ಇಂದಿರೆಯಾಗೋ ಅವಕಾಶ ತಪ್ಪಿಸಿಕೊಂಡ ರಮ್ಯಾ ಕೃಷ್ಣ!

ವೀನಾ ಟಂಡನ್ ಇದೀಗ ಕೆಜಿಎಫ್ ಛಾಪ್ಟರ್-೨ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಖಂಡ ಇಪ್ಪತ್ತು ವರ್ಷಗಳ ನಂತರದಲ್ಲಿ ಕನ್ನಡಕ್ಕೆ ಮರಳಿರೋ ರವೀನಾ ಪಾತ್ರದ ಲುಕ್ಕು ಹೇಗಿರಲಿದೆ ಅನ್ನೋದರ ಬಗ್ಗೆ ಸಮಸ್ತ ಪ್ರೇಕ್ಷಕರೂ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ತನ್ನ ಪಾತ್ರದ ಬಗ್ಗೆ ರವೀನಾ ಅಂತೂ ತುಂಬಾನೇ ಖುಷಿಯ ಮೂಡಿನಲ್ಲಿದ್ದಾರೆ. ಈ ಕಾರಣದಿಣಂದಲೇ ಚಿತ್ರೀಕರಣದ ಹಂತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಒಂದಷ್ಟು ಸಂಗತಿಗಳನ್ನು ಹಂಚಿಕೊಂಳ್ಳುತ್ತಾ ಮುಂದುವರೆಯುತ್ತಿದ್ದಾರೆ. ಇದೇ ಹೊತ್ತಲ್ಲಿ ಈ ಪಾತ್ರದ ಪೋಷಣೆ ಮಾಡುವ ಸಂಬಂಧವಾಗಿ ಒಂದು ಇಂಟರೆಸ್ಟಿಂಗ್ ಮ್ಯಾಟರ್ ಹೊರ ಬಿದ್ದಿದೆ.
ಒಂದು ವೇಳೆ ಆರಂಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅಂದುಕೊಂಡಿದ್ದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಈ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದರೆ ಈ ಸದಾವಕಾಶ ರವೀನಾ ಟಂಡನ್‌ಗೆ ಸಿಗುತ್ತಲೇ ಇರಲಿಲ್ಲ. ಇಂಥಾದ್ದೊಂದು ವಿಚಾರವೀಗೆ ಎಲ್ಲೆಡೆ ಕುತೂಹಲ ಮೂಡಿಸಿದೆ. ಹಾಗಾದರೆ ಮೊದಲು ನೀಲ್ ಈ ಪಾತ್ರವನ್ನು ಯಾವ ನಟಿ ನಿರ್ವಹಿಸಬೇಕೆಂದುಕೊಂಡಿದ್ದರು? ಅದೇಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗಳಿಗೆಲ್ಲ ಖಂಡಿತಾ ಉತ್ತರವೂ ಇದೆ. ಹಾಗೆ ಆರಂಭದಲ್ಲಿ ಪ್ರಶಾಂತ್ ನೀಲ್ ಇಂದಿರಾ ಗಾಂಧಿಯನ್ನು ಹೋಲುವಂಥಾ ಆ ಪಾತ್ರಕ್ಕೆ ರಮ್ಯಾ ಕಷ್ಣ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದರಂತೆ.


ಅದರನ್ವಯ ರಮ್ಯಾ ಕೃಷ್ಣರ ಮುಂದೆ ಈ ಬಗ್ಗೆ ಮಾತುಕತೆಯೂ ನಡೆದಿತ್ತು. ಇಡೀ ಕಥೆ ಮತ್ತು ಆ ಪಾತ್ರದ ಬಗ್ಗೆ ಕೇಳಿ ರಮ್ಯಾ ಕೂಡಾ ಖುಷಿಗೊಂಡಿದ್ದರು. ಆದರೆ ಅಲ್ಲಿ ಅಡ್ಡಿಯುಂಟಾಗಿದ್ದು ಸಂಭಾವನೆಯ ವಿಚಾರದಲ್ಲಿ. ಬಾಹುಬಲಿ ಸಿನಿಮಾದ ಹಂತದಲ್ಲಿ ರಮ್ಯಾ ಸಂಭಾವನೆ ಹೆಚ್ಚಿಕೊಂಡಿತ್ತು. ಬಾಹುಬಲಿಗಾಗಿಯೇ ಅವರು ಎರಡೂವರೆ ಕೋಟಿಗೂ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದರಂತೆ. ಸಂಭಾವನೆ ತೀರಾ ಹೆಚ್ಚೆನಿಸಿದ್ದರಿಂದ ನೀಲ್ ತಮ್ಮ ಆರಂಭಿಕ ನಿರ್ಧಾರದಿಂದ ಹಿಂದೆ ಸರಿದಿದ್ದರು. ರಮ್ಯಾ ಕೃಷ್ಣ ಇಂದಿರೆಯಾಗೋ ಅವಕಾಶ ತಪ್ಪಿಸಿಕೊಂಡು ಅದು ರವೀನಾ ಟಂಡನ್ ಪಾಲಾಗುವಂತಾಗಿತ್ತು.

LEAVE A REPLY

Please enter your comment!
Please enter your name here