ಚಳಿಗಾಲದಲ್ಲೂ ಬಿಜೆಪಿಯಲ್ಲಿ ಬೆವರಾಡಿಸುತ್ತಿದೆ ಭಿನ್ನಮತ!

[adning id="4492"]

ಉಪ ಚುನಾವಣೆಯಲ್ಲಿ ಅನರ್ಹರನ್ನು ಗೆಲ್ಲಿಸಿಕೊಳ್ಳುವ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸೇಫ್ ಝೋನ್ ತಲುಪಿಕೊಂಡಿದೆ. ಹಾಗಂತ ಮುಖ್ಯಮಂತ್ರಿ ಯಡಿಯೂರಪ್ಪನವರು ನಿರಾಳವಾಗಿದ್ದಾರಾ? ರಾಜಕ್ಯ ಬಿಜೆಪಿಯೊಳಗೆ ಎಲ್ಲವೂ ಸರಿಯಾಗಿದೆಯಾ ಅಂತ ನೋಡ ಹೋದರೆ ಚಳಿಗಾಲದಲ್ಲಿಯೂ ಆಂತರಿಕ ಭಿನ್ನಮತದ ಬಿಸಿಯಿಂದ ರಾಜ್ಯ ಬಿಜೆಪಿ ನಾಯಕರು ಬೆವರಾಡುತ್ತಿರೋ ವಿಚಾರ ಸ್ಪಷ್ಟವಾಗುತ್ತದೆ. ಆರಂಭದಿಂದಲೂ ಆಂತರಿಕವಾಗಿ ತಮ್ಮನ್ನು ಹಣಿಯಲು ಮಾಡುತ್ತಿರೋ ಕಸರತ್ತುಗಳಿಗೆ ಫುಲ್‌ಸ್ಟಾಪ್ ಇಡಲು ಕಸರತ್ತು ನಡೆಸುತ್ತಿರುವ ಸಿಎಂ ಯಡಿಯೂರಪ್ಪನವರಿಗೆ ವರ್ಷಾರಂಭದಲ್ಲಿಯೇ ಭಾರೀ ಹಿನ್ನಡೆಯಾಗಿದೆ.


ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ವತಂತ್ರವಾಗಿ ಅಧಿಕಾರ ಹಿಡಿದಿದೆ. ಸಾಮಾನ್ಯವಾಗಿ ಸಮ್ಮಿಶ್ರ ಸರ್ಕಾರಗಳಲ್ಲಿ ಡಿಸಿಎಂ ಮುಂತಾದ ಸ್ಥಾನಗಳ ಮೂಲಕ ಎಲ್ಲರನ್ನೂ ಸರಿದೂಗಿಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತದೆ. ಅಚ್ಚರಿಯೆಂದರೆ ಬಿಜೆಪಿಯಲ್ಲಿಯೂ ಸಹ ಅಂಥಾದ್ದೇ ಕ್ರಮವನ್ನು ಅನುಸರಿಸಲಾಗುತ್ತಿದೆ.ಷ್ಟಕ್ಕೂ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಯಡಿಯೂರಪ್ಪನವರನ್ನು ಸಿಎಂ ಮಾಡೋದು, ಅವರೊಬ್ಬರೇ ಏಕಮೇವ ನಾಯಕನಂತೆ ಕರ್ನಾಟಕದಲ್ಲಿ ಮೆರೆಯೋದು ಸುತಾರಾಂ ಇಷ್ಟವಿರಲಿಲ್ಲ. ಆದರೂ ಯಡಿಯೂರಪ್ಪನನ್ನು ಹೊರತು ಪಡಿಸಿದರೆ ಇಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲ ಎಂಬ ಕಾರಣದಿಂದ ಸಿಎಂ ಮಾಡಲಾಗಿತ್ತು.


