ಬಿಚ್ಚುಗತ್ತಿ ಝಳಪಿಸಲು ನಾದಬ್ರಹ್ಮ ಕಾರಣ!

[adning id="4492"]

ರಾಜವರ್ಧನ್ ನಾಯಕನಾಗಿ ನಟಿಸಿರುವ ಬಿಚ್ಚುಗತ್ತಿ ಭರಮಣ್ಣ ನಾಯಕ ಚಿತ್ರವೀಗ ಬಿಡುಗಡೆಗೆ ರೆಡಿಯಾಗಿದೆ. ಹರಿ ಸಂತೋಷ್ ನಿರ್ದೇಶನ ಮಾಡಿರೋ ಈ ಐತಿಹಾಸಿಕ ಕಥಾ ಹಂದರ ಚಿತ್ರ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ರಾಜವರ್ಧನ್ ಸಾಕಷ್ಟು ಶ್ರಮವಹಿಸಿ ಭರಮಣ್ಣ ನಾಯಕನ ಪಾತ್ರಕ್ಕೆ ಜೀವ ತುಂಬಿರೋ ಈ ಸಿನಿಮಾ ಶುರುವಾಗಿದ್ದರ ಹಿಂದೆ ನಾದಬ್ರಹ್ಮ ಹಂಸಲೇಖಾರ ಪ್ರೀತಿ, ಕಾಳಜಿಗಳಿವೆ. ಅವರ ಮಾರ್ಗದರ್ಶನದಲ್ಲಿಯೇ ಈ ಚಿತ್ರ ಮೊದಲ ಹೆಜ್ಜೆ ಎತ್ತಿಟ್ಟು ಇದೀಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಜ್ಜುಗೊಂಡಿದೆ.


ಈ ಚಿತ್ರವನ್ನು ನಿರ್ಮಾಣ ಮಾಡಿರುವುದು ಚಿತ್ರದುರ್ಗ ಮೂಲದ ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ಸಂಸ್ಥೆ. ಒಂದೊಳ್ಳೆ ಸಿನಿಮಾ ಮಾಡಬೇಕೆಂಬ ನಿರ್ಧಾರ ತಳೆದಿದ್ದ ಈ ಸಂಸ್ಥೆಯ ಮುಖ್ಯಸ್ಥರು ಹಂಸಲೇಖರನ್ನು ಸಂಪರ್ಕಿಸಿದಾಗ ಅವರೇ ಬಿ. ಎಲ್ ವೇಣು ಬರೆದಿದ್ದ ಬಿಚ್ಚುಗತ್ತಿ ಭರಮಣ್ಣ ನಾಯಕ ಕೃತಿಯನ್ನು ಸಿನಿಮಾ ಮಾಡುವ ಸಲಹೆ ನೀಡಿದ್ದರಂತೆ. ಹಂಸಲೇಖ ಸಂಗೀತ, ಸಾಹಿತ್ಯ ಮಾತ್ರವಲ್ಲದೇ ನಾಡು ನುಡಿಗಳ ಬಗ್ಗೆಯೂ ಅಪಾರ ಜ್ಞಾನ, ಕಾಳಜಿ ಹೊಂದಿರುವವರು. ದೇಸೀ ಘಮಲಿನ ಅಭಿರುಚಿ ಹೊಂದಿರುವ ನಾದಬ್ರಹ್ಮನ ಮಾತಿನಿಂದ ಪ್ರೇರಿತರಾಗಿದ್ದ ಈ ಸಂಸ್ಥೆಯ ಮುಖ್ಯಸ್ಥರು ಬೇರೇನೂ ಯೋಚಿಸದೆ ಮುಂದಡಿಯಿಟ್ಟ ಪರಿಣಾಮವಾಗಿಯೇ ಬಿಚ್ಚುಗತ್ತಿ ಭರಮಣ್ಣ ನಾಯಕ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು.


ಕಳೆದ ಜನವರಿ ತಿಂಗಳಲ್ಲಿ ಬಿಚ್ಚುತ್ತಿ ಭರಮಣ್ಣ ನಾಯಕ ಚಿತ್ರದ ಚಿತ್ರೀಕರಣ ಚಾಲೂ ಆಗಿತ್ತು. ಸತತವಾಗಿ ಇಡೀ ತಂಡ ಶ್ರಮವಹಿಸಿ ಕಾರ್ಯ ನಿರ್ವಹಿಸಿದ ಫಲವಾಗಿ ಇದೀಗ ಸದರಿ ಚಿತ್ರ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿದೆ. ಇದೀಗ ಹಾಡುಗಳೆಲ್ಲವೂ ತಯಾರಾಗಿವೆ. ಸದ್ಯದಲ್ಲಿಯೇ ಹಾಡುಗಳನ್ನು ಲೋಕಾರ್ಪಣೆಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಅದಾದ ತಕ್ಷಣವೇ ಬಿಚ್ಚುಗತ್ತಿ ಭರಮಣ್ಣ ನಾಯಕನ ಟೀಸರ್ ಹೊರ ಬೀಳಲಿದೆ. ಅದಾದ ನಂತರದಲ್ಲಿ ಈ ಚಿತ್ರ ತೆರೆಗಾಣುವ ದಿನಾಂಕವೂ ಅನೌನ್ಸ್ ಆಗಲಿದೆ.

[adning id="4492"]

LEAVE A REPLY

Please enter your comment!
Please enter your name here