ದಾಖಲಾರ್ಹ ಮೆಚ್ಚುಗೆ ಗಳಿಸಿಕೊಂಡ ದಿಯಾ!

[adning id="4492"]

ಮೆಚ್ಚಿಕೊಳ್ಳದೇ ಬೇರೆ ದಾರಿಯೇ ಇಲ್ಲ ಎಂಬಂಥಾ ತುರ್ತು ಭಾವ ಹೊಮ್ಮಿಸೋ ಟ್ರೇಲರ್, ಟೀಸರ್ ಮತ್ತು ಪೋಸ್ಟರ್‌ಗಳು ಆಗಾಗ ಭಾರೀ ಸುದ್ದಿಯಾಗುತ್ತಿರುತ್ತವೆ. ಇಂಥವುಗಳನ್ನು ಪ್ರೇಕ್ಷಕರು ಮಾತ್ರವಲ್ಲದೆ ನಟ ನಟಿಯರು, ನಿರ್ದೇಶಕರೂ ಕೂಡಾ ಮುಕ್ತ ಕಂಠದಿಂದಲೇ ಮೆಚ್ಚಿಕೊಂಡು ಮಾತಾಡುತ್ತಾರೆ. ಹೀಗೆ ಸಾರ್ವತ್ರಿಕವಾಗಿ ಎಲ್ಲರ ಗಮನ ಸೆಳೆಯ ಬಲ್ಲಂಥಾ ಸಿನಿಮಾಗಳು ಸಿದ್ಧಗೊಳ್ಳುವುದೇ ವಿರಳ. ಅಂಥಾ ವಿರಳ ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಳ್ಳುವಂಥಾ ಸಿನಿಮಾ ದಿಯಾ. ಈಗಾಗಲೇ ಭಿನ್ನ ಛಾಯೆಯನ್ನು ಹೊಮ್ಮಿಸುವ ಮೂಲಕ ಭಾರೀ ನಿರೀಕ್ಷೆ ಕುದುರಿಸಿಕೊಂಡಿರುವ ಈ ಚಿತ್ರ ಈ ವಾರ ಬಿಡುಗಡೆಗೊಳ್ಳುತ್ತಿದೆ.


ಅಷ್ಟಕ್ಕೂ ಹೊಸಾ ಬಗೆಯದ್ದೊಂದು ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ಗೆದ್ದ ನಿರ್ದೇಶಕ ಮತ್ತೊಂದು ಚಿತ್ರ ಮಾಡುತ್ತಾರೆಂದರೆ ಆ ಬಗ್ಗೆ ಅಗಾಧ ಪ್ರಮಾಣದಲ್ಲಿ ನಿರೀಕ್ಷೆಗಳು ಮೂಡಿಕೊಳ್ಳೋದು ಸಹಜವೇ. ದಿಯಾ ಬಿಡುಗಡೆಗೆ ಇನ್ನು ಕೆಲವೇ ದಿನಗಳಿರುವಾಗ ಈ ಪಾಟಿ ಸದ್ದು ಮಾಡುತ್ತಿರೋದರ ಹಿಂದೆಯೂ ಅಂಥಾದ್ದೊಂದು ಸಮ್ಮೋಹಕ ಗೆಲುವಿನ ಹಿಮ್ಮೇಳವಿದೆ. ವರ್ಷಾಂತರಗಳ ಹಿಂದೆ ೬-೫=೨ ಅಂತೊಂದು ಸಿನಿಮಾ ತೆರೆಗಂಡಿತ್ತಲ್ಲಾ? ಯಾವುದೆಂದರೆ ಯಾವ ಪ್ರಚಾರವೂ ಇಲ್ಲದೆ ಏಕಾಏಕಿ ತೆರೆಗಂಡಿದ್ದ ಈ ಚಿತ್ರ ಚರಿತ್ರಾರ್ತ ಗೆಲುವು ದಕ್ಕಿಸಿಕೊಂಡಿತ್ತು.


ಆ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಅಶೋಕ್ ಕೆ.ಎಸ್. ಈ ಸಿನಿಮಾ ತೆರೆಗಂಡಾಗ ನಿರ್ದೇಶಕರು ಸೇರಿದಂತೆ ಚಿತ್ರತಂಡದ ಯಾವ ಮಾಹಿತಿಗಳೂ ಇರಲಿಲ್ಲ. ಅದು ದೊಡ್ಡ ಮಟ್ಟದಲ್ಲಿ ಗೆಲುವು ಕಾಣುತ್ತಲೇ ಚಿತ್ರತಂಡದ ಬಗ್ಗೆ ಒಂದೊಂದೇ ಮಾಹಿತಿಗಳು ಹೊರ ಬಿದ್ದಿದ್ದವು. ಎಲ್ಲ ಭಾಷೆಗಳವರೂ ತಿರುಗಿ ನೋಡುವಂಥಾ ಪ್ರಯೋಗ ಮಾಡಿ ಗೆದ್ದಿದ್ದ ಅಶೋಕ್ ಇದೀಗ ದಿಯಾ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆಂದರೆ ಆ ಬಗ್ಗೆ ಭರವಸೆ ಮೂಡಿಕೊಳ್ಳದಿರಲು ಸಾಧ್ಯವೇ ಇಲ್ಲ. ಅದನ್ನು ನಿಜವಾಗಿಸುವಂತೆಯೇ ಈ ಸಿನಿಮಾದ ಟ್ರೇಲರ್ ಪ್ರಸಿದ್ಧಿ ಪಡೆದುಕೊಂಡಿದೆ.


ಇದು ಮೂಡಿ ಬಂದಿರೋ ರೀತಿ ಎಂಥಾದ್ದಿದೆಯೆಂದರೆ, ಈ ಬಗ್ಗೆ ಕನ್ನಡ ಚಿತ್ರರಂಗದ ಮುಖ್ಯ ನಿರ್ದೇಶಕರುಗಳೆಲ್ಲ ಸಾಲು ಸಾಲಾಗಿ ಮೆಚ್ಚಿಕೊಂಡಿದ್ದಾರೆ. ರಾಜಕುಮಾರ ಖ್ಯಾತಿಯ ಸಂತೋಷ್ ಆನಂದರಾಮ್, ಪ್ರಶಾಂತ್ ನೀಲ್, ಪೈಲ್ವಾನ್ ಕೃಷ್ಣ, ಸಚಿನ್ ಬಿ ರವಿ, ಪವನ್ ಒಡೆಯರ್, ಪ್ರೀತಂ ಗುಬ್ಬಿ, ಸಿಂಪಲ್ ಸುನಿ, ಎ ಪಿ ಅರ್ಜುನ್ ಮುಂತಾದ ಅನೇಕ ನಿರ್ದೇಶಕರು ದಿಯಾ ಟ್ರೇಲರ್ ಅನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾಗೆ ಶುಭ ಕೋರಿದ್ದಾರೆ. ಈ ಮೂಲಕ ದಿಯಾ ಬಿಡುಗಡೆಯ ಹೊಸ್ತಿಲಲ್ಲಿಯೇ ದಾಖಲಾರ್ಹ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ಈ ಚಿತ್ರದಲ್ಲಿ ಪೃಥ್ವಿ ಅಂಬರ್, ಧೀಕ್ಷಿತ್ ಮತ್ತು ಖುಷಿ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here