ಮತ್ತೆ ಮುಖ್ಯಮಂತ್ರಿಯಾಗಲಿದ್ದಾರಾ ಅರವಿಂದ ಕೇಜ್ರಿವಾಲ್?

[adning id="4492"]

ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ದೆಹಲಿ ವಿಧಾನಸಭಾ ಚುನಾವಣಾ ಮತದಾನ ಸಮಾಪ್ತಿಗೊಂಡಿದೆ. ಈ ಬಾರಿ ಆಮ್ ಆದ್ಮಿ ಪಕ್ಷದ ಅರವಿಂದ ಕ್ರೇಜ್ರಿವಾಲ್ ಅವರನ್ನು ಅಧಿಕಾರದಿಂದಿಳಿಸಲು ಟೋಂಕ ಕಟ್ಟಿನಿಂತಂತೆ ಬಿಜೆಪಿ ಕಾರ್ಯ ನಿರ್ವಹಿಸಿದೆ. ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯೇ ದೆಹಲಿಯಲ್ಲಿಯೂ ಅಧಿಕಾರ ಹಿಡಿಯಲಿದೆ ಎಂಬಂತೆ ಬಿಂಬಿಸಲಾಗುತ್ತಿದೆಯಾದರೂ ಚುನಾವಣೋತ್ತರ ಸಮೀಕ್ಷೆಗಳು ಮಾತ್ರ ಬೇರೆಯದ್ದೇ ಸುಳಿವು ನೀಡುತ್ತಿವೆ. ಅದರನ್ವಯ ಹೇಳುವುದಾದರೆ, ಈ ಬಾರಿಯೂ ಆಮ್ ಆದ್ಮಿ ಪಕ್ಷವೇ ಗೆದ್ದು ಅರವಿಂದ ಕೇಜ್ರಿವಾಲ್ ಮತ್ತೊಮಮೆ ಮುಖ್ಯಮಂತ್ರಿಯಾಗಲಿರುವ ವಾತಾವರಣವೇ ದಟ್ಟೈಸಿದೆ.


ದೆಹಲಿಯಲ್ಲಿ ಈ ಬಾರಿ ೫೪.೯೭ರಷ್ಟು ಮತದಾನವಾಗಿದೆ. ಮೇಲು ನೋಟಕ್ಕೆ ಯಾವ ಪಕ್ಷಗಳಾದರೂ ಅಧಿಕಾರ ಹಿಡಿಯ ಬಹುದೆಂಬ ವಾತಾವರಣವಿದ್ದರೂ ಕೂಡಾ ಆಮ್ ಆದ್ಮಿಗೇ ಆ ಅವಕಾಶ ಹೆಚ್ಚಾಗಿದೆ ಎಂಬುದನ್ನು ಚುನಾವಣೋತ್ತರ ಸಮೀಕ್ಷೆಗಳು ಧ್ವನಿಸುತ್ತಿವೆ. ಆದರೆ ಆ ಗೆಲುವು ಈ ಹಿಂದಿನ ಚುನಾವಣೆಯಷ್ಟು ಸಲೀಸಾಗಿಲ್ಲ ಅನ್ನೋದನ್ನೂ ಅಲ್ಲಗಳೆಯುವಂತಿಲ್ಲ. ಯಾಕೆಂದರೆ, ದೆಹಲಿಯಲ್ಲಿಯೂ ಅಧಿಕಾರವನ್ನು ಕಬ್ಜ ಮಾಡಿಕೊಳ್ಳಲು ವರ್ಷಾಂತರಗಳಿಂದ ಬಿಜೆಪಿ ನಾಯಕರು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಈ ಬಾರಿ ಅದರಲ್ಲಿ ಯಶ ಕಾಣುವ ಭರವಸೆಯೂ ಅವರಲ್ಲಿದೆ. ಆದರೆ ಅದೆಲ್ಲವನ್ನೂ ಮೀರಿಕೊಂಡು ಕೇಜ್ರಿವಾಲ್ ಪರವಾದ ಅಲೆಯೊಂದು ದೆಹಲಿಯಲ್ಲಿನ್ನೂ ಚಾಲ್ತಿಯಲ್ಲಿದೆ.
ಯುಪಿಎ ಸರ್ಕಾರ ಅಧಿಕಾರದಲ್ಲಿರುವಾಗ ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಹೋರಾಟ ಹುಟ್ಟು ಹಾಕಿದ್ದರಲ್ಲಾ? ಅದರ ಪ್ರಭೆಯಲ್ಲಿಯೇ ಹುಟ್ಟಿಕೊಂಡಿದ್ದ ಪಕ್ಷ ಆಮ್ ಆದ್ಮಿ. ಆ ಅಲೆಯಲ್ಲಿ ದೆಹಲಿ ವಿಧಾನ ಸಭಾ ಚುನಾವಣಾ ಅಖಾಡಕ್ಕಿಳಿದಿದ್ದ ಆಮ್ ಆದ್ಮಿ ಪಕ್ಷಕ್ಕೆ ಅಭೂತಪೂರ್ವವಾದ ಗೆಲುವು ದಕ್ಕಿತ್ತು. ನಂತರ ೨೦೧೫ರ ಚುನಾವಣೆಯಲ್ಲಿಯೂ ಕೇಜ್ರಿವಾಲ್ ಅಧಿಕಾರ ಹಿಡಿದಿದ್ದರು. ಆ ನಂತರದಲ್ಲಿ ಶಿಕ್ಷಣ ರಂಗವೂ ಸೇರಿದಂತೆ ನಾನಾ ಸ್ವರೂಪದಲ್ಲಿ ಕೇಜ್ರಿವಾಲ್ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದಾರೆ. ಆದರೆ ಬಿಜೆಪಿ ಪಕ್ಷ ಮಾತ್ರ ಕೇಜ್ರಿವಾಲ್‌ರನ್ನು ಅವರ ಕೆಮ್ಮು ದಮ್ಮಿನ ಕಾರಣಕ್ಕೆ ಅಸಮರ್ಥ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಹಾರ ನಡೆಸುತ್ತಾ ಬಂದಿದೆ. ಇದೆಲ್ಲದರಾಚೆಗೆ ದೆಹಲಿಯ ಮಧ್ಯಮ ವರ್ಗದ ಮತದಾರರು ಕೇಜ್ರಿವಾಲ್ ಅವರತ್ತ ಒಲವು ಹೊಂದಿದ್ದಾರೆ. ಅದುವೇ ಅವರನ್ನು ಮತ್ತೆ ದೆಹಲಿ ಮುಖ್ಯಮಂತ್ರಿಯನ್ನಾಗಿಸೋ ಲಕ್ಷಣಗಳೇ ಸಮೀಕ್ಷೆಗಳ ಫಲಿತಾಂಶಗಳಲ್ಲಿ ಕಾಣಿಸುತ್ತಿದೆ.

[adning id="4492"]

LEAVE A REPLY

Please enter your comment!
Please enter your name here