿ ಬರಲಾರಂಭಿಸಿವೆ.


ಈಗಾಗಲೇ ದೇಶಾದ್ಯಂತ ಸುದ್ದಿಯಲ್ಲಿರೋಫ ಈ ಸಿನಿಮಾದ ಹಾಡೊಂದರ ಬಿಡುಗಡೆ ಕಾರ್ಯಕ್ರಮವನ್ನಿಂದು ಚೆನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಯೋಜಿಸಲಾಗಿತ್ತು. ಸ್ಟ್ರೈಸ್ ಜೆಟ್ ಮ್ಯಾನೇಜಿಂಗ್ ಡೈರೆಕ್ಟರ್ ಅಜಯ್ ಸಿಂಗ್ ಮತ್ತು ತೆಲುಗು ನಟ ಮೋಹನ್ ಬಾಬು ಸಮ್ಮುಖದಲ್ಲಿ ಈ ಹಾಡನ್ನು ಬಿಡುಗಡೆಗೊಳಿಸಲಾಗಿದೆ. ಬರೀ ಇಷ್ಟೇ ಆಗಿದ್ದರೆ ಇದು ಹತ್ತರಲ್ಲಿ ಹನ್ನೊಂದನೆಯ ಸಾಧಾರಣ ಸಿನಿಮಾ ಕಾರ್ಯಕ್ರಮವಾಗಿ ದಾಖಲಾಗಿ ಬಿಡುತ್ತಿತ್ತು. ಆದರೆ ಇದೇ ಸಂದರ್ಭದಲ್ಲಿ ನೂರು ಪುಟ್ಟ ಮಕ್ಕಳಿಗೆ ವಿಮಾನ ಯಾನ ಮಾಡೋ ಅವಕಾಶ ಕಲ್ಪಿಸಲಾಗಿತ್ತು. ಖುದ್ದು ಸೂರ್ಯ ಆ ಮಕ್ಕಳೊಂದಿಗೆ ಕಲೆತು ಆ ಖುಯನ್ನು ತನ್ನದೇ ಎಂಬಂತೆ ಸಂಭ್ರಮಿಸಿದ್ದಾರೆ.


ಸಾಮಾನ್ಯವಾಗಿ ಪುಟ್ಟ ವಯಸ್ಸಿನಲ್ಲಿ ಆಕಾಶದಲ್ಲಿ ಹಾರಾಡುವ ವಿಮಾನ ಪ್ರತೀ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾರೆ. ಗ್ರಾಮೀಣ ಪ್ರದೇಶದ ಅದೆಷ್ಟೋ ಮಕ್ಕಳು ಇಂಥಾ ಕನಸನ್ನು ಅದೆಷ್ಟೋ ವರ್ಷ ಕಳೆದರೂ ಮನಸೊಳಗೇ ಸಾಕಿಕೊಳ್ಳುತ್ತಾರೆ. ಆದರೆ ಹೆಚ್ಚಿನವರಿಗೆ ಅದೊಂದು ಕನಸಾಗಿಯೇ ಉಳಿದು ಬಿಡುತ್ತದೆ. ಇದನ್ನು ಮನಗಂಡೇ ನೂರು ಮಕ್ಕಳ ಆ ಕನಸನ್ನು ನನಸು ಮಾಡಲು ಸೂರ್ಯ ಶ್ರಮಿಸಿದ್ದಾರೆ. ಅಷ್ಟೂ ಮಕ್ಕಳು ಖುಷಿಯಿಂದ ಕುಣಿದಾಡಿ ಸೂರ್ಯರನ್ನು ಮೆಚ್ಚಿಕೊಂಡಿದ್ದಾವೆ. ಈ ಮಕ್ಕಳೊಂದಿಗೆ ಅವರ ಪೋಷಕರೂ ಕೂಡಾ ವಿಮಾನ ಯಾನ ನಡೆಸಿ ಖುಷಿಗೊಂಡಿದ್ದಾರೆ.

LEAVE A REPLY

Please enter your comment!
Please enter your name here