ಬಿಡುಗಡೆಯ ಹಾದಿಯಲ್ಲೇ ಬಯಲಾಯ್ತು ಕೊಡೆಮುರುಗನ ಪವಾಡ!

[adning id="4492"]

ಕೆ ಆರ್ ಕೆ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಕೆ ರವಿಕುಮಾರ್ ಮತ್ತು ಅಶೋಕ್ ಶಿರಾಲಿ ನಿರ್ಮಾಣ ಮಾಡಿರುವ ಚಿತ್ರ ಕೊಡೆಮುರುಗ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಮತ್ತು ಹಾಡೊಂದರ ಮೂಲಕ ಈ ಚಿತ್ರ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿರೋ ರೀತಿಯೇ ಅಚ್ಚರಿದಾಯಕವಾದದ್ದು. ಎಲ್ಲ ಸಿದ್ಧಸೂತ್ರಗಳಾಚೆಗೆ, ಹೊಸತನಕ್ಕೆ ಮಾತ್ರವೇ ಬದ್ಧವಾಗಿ ರೂಪುಗೊಂಡಿರುವ ಈ ಚಿತ್ರವೀಗ ಬಿಡುಗಡೆಯ ಹಾದಿಯಲ್ಲಿದೆ. ಬಹುಶಃ ಈ ವರ್ಷದಲ್ಲಿ ಕನ್ನಡ ಪ್ರೇಕ್ಷಕರ ಪಾಲಿಗೆ ದಕ್ಕುವ ಅತ್ಯಂತ ಅಪರೂಪದ ಚಿತ್ರವಾಗಿ ಕೊಡೆಮುರುಗ ದಾಖಲಾಗಲಿದೆ. ಈ ಸಿನಿಮಾ ಇದೀಗ ಎಲ್ಲ ಥರದಲ್ಲಿಯೇ ಕ್ರೇಜ್ ಸೃಷ್ಟಿಸಿದೆ. ಇದು ತನ್ನ ಕಂಟೆಂಟಿನ ಬಲದಿಂದಲೇ ಸಿನಿಮಾ ಪ್ರೇಮಿ ನಿರ್ಮಾಪಕರನ್ನು ದಕ್ಕಿಸಿಕೊಂಡ ಕಥೆ ನಿಜಕ್ಕೂ ಪವಾಡದಂತಿದೆ!


ಯಾವುದೇ ಸಿನಿಮಾ ಮಾಡಲು ಮುಂದಾದಾಗಲೂ ನಿರ್ಮಾಪಕರನ್ನು ಹುಡುಕೋದರಲ್ಲಿಯೇ ಹೈರಾಣಾಗಿ ಬಿಡುವಂಥಾ ವಾತಾವರಣವಿದೆ. ಈ ಚಿತ್ರದ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ ಈ ಸಿನಿಮಾವನ್ನು ಅಚ್ಚುಕಟ್ಟಾಗಿ, ಹೊಸತನದಿಂದ ರೂಪಿಸುವ ಮೂಲಕವೇ ನಿರ್ಮಾಪಕರನ್ನು ಸೆಳೆದುಕೊಂಡಿದ್ದೊಂದು ಸಾಹಸ. ನಿರ್ಮಾಪಕ ಕೆ ರವಿ ಕುಮಾರ್ ಈ ಹಿಂದೆ ಮಮ್ಮಿ ಎಂಬ ಸೂಪರ್ ಹಿಟ್ ಸಿನಿಮಾವನ್ನು ನಿರ್ಮಾಣ ಮಾಡಿದ್ದವರು. ಆ ಚಿತ್ರದ ಯಶಸ್ಸಿನ ನಂತರದಲ್ಲಿ ಅವರು ತೀರಾ ಹೊಸದೆನ್ನಿಸುವ ಕಥೆ ಸಿಕ್ಕರೆ ನಿರ್ಮಾಣ ಮಾಡುವ ನಿರ್ಧಾರದೊಂದಿಗೆ ಹುಡುಕಾಟದಲ್ಲಿದ್ದರು.


