ಸಾಫ್ಟ್‌ವೇರ್ ಮಂದಿಯ ಮೋಕ್ಷ ಟೀಸರ್ ಸೂಪರ್ ಹಿಟ್!

[adning id="4492"]

ಕಾರ್ಪೋರೇಟ್ ಕಂಪೆನಿಗಳಿಗೆ ಜಾಹೀರಾತು ರೂಪಿಸುತ್ತಿದ್ದ ತಂಡವೇ ಸೇರಿ ರೂಪಿಸಿರುವ ಮೋಕ್ಷ ಚಿತ್ರ ಕಳೆದೊಂದಷ್ಟು ದಿನಗಳಿಂದ ಸಖತ್ತಾಗಿಯೇ ಸುದ್ದಿ ಕೇಂದ್ರದಲ್ಲಿದೆ. ಹಂತ ಹಂತವಾಗಿ ಕುತೂಹಲದ ಕೊಂಡಿಗಳನ್ನು ಬಿಗಿಗೊಳಿಸಿಕೊಳ್ಳುತ್ತಾ ಸಾಗಿ ಬರುತ್ತಿರುವ ಮೋಕ್ಷದ ಟೀಸರ್ ಅನಾವರಣಗೊಳ್ಳುತ್ತಿದೆಯೆಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಇದೀಗ ಅದು ಬಿಡುಗಡೆಗೊಂಡಿದೆ.

ಲೋಕಾರ್ಪಣೆಗೊಂಡು ದಿನದೊಪ್ಪತ್ತಿನಲ್ಲಿಯೇ ಈ ಟೀಸರ್‌ಗೆ ಸಿಕ್ಕಿರುವ ಜನಬೆಂಬಲ, ವೀಕ್ಷಣೆ ಮತ್ತು ಪ್ರತಿಕ್ರಿಯೆಗಳೇ ಮೋಕ್ಷ ಚಿತ್ರತಂಡದಲ್ಲಿ ಹೊಸಾ ಭರವಸೆ ಮೂಡಿಕೊಳ್ಳಲು ಕಾರಣವಾಗಿದೆ. ಹಾಗೊಂದು ಸಂಚನ ಸೃಷ್ಟಿಸುವಂತೆಯೇ ಈ ಟೀಸರ್ ಮೂಡಿ ಬಂದಿದೆ.
ಸಮರ್ಥ್ ನಾಯಕ್ ನಿರ್ದೇಶನ ಮಾಡಿರೋ ಈ ಚಿತ್ರ ಸಸ್ಪೆನ್ಸದ್ ಥ್ರಿಲ್ಲರ್ ಕಥೆಯನ್ನೊಳಗೊಂಡಿದೆ ಎಂಬ ವಿಚಾರವನ್ನು ಚಿತ್ರತಂಡ ಇತ್ತೀಚೆಗಷ್ಟೇ ಹೇಳಿಕೊಂಡಿತ್ತು. ಓರ್ವ ಮಾಸ್ಕ್ ಮ್ಯಾನ್ಗ ಸುತ್ತಾ ಘಟಿಸುವ ರೋಚಕ ಕಥಾನಕವನ್ನು ಮೋಕ್ಷ ಚಿತ್ರ ಒಳಗೊಂಡಿದೆ. ಚಿತ್ರತಂಡ ಇಂಥಾದ್ದೊಂದು ಸುಳಿವು ಬಿಟ್ಟು ಕೊಟ್ಟಾಕ್ಷಣವೇ ಮೋಕ್ಷದತ್ತ ಪ್ರೇಕ್ಷಕರೆಲ್ಲ ಮೋಹಿತರಾದಂತೆ ಕಾಯಲಾರಂಭಿಸಿದ್ದರು. ಇದೀಗ ಅದೆಲ್ಲವನ್ನೂ ತಣಿಸುವಂತೆ ಟೀಸರ್ ಲಾಂಚ್ ಆಗಿದೆ. ಖಡಕ್ಕು ಹಿನ್ನೆಲೆ ಧ್ವನಿಯೊಂದಿಗೆ ತೆರೆದುಕೊಳ್ಳುವ ಈ ಟೀಸರ್ ಎರಡು ಪಾತ್ರಗಳನ್ನು ಕಾಣಿಸುತ್ತಾ ಕಥೆಯ ಬಗ್ಗೆ ನೂರು ದಿಕ್ಕಿನಲ್ಲಿ ಪ್ರೇಕ್ಷಕರನ್ನೆಲ್ಲ ಚಿಂತನೆಗೆ ಹಚ್ಚುವಲ್ಲಿ ಯಶ ಕಂಡಿದೆ.


