ಇರಾನ್ ಆಕ್ರೋಶಕ್ಕೆ ಬೆಚ್ಚಿದ ದೊಡ್ಡಣ್ಣ!

[adning id="4492"]

ಗತ್ತಿನ ಇತರೇ ರಾಷ್ಟ್ರಗಳ ಆಂತರಿಕ ವಿದ್ಯಮಾನಗಳಲ್ಲಿ ಮಧ್ಯಪ್ರವೇಶಿಸುತ್ತಾ ದೊಡ್ಡಣ್ಣನೆಂಬ ದೊಡ್ಡಸ್ತಿಕೆಯಿಂದ ಮೆರೆಯುತ್ತಾ ಬಂದಿರುವ ರಾಷ್ಟ್ರ ಅಮೆರಿಕಾ. ಇದೀಗ ಇರಾನ್‌ನಲ್ಲಿಯೂ ಅಂಥಾದ್ದೇ ಕ್ರಮವನ್ನು ಅಮೆರಿಕಾ ಅನುಸರಿಸುತ್ತಿದೆ. ಇರಾನಿನ ರಿಪಬ್ಲಿಕ್ ಕ್ವಾಡ್ಸ್ ಕಮಾಂಡರ್ ಖಾಸಿಂ ಸುಲೇಮಾನಿಯನ್ನು ಬಾಗ್ದಾದ್‌ನಲ್ಲಿ ಅಮೆರಿಕನ್ ವಾಯುಪಡೆ ಹತ್ಯೆ ಮಾಡಿದೆ. ಇದರಿಂದಾಗಿ ಇಡೀ ಇರಾಕಿನ ತುಂಬೆಲ್ಲ ಪ್ರಕ್ಷುಬ್ಧ ವಾತಾವರಣ ಮಡುಗಟ್ಟಿಕೊಂಡಿದೆ. ಇರಾನ್ ಪಡೆ ಪ್ರತಿಕಾರದ ಪ್ರತಿಜ್ಞೆ ಮಾಡಿರೋದರಿಂದ ಬೆಚ್ಚಿಬಿದ್ದಿರುವ ಅಮೆರಿಕಾ ಇರಾನ್, ಇರಾಕ್‌ಗಳಲ್ಲಿ ನೆಲೆಸಿರುವ ಅಮೆರಿಕನ್ನರೆಲ್ಲ ಈ ಕೂಡಲೇ ಸ್ವದೇಶಕ್ಕೆ ಮರಳಿ ಪಾರಾಗುವಂತೆ ತಾಕೀತು ಮಾಡಿದೆ.


ಈಗ ಅಮೆರಿಕ ವಾಯುಸೇನೆ ಹೊಡೆದುರುಳಿಸಿರುವ ಖಾಸಿಂ ಸಲೇಮಾನಿ ಇರಾನಿನ ಜನಪ್ರಿಯ ವ್ಯಕ್ತಿ. ಅಂಥಾ ಖಾಸಿಂನನ್ನು ಹತ್ಯೆ ಮಾಡಿದ್ದರ ವಿರುದ್ಧ ಇರಾನ್ ಸೇನೆ ಸೇಡು ತೀರಿಸಿಕೊಳ್ಳಲು ತಹತಹಿಸುತ್ತಿದೆ. ಇಂಥಾ ಹೊತ್ತಿನಲ್ಲಿ ಈ ಪ್ರದೇಶದಲ್ಲಿರುವ ಅಮೆರಿಕನ್ನರನ್ನೂ ಕೂಡಾ ಇರಾನ್ ಸೇನೆ ಹೊಡೆದುರುಳಿಸೋದು ಗ್ಯಾರೆಂಟಿ ಎಂದರಿತಿರುವ ಅಮೆರಿಕಾ ಅಲ್ಲಿ ನೆಲೆಸಿರೋ ತನ್ನ  ಪ್ರಜೆಗಳೆಲ್ಲ ಈಗಿನಿಂದಲೇ ವಾಯು ಮಾರ್ಗದ ಮೂಲಕ ಸ್ವದೇಶಕ್ಕೆ ಮರಳುವಂತೆ ಆಜ್ಞಾಪಿಸಿದೆ.


ಇರಾನ್ ನಾಯಕ ಅಲಿ ಅಮೆರಿಕದ ಕ್ರಮವನ್ನು ಖಂಡಿಸಿದ್ದಾರಲ್ಲದೇ ಇದೊಂದು ಮೂರ್ಖ ನಿರ್ಧಾರ. ಇದರ ಪರಿಣಾಮವನ್ನು ಅಮೆರಿಕಾ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದೆಲ್ಲವೂ ಇರಾನ್ ಮತ್ತು ಅಮೆರಿಕಾ ನಡುವೆ ಯುದ್ಧ ಸಂಭವಿಸಲಿರುವ ಮುನ್ಸೂಚನೆಯಂತೆಯೇ ಕಾಣಿಸುತ್ತಿದೆ. ಇರಾನ್ ಸೇನಾ ಕಮಾಂಡರ್‌ನನ್ನು ಹೊಡೆದುರುಳಿಸಿರೋ ಅಮೆರಿಕವೀಗ ಪ್ರತೀಕಾರದ ತೀವ್ರತೆಯ ಅರಿವಾಗಿ ಕಂಗಾಲಾದಂತಿದೆ.

[adning id="4492"]

LEAVE A REPLY

Please enter your comment!
Please enter your name here