ರಮೇಶ್ ಜಾರಕಿಹೊಳಿ ಲೀಡರ್ ಆಗಲು ಡಿಕೆಶಿ ಕಾರಣವಂತೆ!

[adning id="4492"]

ಹೀಗೆ ಹೇಳಿರುವುದು ಬೇರ‍್ಯಾರೂ ಅಲ್ಲ. ಖುದ್ದು ರಮೇಶ್ ಜಾರಕಿಹೊಳಿಯೇ ಇಂಥಾದ್ದೊಂದು ಅಚ್ಚರಿದಾಯಕ ಹೇಳಿಕೆ ರವಾನಿಸಿದ್ದಾರೆ. ಇದೀಗ ಹೇಗೋ ಹರಸಾಹಸ ಪಟ್ಟು ರಮೇಶ್ ಸಚಿವಗಿರಿ ದಕ್ಕಿಸಿಕೊಳ್ಳುವಲ್ಲಿ ಯಶ ಕಂಡಿದ್ದಾರೆ. ಹರಸಾಹಸ, ಹರತಾಳ ಸೇರಿದಂತೆ ಎಲ್ಲ ಬಗೆಯ ಸರ್ಕಸ್ಸುಗಳನ್ನೂ ನಡೆಸಿ ಸಚಿವನಾಗಿರುವ ರಮೇಶ್ ಜಾರಕಿಹೊಳಿ ಮುಖದಲ್ಲೀಗ ಡಿಕೆಶಿಗೆ ಸೆಡ್ಡು ಹೊಡೆದು ಗೆದ್ದ ಖುಷಿ ಮಿರುಗುತ್ತಿದೆ. ಆದರೂ ತಾನು ಲೀಡರ್ ಆಗಲು, ಹೀಗೆ ಗೆಲ್ಲಲು ಡಿಕೆಶಿಯೇ ಕಾರಣ ಅಂತ ಹೇಳುವಷ್ಟು ದೊಡ್ಡ ಮನಸ್ಸು ಸಾಹುಕಾರನಿಗೆ ಹೇಗಾದರೂ ಬಂತೆಂಬ ಬಗ್ಗೆ ಯಾರಿಗಾದರೂ ಅಚ್ಚರಿಯಾಗದಿರೋದಿಲ್ಲ. ವಾಸ್ತವದಲ್ಲಿ ಅದೂ ಕೂಡಾ ಸಾಹುಕಾರರ ತಿವಿತದೊಂದು ಭಾಗವಷ್ಟೆ!


ಸಚಿವನಾಗಿರುವ ರಮೇಶ್ ಜಾರಕಿಹೊಳಿಗೆ ಕ್ಷೇತ್ರದ ಕಾರ್ಯಕರ್ತರು ಅದ್ದೂರಿಯಶಾಗಿಯೇ ಅಭಿನಂದಿಸಿದ್ದಾರೆ. ಈ ಸಮಾರಂಭದಲ್ಲಿ ರಮೇಶ್ ಡಿಕೆಶಿ ಬಗ್ಗೆ ಮಾತಾಡಿದ್ದಾರೆ. ತಾನು ಕಾಂಗ್ರೆಸ್‌ನಲ್ಲಿರುವಾಗ ಸ್ವಪಕ್ಷೀಯರೇ ತನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದರು. ಅಂಥಾ ಘಳಿಗೆಯಲ್ಲಿ ತಾನು ನಂಬಿದ್ದು ನರೇಂದ್ರ ಮೋದಿ ಮತ್ತು ಅಮಿತ್ ಶಾರನ್ನು ಮಾತ್ರ ಎಂದಿರುವ ರಮೇಶ್ ತಾನಿನ್ನು ಎಲ್ಲ ಕಾಲದಲ್ಲಿಯೂ ಬಿಜೆಪಿಗೆ ನಿಷ್ಠನಾಗಿದ್ದುಕೊಂಡು ಬಿಜೆಪಿಯಲ್ಲೇ ರಾಜಕೀಯ ನಿವೃತ್ತಿ ಹೊಂದುವುದಾಗಿ ಹೇಳಿಕೊಂಡಿರುವ ಅವರು, ಡಿ ಕೆ ಶಿವಕುಮಾರ್ ವಿರೋಧಿಸಿದ ಕಾರಣದಿಂದಲೇ ತಾನು ದೊಡ್ಡ ಮಟ್ಟದ ಲೀಡರ್ ಆಗಿದ್ದಲ್ಲದೇ ಹೀಗೆ ಸೆಡ್ಡು ಹೊಡೆದು ಗೆಲ್ಲಲು ಸಾಧ್ಯವಾಯಿತೆಂದಿದ್ದಾರೆ.


ಈ ಬಾರಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಡೌಟೆಂಬಂಥಾ ವಾತಾವರಣ ಕಡೇಯವರೆಗೂ ಇತ್ತು. ಅತ್ತ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ರಮೇಶ್‌ಗೆ ಆಯಕಟ್ಟಿನ ಸ್ಥಾನಮಾನ ಕೊಡಲೇ ಬೇಕಾದ ಅನಿವಾರ್ಯತೆ ಯಡಿಯೂರಪ್ಪನವರಿಗೂ ಇತ್ತು. ಆದರೆ ಮೂಲ ಬಿಜೆಪಿಗರಿಂದ ಇದಕ್ಕೆ ಆರಂಭದಿಂದಲೂ ತೀವ್ರವಾದ ವಿರೋಧ ಇದ್ದೇ ಇತ್ತು. ಒಂದು ವೇಳೆ ರಮೇಶ್‌ಗೆ ಸಚಿವ ಸ್ಥಾನ ಕೊಡದೇ ಹೋದರೆ ಖಂಡಿತಾ ಮತ್ತೊಂದು ಬಂಡಾಯ ಎದುರಿಸಿ ಸರ್ಕಾರದ ಬುಡವೇ ಅಲ್ಲಾಡುತ್ತದೆಂಬ ಸತ್ಯ ಹೈಕಮಾಂಡಿಗೂ ಸ್ಪಷ್ಟವಾಗಿತ್ತು. ಆದರೆ ಇಂಥಾ ಅನಿವಾರ್ಯ ವಾತಾವರಣವೇ ರಮೇಶ್ ಜಾರಕಿಹೊಳಿ ಡಿಕೆಶಿಯಂಥಾ ಬಲಿಷ್ಠ ನಾಯಕನಿಗೆ ಸೆಡ್ಡು ಹೊಡೆದು ಗೆಲ್ಲುವಂತೆ ಮಾಡಿದೆ.

[adning id="4492"]

LEAVE A REPLY

Please enter your comment!
Please enter your name here