ಈ ಟೀಸರ್ ಮೂಲಕವೇ ರೋಚಕ ಕಥೆಯ ಗುಟ್ಟುನ್ನು ಬಿಟ್ಟುಕೊಡುವಲ್ಲಿ ಚಿತ್ರತಂಡ ಯಶಸಸ್ವಿಯಾಗಿದೆ. ಇದು ಈ ಹಿಂದೆ ಕಾಪೋರೇಟ್ ಜಾಹೀರಾತು ನಿರ್ದೇಶನ ಮಾಡುತ್ತಲೇ ಆ ವಲಯದಲ್ಲಿ ಖ್ಯಾತಿ ಗಳಿಸಿದ್ದ ಸಮರ್ಥ್ ನಾಯಕ್ ನಿರ್ದೇಶನದ ಮೊದಲ ಚಿತ್ರ. ಈ ಆರಂಭಿಕ ಹೆಜ್ಜೆಯಲ್ಲಿಯೇ ಅವರು ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಸಂಕೀರ್ಣ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾಪೋರೇಟ್ ಜಾಹೀರಾತುಗಳನ್ನು ನಿದೇಶನ ಮಾಡುವ ಸಂದರ್ಭದಲ್ಲಿ ಸಮರ್ಥ್ ಕಟ್ಟಿಕೊಂಡಿದ್ದ ಪ್ರತಿಭಾವಂತರ ತಂಡವೇ ಈ ಸಿನಿಮಾಗಾಗಿಯೂ ಕಾರ್ಯ ನಿರ್ವಹಿಸಿದೆ.


ಈ ಚಿತ್ರದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದ್ದರೂ ಇದು ಮಾಮೂಲಿ ಜಾಡಿನ ಮರ್ಡರ್ ಮಿಸ್ಟರಿಗಿಒಂತಲೂ ಸಂಪೂರ್ಣವಾಗಿ ಭಿನ್ನವಾಗಿದೆ ಎಂಬ ವಿಚಾರವನ್ನು ಚಿತ್ರತಂಡ ಒತ್ತಿ ಹೇಳುತ್ತದೆ. ಇದರಲ್ಲಿ ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಸಮರ್ಥ್ ನಾಯಕ್ ಈ ಸಿನಿಮಾ ಸಂಪೂರ್ಣ ವಾಗಿ ಭಿನ್ನವಾಗಿಯೇ ಪ್ರೇಕ್ಷಕರನ್ನು ತಾಕಬೇಕೆಂಬ ಅಭಿಲಾಷೆಯಿಂದ ರೂಪಿಸಿದ್ದಾರಂತೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಕಥೆಯೇ ಆಗಿದ್ದರೂ ಮಾಮೂಲು ಸ್ವರೂಪವನ್ನು ಈ ಚಿತ್ರ ಮೀರಿಕೊಂಡಿದೆ ಅನ್ನೋದಕ್ಕೆ ಇದೀಗ ಬಿಡುಗಡೆಯಾಗಿರುವ ಟೀಸರ್ ಸಾಕ್ಷಿಯಂತಿದೆ. ಸದ್ಯದಲ್ಲಿಯೇ ಮೋಕ್ಷ ಚಿತ್ರದ ಬಿಡುಗಡೆ ದಿನಾಂಕ ಜಾಹೀರಾಗಲಿದೆ.

[adning id="4492"]

LEAVE A REPLY

Please enter your comment!
Please enter your name here