ಅವರ ಮುಂದೆ ಸಾಕಷ್ಟು ಕಥೆಗಳು ಬಂದಿದ್ದವಾದರೂ ಅವ್ಯಾವುವೂ ಅವರಿಗಿಷ್ಟವಾಗಿರಲಿಲ್ಲ. ಅದೇನೇ ಆದದೂ ಭಿನ್ನ ಕಥೆ ಸಿಕ್ಕಿದರೇನೇ ನಿರ್ಮಾಣ ಮಾಡುವ ಶಪಥದೊಂದಿಗೆ ಮುಂದುವರೆಯುತ್ತಿದ್ದ ರವಿಕುಮಾರ್ ಅವರಿಗೆ ಕೊಡೆಮುರುಗ ಚಿತ್ರದ ಟ್ರೇಲರ್ ಕಣ್ಣಿಗೆ ಬಿದ್ದಿತ್ತು. ಇದನ್ನು ನೋಡಿ ಅದ್ಯಾವ ಥರ ಖುಷಿಗೊಂಡಿದ್ದರೆಂದರೆ ತಕ್ಷಣವೇ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದರನ್ನು ಸಂಪರ್ಕಿಸಿ ಈ ಬಗ್ಗೆ ಮಾತುಕತೆ ನಡೆಸಿದ್ದರಂತೆ. ಆ ಕ್ಷಣದಲ್ಲಿಯೇ ಕೊಡೆಮುರುಗನನ್ನು ತಾವೇ ನಿಮ,ಆಣ ಮಾಡೋದಾಗಿ ಭರವಸೆ ನೀಡಿದ್ದ ರವಿ ಕುಮಾರ್ ಅವರಿಗೆ ಅವರ ಸ್ನೇಹಿತ ಅಶೋಕ್ ಶಿರಾಲಿ ಜೊತೆಯಾಗಿದ್ದರು. ಅವರಿಬ್ಬರೂ ಸೇರಿಕೊಂಡೇ ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.


ಇದೀಗ ಕೊಡೆಮುರುಗನತ್ತ ನಿಗಿ ನಿಗಿ ಕುತೂಹಲ ಪಡಿಮೂಡಿಕೊಂಡಿದೆ. ಇದೇ ಪ್ರಭೆಯಲ್ಲಿ ಉಳಿಕೆ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಮಾರ್ಚ್ ತಿಂಗಳಲ್ಲಿ ತೆರೆಗೆ ಬರುವ ಸನ್ನಾಹದಲ್ಲಿದೆ. ಅಂದಹಾಗೆ ಕೊಡೆಮುರುಗ ಚಿತ್ರದ ತುಂಬಾ ವಿಶೇಷತೆಗಳ ಸಂತೆಯೇ ನೆರೆದಿದೆ. ಇಲ್ಲಿ ಹೀರೋಗಿರಿಯ ವೈಭವೀಕರಣವಿಲ್ಲ. ಸಾಮಾನ್ಯವಾಗಿ ಪಾಸಿಟಿವ್ ಪಾತ್ರಗಳನ್ನು ಟೈಟಲ್ ಆಗಿ ಆರಿಸಲಾಗುತ್ತದೆ. ಆದರಿಲ್ಲಿ ವಿಲನ್ ಶೇಡಿನ ಪಾತ್ರದ ಹೆಸರೇ ಸಿನಿಮಾ ಶೀರ್ಷಿಕೆಯಾಗಿದೆ. ಇಲ್ಲಿನ ಪಾತ್ರಗಳು ವೈಭವೀಕರಣವಿಲ್ಲದೇ ತನ್ನನ್ನು ತಾನೇ ವಿಮರ್ಶೆ ಮಾಡಿಕೊಳ್ಳುವ ಗುಣವನ್ನೊಳಗೊಂಡಿವೆ. ಇಂಥಾ ಹಲವಾರು ವಿಶೇಷತೆಗಳ ಆಗರದಂತಿರೋ ಕೊಡೆಮುರುಗ ಮಾರ್ಚ್ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಪ್ರತ್ಯಕ್ಷನಾಗೋ ಸಾಧ್ಯತೆಗಳಿವೆ

[adning id="4492"]

LEAVE A REPLY

Please enter your comment!
Please enter your name here