ಶಿವಾಜಿ ಸುರತ್ಕಲ್: ರಣಗಿರಿ ರಹಸ್ಯದ ರಣರೋಚಕ ಟ್ರೇಲರ್!

[adning id="4492"]

ಮೇಶ್ ಅರವಿಂದ್ ಪ್ರಧಾನ ಪಾತ್ರದಲ್ಲಿ, ಅತ್ಯಂತ ವಿಶಿಷ್ಟವಾದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವ ಚಿತ್ರ ಶಿವಾಜಿ ಸುರತ್ಕಲ್. ಈ ವರ್ಷದ ಬಹು ನಿರೀಕ್ಷಿತ ಚಿತ್ರವಾಗಿ ಬಿಂಬಿಸಲ್ಪಟ್ಟಿರುವ ಈ ಚಿತ್ರ ಇದೇ ತಿಂಗಳ ೨೧ರಂದು ತೆರೆಗಾಣಲಿದೆ. ಇನ್ನೇನು ಬಿಡುಗಡೆಗೆ ವಾರಗಳಷ್ಟೇ ಬಾಕಿ ಉಳಿದುರುವಾಗ ರಣಗಿರಿ ರಹಸ್ಯದ ರಣರೋಚಕ ಚಹರೆಗಳನ್ನು ತೆರೆದಿಡುವ ಟ್ರೇಲರ್ ಬಿಡುಗಡೆಯಾಗಿದೆ. ಒಂದು ಬಂಗಲೆ, ಅದರೊಳಗೆ ಪ್ರತಿಷ್ಠಾಪಿತಗೊಂಡಿರೋ ಭಯಾನಕತೆಯನ್ನು ಬಚ್ಚಿಟ್ಟುಕೊಂಡಿರೋ ವಾತಾವರಣ, ಅಲ್ಲೊಂದು ಕೊಲೆ ಮತ್ತು ಅದನ್ನು ಬೆಂಬಿದ್ದು ಸಾಗೋ ಕಥಾ ನಾಯಕ… ಇವಿಷ್ಟು ದೃಷ್ಯಗಳೊಂದಿಗೆ ಎಂಥವರ ಎದೆಯಲ್ಲಿಯೂ ಕುತೂಹಲದ ಛಳುಕು ಹುಟ್ಟುವಂತೆ ಈ ಟ್ರೇಲರ್ ಮೂಡಿ ಬಂದಿದೆ.


ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿರುವ ಶಿವಾಜಿ ಸುರತ್ಕಲ್ ಚಿತ್ರ ಒಂದರೆಕ್ಷಣವು ಅತ್ತಿತ್ತ ಕದಲಲು ಬಿಡದಂತೆ ಪ್ರೇಕ್ಷಕರನ್ನು ಹಿಡಿದಿಟುವಂಥಾ ರೋಚಕ ಪತ್ತೇದಾರಿ ಕಥಾನಕವನ್ನೊಳಗೊಂಡಿದೆ. ಅಷ್ಟಕ್ಕೂ ಕನ್ನಡಯದಲ್ಲಿ ಇತ್ತೀಚೆಗೆ ಪತ್ತೇದಾರಿ ಸಿನಿಮಾಗಳ ಸಂಖ್ಯೆಯೇ ಕಡಿಮೆಯಾಗಿದೆ. ಆದರೆ ಅದಕ್ಕಾಗಿ ಕಾತರಿಸೋ ದೊಡ್ಡ ಪ್ರೇಕ್ಷಕ ವರ್ಗವೇ ಇಲ್ಲಿದೆ. ಅವರೆಲ್ಲನ್ನು ತಣಿಸುತ್ತಲೇ ಪ್ರೇಕ್ಷಕರಿಗೆಲ್ಲ ಹೊಸಾ ಕಥೆಯ ಸವಿಯುಣ್ಣಿಸುವಂತೆ ಶಿವಾಜಿ ಸುರತ್ಕಲ್ ಮೂಡಿ ಬಂದಿದೆ ಅನ್ನೋದಕ್ಕೆ ಈ ಟ್ರೇಕಲರ್ ಸಾಕ್ಷಿಯಂತಿದೆ. ಕೆಲವೇ ನಿಮಿಷಗಳ ಟ್ರೇಲರ‍್ನಲ್ಲಿರೋ ತೀವ್ರತೆ ನೋಡಿದರೆ ಪ್ರತಿಯೊಬ್ಬರಿಗೂ ಈ ಚಿತ್ರವನ್ನು ನೋಡಲೇ ಬೇಕೆಂಬ ಬಯಕೆ ಮೂಡಿಕೊಳ್ಳುವಂತಿದೆ.


ರಮೇಶ್ ಅರವಿಂದ್ ಪಾಲಿಗೆ ಶಿವಾಜಿ ಸುರತ್ಕಲ್ ಮಹತ್ವದ ಚಿತ್ರ. ಇದು ಅವರ ವೃತ್ತಿ ಬದುಕಿನ ನೂರಾ ಒಂದನೇ ಚಿತ್ರವೂ ಹೌದು. ಇದಕ್ಕಾಗಿ ಅವರು ಒಂದು ವಿಶೇಷವಾದ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ರಮೇಶ್ ಈ ವರೆಗಿನ ಅಷ್ಟೂ ಚಿತ್ರಗಳನ್ನು ಮೀರಿಸುವಂಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಮಿಯಾಗಿ, ತ್ಯಾಗಿಯಾಗಿ ಅಂಥಾ ಪಾತ್ರಗಳ ಮೂಲಕವೇ ಅಭಿಮಾನಿಗಳಿಗೆ ಇಷ್ಟವಾಗಿದ್ದ ರಮೇಶ್ ಅವರ ಗೆಟಪ್ಪು ಶಿವಾಜಿ ಸುರತ್ಕಲ್‌ಗಾಗಿ ಬದಲಾಗಿದೆ. ಅದಕ್ಕೆ ತಕ್ಕುದಾದ ಪಾತ್ರವೇ ಅವರಿಗಿಲ್ಲಿ ದಕ್ಕಿದೆ. ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿರೋ ಈ ಚಿತ್ರಕ್ಕೆ ದಿ ಕೇಸ್ ಆಫ್ ರಣಗಿರಿ ರಹಸ್ಯ ಎಂಬ ಅಡಿಬರಹವಿದೆ. ಆ ಅಸಲೀ ರಹಸ್ಯ ಏನೆಂಬುದು ಬಯಲಾಗೋದಕ್ಕೆ ವಾರಗಳ ಕಾಲ ಕಾಯಲೇ ಬೇಕಿದೆ.

[adning id="4492"]

LEAVE A REPLY

Please enter your comment!
Please enter your name here