ಮೌನಂ ಟ್ರೇಲರ್: ನಿಶ್ಯಬ್ಧದಲ್ಲಿ ಮೊಳಗಿತು ಥ್ರಿಲ್ಲರ್ ಸದ್ದು!

[adning id="4492"]

ರಾಜ್ ಪಂಡಿತ್ ನಿರ್ದೇಶನದ ಮೌನಂ ಚಿತ್ರದ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಂಚ್ ಮಾಡಿದ್ದಾರೆ. ಇದೇ ತಿಂಗಳು ಬಿಡುಗಡೆಗೊಳ್ಳುತ್ತಿರುವ ಮೌನಂ ಈಗಾಗಲೇ ಸಕಾರಾತ್ಮಕವಾಗಿ ಊರು ತುಂಬಾ ಸಖತ್ತಾಗಿಯೇ ಸದ್ದು ಮಾಡುತ್ತಿದೆ. ನಿಶ್ಯಬ್ಧದಲ್ಲಿಯೇ ಅಚ್ಚರಿಗಳ ಸದ್ದು ಬಚ್ಚಿಟ್ಟುಕೊಂಡಂತಿರೋ ಈ ಸಿನಿಮಾ ಈ ವರ್ಷಾರಂಭದ ಹೊಸಾ ಅಲೆಯ ಚಿತ್ರವಾಗಿಯೂ ಬಿಂಬಿತವಾಗಿದೆ. ಇದರ ಬಗ್ಗೆ ಈ ವರೆಗೂ ಯಾವ್ಯಾವ ಥರದಲ್ಲಿ ಕೌತುಕ ಮೂಡಿಕೊಂಡಿತ್ತೋ ಅದೆಲ್ಲವನ್ನು ಮತ್ತಷ್ಟು ತೀವ್ರವಾಗಿಸುವಂಥಾ ಟ್ರೇಲರ್ ಇದೀಗ ದರ್ಶನ್ ಕಡೆಯಿಂದ ಬಿಡುಗಡೆಗೊಂಡಿದೆ.


ಇದು ಸೈಕಾಲಾಜಿಕಲ್ ಥ್ರಿಲ್ಲರ್ ಜಾನರಿನ ಚಿತ್ರ. ಆದರೆ ಆ ಚೌಕಟ್ಟನ್ನು ಮೀರಿಕೊಂಡು ಮೌನಂ ರೂಪುಗೊಂಡಿದೆ ಅನ್ನೋದಕ್ಕೆ ಸಾಕ್ಷಿಯಂತೆ ಈ ಟ್ರೇಲರ್ ಮೂಡಿ ಬಂದಿದೆ. ತಂದೆ ಮಗನ ಬಾಂಧವ್ಯ, ಯೌವನದ ಹುಮ್ಮಸ್ಸಿನಿಂದ ಯಾವುದೋ ಭೀಕರ ಪಥದತ್ತ ಸರಿದುಕೊಳ್ಳುವ ಯುವ ಜನತೆಯ ಕಥೆಯ ಹೊಳಹಿನೊಂದಿಗೇ ಬೇರ‍್ಯಾವುದೋ ಕ್ರಿಯಾಶೀಲ ಹಾದಿಯಲ್ಲಿ ಚಲಿಸಿದಂತಿರೋ ಈ ಸಿನಿಮಾದ ಕಥೆಯ ಬಗ್ಗೆಯಂತೂ ನೋಡುಗರೆಲ್ಲರಿಗೂ ಕುತೂಹಲ ಮೂಡಿಕೊಂಡಿದೆ. ಈ ಚೆಂದದ ಟ್ರೇಲರ್ ಲಾಂಚ್ ಮಾಡಿರುವ ದರ್ಶನ್ ಅದನ್ನು ಮೆಚ್ಚಿಕೊಂಡೇ ಸಿನಿಮಾ ತಂಡಕ್ಕೆ ಗೆಲುವು ಸಿಕ್ಕಲೆಂದು ಹಾರೈಸಿದ್ದಾರೆ.


ಹಿರಿಯ ನಟ ಅವಿನಾಶ್ ಈ ಚಿತ್ರದಲ್ಲಿ ನಾಯಕನ ತಂದೆಯಾಗಿ ನಟಿಸಿದ್ದಾರೆ. ಈ ವರೆಗೆ ಮೂರು ದಶಕಗಳಿಗೂ ಹೆಚ್ಚು ಕಾಲದಿಂದಲೂ ಅವರು ನಾನಾ ಸ್ವರೂಪದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದರೆ ಅವರಿಗಿಲ್ಲಿ ಸಿಕ್ಕಿರೋ ಪಾತ್ರ ಖುದ್ದು ಅವರಿಗೇ ಹೊಸತೆನ್ನಿಸಿದೆಯಂತೆ. ಯಾಕೆಂದರೆ, ಇಲ್ಲಿ ಅವರು ಐದಾರು ಶೇಡುಗಳಿರೋ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರ ಮಾತ್ರವಲ್ಲದೇ ಪ್ರತೀ ಪಾತ್ರಗಳನ್ನೂ ನಿರ್ದೇಶಕರು ಅದೇ ರೀತಿ ವಿಶೇಷತೆಗಳನ್ನು ತುಂಬಿ ರೂಪಿಸಿದ್ದಾರಂತೆ. ಬಾಲಾಜಿ ಶರ್ಮಾ ಮತ್ತು ಮಯೂರಿ ಇಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಈ ಟ್ರೇಲರ್‌ನಲ್ಲಿ ಮಯೂರಿ ಅದೆಷ್ಟು ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆಂಬ ಸುಳಿವೂ ಜಾಹೀರಾಗಿದೆ.

[adning id="4492"]

LEAVE A REPLY

Please enter your comment!
Please enter your name here