ಅವರಿಗೆ ಅಂಕುಶ ಹಾಕಿ ಆಡಳಿತದಲ್ಲೊಂದು ಹಿಡಿತ ಸಾಧಿಸೋದಕ್ಕೆ, ಪರೋಕ್ಷವಾಗಿ ಯಡ್ಡಿಗೆ ಮೂಗುದಾರ ಹಾಕುವುದಕ್ಕಾಗಿಯೇ ಎರಡು ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಲಾಗಿತ್ತು. ಯಡ್ಡಿಗೆ ಪರ್ಯಾಯವಶಾಗಿ ಲಿಂಗಾಯತ ಸಮುದಾಯದ ನಾಯಕತ್ವ ಸೃಷ್ಟಿಸಲೆಂದೇ ಸೋತ ಲಕ್ಷ್ಮಣ ಸವದಿಗೆ ಡಿಸಿಎಂ ಪಟ್ಟ ಕರುಣಿಸಲಾಗಿತ್ತು. ಒಕ್ಕಲಿಗೆ ಸಮುದಾಯದ ಅಶ್ವತ್ಥ್ ನಾರಾಯಣನನ್ನು ಡಿಸಿಎಂ ಮಾಡೋ ಮೂಲಕ ಆರ್ ಅಶೋಕ್‌ಗೂ ಟಾಂಗ್ ಕೊಡಲಾಗಿತ್ತು. ಹೀಗೆ ಷಡ್ಯಂತ್ರದಿಂದ ಸೃಷ್ಟಿಸಿರುವ ಡಿಸಿಎಂ ಸ್ಥಾನಗಳೇ ಯಡ್ಡಿಯ ಇರುಸುಮುರುಸಿಗೆ ಕಾರಣವಾಗಿವೆ. ಆದ್ದರಿಂದಲೇ ಆ ಸ್ಥಾನಗಳನ್ನು ಕ್ಯಾನ್ಸಲ್ ಮಾಡಿಸುವ ಸರ್ಕಸ್ಸನ್ನು ಯಡ್ಡಿ ನಡೆಸುತ್ತಿದ್ದಾರೆ.


ಇದಕ್ಕಾಗಿ ಯಡಿಯೂರಪ್ಪ ಬಳಸಿಕೊಂಡಿರೋದು ಹೊನ್ನಾಳ್ಳಿ ಹೋರಿ ರೇಣುಕಾಚಾರ್ಯನನ್ನು. ರೇಣುಕಾ ಡಿಸಿಎಂ ಹುದ್ದೆ ರದ್ದತಿಗಾಗಿ ಸಹಿ ಸಂಗ್ರಹ ಅಭಿಯಾನದಲ್ಲಿ ಕೆಲ ದಿನಗಳಿಂದ ತೊಡಗಿಕೊಂಡಿದ್ದಾರೆ. ಇದುವೆ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರುವಂತೆ ಮಾಡಿ ಬಿಟ್ಟಿದೆ. ಇದೀಗ ಇದರ ವಿರುದ್ಧ ಲಕ್ಷ್ಮಣ ಸವದಿ ಕೆಂಡಾಮಂಡಲವಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ದೂರು ನೀಡಿದ್ದರು. ಇದನ್ನು ಪರಿಗಣಿಸಿರುವ ನಳೀನ್ ಕುಮಾರ್ ಇಂಥಾ ಕೆಲಸ ಬಿಜೆಪಿ ಒಡಕಿಗೆ ಕಾರಣವಾಗೋದರಿಂದ ಸುಮ್ಮನಿರುವಂತೆ ರೇಣುಕಾಚಾರ್ಯನಿಗೆ ಸೂಚಿಸಿದ್ದಾರಂತೆ. ಈ ಮೂಲಕ ಯಡ್ಡಿ ಪ್ರಯತ್ನಕ್ಕೆ ಭಾರೀ ಹಿನ್ನಡೆ ಆದಂತಾಗಿದೆ.

[adning id="4492"]

LEAVE A REPLY

Please enter your comment!
Please enter your name here