ಪರಭಾಷಿಗರನ್ನೂ ಬೆರಗಾಗಿಸಲಿದೆಯಾ ಆಸಿಂಕೋಜಿಲ್ಲಾ?

[adning id="4492"]

ಹೆಚ್ಚೇನಲ್ಲ; ಈಗ್ಗೆ ಐದಾರು ವರ್ಷಗಳ ಹಿಂದೆ ಕನ್ನಡ ಚಿತ್ರಗಳ ಬಗ್ಗೆ ಪರಭಾಷಾ ಪ್ರೇಕ್ಷಕರಲ್ಲಿ ಅದೇಂಥಾ ತಾತ್ಸಾರ ಮನೋಭಾವ ಇತ್ತೆಂಬುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಅಂಥಾದ್ದೇ ಕಾಲ ಘಟ್ಟದಲ್ಲಿ ಸ್ವತಃ ಇಂಥಾ ತಾತ್ಸಾರದಿಂದ ಅವಮಾನಿತರಾದವರು ಪರಭಾಷಿಗರೇ ತಿರುಗಿ ನೋಡುವಂಥಾ ಸಿನಿಮಾ ಮಾಡ ಬೇಕೆಂಬ ಕೆಚ್ಚಿನೊಂದಿಗೆ ಹಲವಾರು ದಾಖಲಾರ್ಹ ಸಿನಿಮಾಗಳನ್ನು ಸೃಷ್ಟಿಸಿದ್ದಾರೆ. ಇಂದು ಬಿಡುಗಡೆಯಾಗಿರೋ ಆಸಿಂಕೋಜಿಲ್ಲ ಚಿತ್ರ ಜೀವ ಪಡೆದದ್ದರ ಹಿಂದೆಯೂ ಅಂಥಾದ್ದೇ ಒಂದು ಕಥೆಯಿದೆ.


ಶೀರ್ಷಿಕೆಯಿಂದಲೇ ಎಲ್ಲೆಡೆಯೂ ಕುತೂಹಲ ಹುಟ್ಟು ಹಾಕಿದ್ದ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಶಮನ್.  ಎಳವೆಯಿಂದಲೇ ಉಪೇಂದ್ರ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನದ ಪ್ರಭೆಯಲ್ಲಿಯೇ ಬೆಳೆದು ಬಂದಿದ್ದ ಶಮನ್ ಪಾಲಿಗೆ ಕನ್ನಡ ಚಿತ್ರರಣಂಗದ ಸ್ಥಿತಿಗತಿಗಳ ವಾಸ್ತವ ದರ್ಶನವಾದದ್ದು ಕೆಲಸದ ನಿಮಿತ್ತವಾಗಿ ಚೆನೈನಲ್ಲಿ ನೆಲೆಯೂರಬೇಕಾಗಿ ಬಂದಾಗಲೇ. ಅಲ್ಲಿನ ಮಂದಿ ಕನ್ನಡ ಚಿತ್ರಗಳೆಂದರೆ ಅಸಡ್ಡೆ ತೋರುತ್ತಾ ಗೇಲಿ ಮಾಡುತ್ತಿದ್ದರು. ಆಗೆಲ್ಲ ಕನ್ನಡದ ಹಲವಾರು ಸಿನಿಮಾಗಳನ್ನಿಟ್ಟುಕೊಂಡು ಅದರ ಬಗ್ಗೆ ತಮಿಳರಿಗೆ ಮನವರಿಕೆ ಮಾಡಿ ಕೊಡುತ್ತಿದ್ದ ಶಮನ್ ತಾನು ಅವರೆಲ್ಲರ ಬಾಯಿ ಮುಚ್ಚಿಸುವಂಥಾ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕೆಂಬ ಸಂಕಲ್ಪ ತೊಟ್ಟಿದ್ದರಂತೆ.


ತಮಿಳು ಮಂದಿ ಕನ್ನಡ ಚಿತ್ರಗಳಲ್ಲಿ ಹೊಸಾ ಬಗೆಯ ಕಥೆಗಳು ಹುಟ್ಟುತ್ತಿಲ್ಲ, ಒಂದೇ ಥರದ ಕಥೆಗಳನ್ನೇ ಮಗುಚಿ ಹಾಕಲಾಗುತ್ತದೆ ಎಂಬ ಅಭಿಪ್ರಾಯವನ್ನೇ ನಿಖರವಾಗಿ ಹೇಳುತ್ತಿದ್ದರಂತೆ. ಆದ್ದರಿಂದಲೇ ಯಾರೂ ಮುಟ್ಟದ ಕಥಾ ವಸ್ತುವೊಂದನ್ನು ಕೈಗೆತ್ತಿಕೊಂಡು, ಎಲ್ಲ ಭಾಷೆಯವರೂ ಬೆರಗಾಗುವಂಥಾ ಸಿನಿಮಾ ಮಾಡಬೇಕೆಂಬ ಉತ್ತೇಶದಿಂದಲೇ ಅವರು ಆಸಿಂಕೋಜಿಲ್ಲ ಎಂಬ ಕಥೆಯನ್ನು ಸಿದ್ಧಗೊಳಿಸಿದ್ದರು. ಆಸಿಂಕೋಜಿಲ್ಲ ಎಂಬ ಹೆಸರೇ ಅಪರಿಚಿತ. ಆದ್ದರಿಂದಲೇ ಅದರ ಬಗ್ಗೆ ಶುರುವಾತಿನಿಂದಲೂ ಕುತೂಹಲವಿದ್ದೇ ಇದೆ. ಇಂದು ಅದಕ್ಕೆಲ್ಲ ಕ್ಲೈಮ್ಯಾಕ್ಸ್ ಸಿಕ್ಕಿದೆ.

[adning id="4492"]

LEAVE A REPLY

Please enter your comment!
Please enter your name here