ಬಿಚ್ಚುಗತ್ತಿ ಡಬ್ಬಿಂಗ್ ರೈಟ್ಸ್‌ಗೆ ಸಿಕ್ಕ ಮೊತ್ತ ಎಷ್ಟು ಗೊತ್ತೇ?

[adning id="4492"]

ಐತಿಹಾಸಿಕ ಚಿತ್ರಕ್ಕೆ ಅಚ್ಚರಿದಾಯಕ ಬೇಡಿಕೆ!
ರಾಜವರ್ಧನ್ ಮತ್ತು ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಿಚ್ಚುಗತ್ತಿ ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾ ದಳವಾಯಿ ದಂಗೆಯ ಕಿಡಿಗಳನ್ನು ಬಚ್ಚಿಟ್ಟುಕೊಂಡಿರುವ ಐಹಿಹಾಸಿಕ ಕಥನವನ್ನೊಳಗೊಂಡಿದೆ. ಕನ್ನಡದಲ್ಲಿ ಮಾತ್ರವಲ್ಲ, ಪರಭಾಷೆಗಳಲ್ಲಿಯೂ ಇಂಥಾ ಐತಿಹಾಸಿಕ ಕಥಾ ಹಂದರದ ಸಿನಿಮಾಗಳು ಸಿದ್ಧಗೊಳ್ಳೋದು ಅಪರೂಪ. ಆದರೆ ಈ ವೆರೈಟಿಯ ಚಿತ್ರಗಳಿಗಾಗ ಹಪಾಹಪಿಸುವ ಪ್ರೇಕ್ಷಕರದ್ದೊಂದು ದೊಡ್ಡ ದಂಡೇ ಇದೆ. ಆದ್ದರಿಂದಲೇ ಈ ಬಗೆಯ ಚಿತ್ರಗಳಿಗೆ ಡಬ್ಬಿಂಗ್ ವಲಯದಲ್ಲಿ ಭಾರೀ ಬೇಡಿಕೆ ಇದೆ. ಇದೀಗ ಆ ವಲಯದ ಕಣ್ಣು ಬಿಚ್ಚುಕತ್ತಿ ಚಿತ್ರದತ್ತ ಹೊರಳಿಕೊಂಡಿದೆ. ಈಗಾಗಲೇ ಬಿಚ್ಚುಗತ್ತಿ ಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲಾಗಿರೋ ಸುದ್ದಿಯೊಂದು ಹರಿದಾಡುತ್ತಿದೆ.


ಇದು ಭರ್ಜರಿ ಆಕ್ಷನ್ ಸನ್ನಿವೇಶಗಳನ್ನೊಳಗೊಂಡಿರೋ ಐತಿಹಾಸಿಕ ದೃಷ್ಯ ಕಾವ್ಯದಂಥ ಸಿನಿಮಾ. ಬಿ ಎಲ್ ವೇಣು ಕಾದಂಬರಿಯಾಧಾರಿತ ಈ ಚಿತ್ರ ಈಗಾಗಲೇ ತನ್ನ ಮೇಕಿಂಗ್ ಕಾರಣದಿಂದಲೇ ಸಖತ್ ಸೌಂಡ್ ಮಾಡಲಾರಂಭಿಸಿದೆ. ಇದರ ಪ್ರಭೆಯೀಗ ಪರಭಾಷಾ ಚಿತ್ರರಂಗಗಳಲ್ಲಿಯೂ ಬೆಳಗಲಾರಂಭಿಸಿದೆ. ಬೇರೆ ಬೇರೆ  ಭಾಷೆಗಳಿಂದ ಈಗಾಗಲೇ ನಿರ್ಮಾಪಕರಿಗೆ ಡಬ್ಬಿಂಗ್ ರೈಟ್ಸ್ ಆಫರ್‌ಗಳು ಬರಲಾರಂಭಿಸಿವೆ. ಆದರೆ ಹಿಂದಿ ಡಬ್ಬಿಂಗ್ ರೈಟ್ಸ್ ಮಾತುಕತೆ ಮಾತ್ರವೇ ಇದೀಗ ಫೈನಲ್ ಆಗಿದೆ ಎನ್ನಲಾಗುತ್ತಿದೆ. ಒಂದು ಮೂಲದ ಪ್ರಕಾರ ಬಿಚ್ಚುಗತ್ತಿಯ ಹಿಂದಿ ಡಬ್ಬಿಂಗ್ ರೈಟ್ಸ್ ಮೂರುಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ.


ಈಗಾಗಲೇ ಯುವ ಆವೇಗದ ಒಂದಷ್ಟು ಸಿನಿಮಾಗಳ್ನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿರುವವರು ಹರಿ ಸಂತೋಷ್. ಎಲ್ಲ ಬಗೆಯ ಸಿನಿಮಾಗಳನ್ನೂ ನಿರ್ವಹಿಸುವ ಛಾತಿ ಹೊಂದಿರುವ ಅವರು ಬಿಚ್ಚುಗತ್ತಿಯನ್ನು ಅದೆಷ್ಟು ಚೆಂದಗೆ ರೂಪಿಸಿದ್ದಾರೆಂಬುದಕ್ಕೆ ಈಗಾಗಲೇ ನಾನಾ ಸಾಕ್ಷಿಗಳು ಸಿಕ್ಕಿವೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟೀಸರ್, ವಿಡಿಯೋ ಸಾಂಗ್ ಮೂಲಕ ಬಿಚ್ಚುಗತ್ತಿಯ ಬಗ್ಗೆ ಭರಪೂರ ಚರ್ಚೆಗಳು ಆರಂಭವಾಗಿವೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲೊಂದು ದಾಖಲೆ ಸೃಷ್ಟಿಸುವಂಥಾ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಇದರೊಂದಿಗೇ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಕೂಡಾ ಖದರ್‌ನ ಹಿಮ್ಮೇಳದೊಂದಿಗೆ ನಾಯಕನಾಗಿ ನೆಲೆ ಕಂಡುಕೊಳ್ಳುವ ನಿರೀಕ್ಷೆಗಳೂ ಇದ್ದಾವೆ.

[adning id="4492"]

LEAVE A REPLY

Please enter your comment!
Please enter your name here