ಡೊನಾಲ್ಡ್ ಟ್ರಂಪ್ ಟೆನ್ಷನ್ನು ಮಾಡಿಕೊಂಡಿದ್ದೇಕೆ?

ಶೋಧ ನ್ಯೂಸ್ ಡೆಸ್ಕ್: ಅಂತಾರಾಷ್ಟ್ರೀಯ ಮಟ್ಟದ ವಿಕ್ಷಿಪ್ತ ನಾಯಕರ ಪಟ್ಟಿಗೆ ಇತ್ತೀಚಿನ ವರ್ಷಗಳಲ್ಲಿ ಸೇರ್ಪಡೆಗೊಂಡಿರುವ ಹೆಸರು ಡೊನಾಲ್ಡ್ ಟ್ರಂಪ್. ವಿಶ್ವಕ್ಕೇ ದೊಡ್ಡಣ್ಣನೆಂದು ಬೀಗುವ ಅಮೆರಿಕಾದಂಥಾ ದೇಶದ ಅಧ್ಯಕ್ಷನಾಗಿರೋ ಟ್ರಂಪ್ ಕೆಲ ಘಳಿಗೆಗಳಲ್ಲಿ ಬಿಡದಿ ಆಶ್ರಮದ ನಿತ್ಯಾನಂದನಂತೆಯೂ, ಮತ್ತೆ ಕೆಲ ಘಳಿಗೆಗಳಲ್ಲಿ ಯಡಿಯೂರಪ್ಪನ ಶಿಷ್ಯ, ಹೊನ್ನಾಳ್ಳಿ ಹೋರಿ ರೇಣುಕಾಚಾರ್ಯನಂತೆಯೂ ವರ್ತಿಸೋ ಮೂಲಕ ಸುದ್ದಿ ಮಾಡೋದಿದೆ. ಇಂಥಾ ಟ್ರಂಪ್ ಹೊಸಾ ವರ್ಷದ ದಿನವೇ ಟೆನ್ಷನ್ನು ಮಾಡಿಕೊಂಡು ಯಾರಿಗೋ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ!


ಡೊನಾಲ್ಡ್ ಟ್ರಂಪ್ ಹೊಸ ವರ್ಷದ ದಿನವೇ ಸಿಟ್ಟಾಗಿ ಸಿಡಿದೇಳಲು ಕಾರಣವಾಗಿರೋದು ಇರಾನ್ ವರ್ತನೆ. ಇರಾನ್ ಅಮೆರಿಕಾ ವಿರುದ್ಧ ವಿನಾಕಾರಣ ಕತ್ತಿ ಮಸೆಯುತ್ತಿದೆ ಎಂದು ಆರೋಪಿಸಿರುವ ಟ್ರಂಪ್, ಆ ದೇಶ ಯಾವುದೇ ಅಪದ್ಧ ನಡೆ ಅನುಸರಿಸಿದರೂ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬ ಎಚ್ಚರಿಕೆ ರವಾನಿಸಿದ್ದಾರೆ. ಈ ಮೂಲಕ ಒಂದಷ್ಟು ವರ್ಷಗಳಿಂದಲೂ ನಡೆಯುತ್ತಿರೋ ಈ ತಿಕ್ಕಾಟವೀಗ ತೀವ್ರ ಸ್ವರೂಪ ಪಡೆದುಕೊಂಡಂತಾಗಿದೆ.


ಕೆಲ ದಿನಗಳ ಹಿಂದಷ್ಟೇ ಟ್ರಂಪ್ ಮಧ್ಯಪ್ರಾಚ್ಯಕ್ಕೆ ನೂರು ಸೇನಾ ತುಕಡಿಗಳನ್ನು ಕಳಿಸೋದಾಗಿ ಘೋಷಣೆ ಮಾಡಿದ್ದರು. ಈ ವಿಚಾರ ತಿಳಿದಾಕ್ಷಣವೇ ಇರಾನ್ ಪರ ಪ್ರತಿಭಟನಾಕಾರರು ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ದಾಳಿ ನಡೆಸಿ ಉಡಾಯಿಸಿದ್ದರು. ಈ ಸಂದರ್ಭದಲ್ಲಿ ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಪರವಾಗಿ ಘೋಷಣೆ ಕೂಗಿದ್ದ ಪ್ರತಿಭಟನಾಕಾರರು, ಇರಾಕ್ ನೆಲದಿಂದ ಅಮೆರಿಕನ್ ಸೇನೆಯನ್ನು ವಾಪಾಸು ಕರೆದುಕೊಳ್ಳುವಂತೆ ಆಗ್ರಹಿಸಿತ್ತು.


ಈ ಮೂಲಕ ಮದ್ಯಪ್ರಾಚ್ಯದ ತಿಕ್ಕಾಟಗಳಲ್ಲಿ ಮೂಗು ತೂರಿಸುತ್ತಾ ದೊಡ್ಡಣ್ಣನೆಂಬೋ ಗತ್ತು ಪ್ರದರ್ಶಿಸುತ್ತಾ ಬಂದಿರುವ ಅಮೆರಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸವಾಲು ಎದುರಾಗಿದೆ. ಮದ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಯಾವುದೇ ಘರ್ಷಣೆಗಳು ಸಂಭವಿಸಿದಾಗಲೂ ಅಮೆರಿಕಾ ಆರಂಭದಿಂದಲೂ ತನ್ನ ಲಾಭದ ನೆಲೆಯಲ್ಲಿ ಮಧ್ಯಪ್ರವೇಶ ಮಾಡುತ್ತಾ ಬಂದಿದೆ. ಇದು ಅಮೆಕಾದ ಕುಟಿಲ ನೀತಿ. ಅದನ್ನೇ ಅನುಸರಿಸುತ್ತಿರೋ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೀಗ ಎಲ್ಲ ಸಮಸ್ಯೆಗಳೂ ಜಟಿಲ ಸ್ವರೂಪದೊಂದಿಗೆ ಅವತರಿಸಿಕೊಂಡಿವೆ.

LEAVE A REPLY

Please enter your comment!
Please enter your name here