ಈ ವಾರ ಭರಪೂರ ಮನರಂಜನೆಗೊಂದು ಸುವರ್ಣಾವಕಾಶ!

[adning id="4492"]

ನೂಪ್ ರಾಮಸ್ವಾಮಿ ನಿರ್ದೇಶನದ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕವೇ ಪ್ರತಿಭಾವಂತ ನಟರಾಗಿ ಗುರುತಿಸಿಕೊಂಡಿರುವ ರಿಷಿ ನಾಯಕನಾಗಿ ನಟಿಸಿರುವ ಈ ಚಿತ್ರ ಈಗಾಗಲೇ ನಾನಾ ದಿಕ್ಕುಗಳಿಂದ ಪ್ರೇಕ್ಷಕರನ್ನು ವಶಪಡಿಸಿಕೊಂಡಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟ್ರೇಲರ್ ಅಂತೂ ಈ ವರ್ಷದ ಪ್ರಾಮಿಸಿಂಗ್ ಟ್ರೇಲರ್‌ಗಳಲ್ಲೊಂದಾಗಿ ದಾಖಲಾಗಿದೆ. ಅದು ಅತ್ಯಂತ ಕಡಿಮೆ ಅವಧಿಯಲ್ಲಿಯೇ ವೈರಲ್ ಆದ ರೀತಿ ಮತ್ತು ಜನರ ಕಡೆಯಿಂದ ಪಡೆದುಕೊಂಡಿರುವ ಭರಪೂರ ಮೆಚ್ಚುಗೆಗಳೇ ಈ ಸಿನಿಮಾದ ಗೆಲುವನ್ನು ಪ್ರತಿಬಿಂಬಿಸುವಂತಿವೆ.


ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಭಿನ್ನವಾದುದೇನೋ ಕಥೆ ಇದೆ ಎಂಬ ಗಾಢ ನಂಬಿಕೆ ಪ್ರೇಕ್ಷಕರಲ್ಲಿ ನೆಲೆ ಕಂಡುಕೊಂಡಿದೆ. ಎಷಿ ನಾಯಕನಾಗಿ ಇದುವರೆಗೂ ಒಂದಷ್ಟು ಬಗೆಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮೂಲಕವೇ ಪ್ರೇಕ್ಷಕರಿಗೂ ಹತ್ತಿರಾಗಿದ್ದಾರೆ. ಆದರೆ ಈ ಸಿನಿಮಾ ಮೂಲಕ ಅವರನ್ನು ಬೇರೆಯದ್ದೇ ಬಿಗೆಯ ಅಪರೂಪದ ಪಾತ್ರದಲ್ಲಿ ಕಣ್ತುಂಬಿಕೊಳ್ಳುವ ಸದಾವಕಾಶ ಪ್ರೇಕ್ಷಕರಿಗೆ ಲಭಿಸಲಿದೆ. ಈ ಸಿನಿಮಾದಲ್ಲಿ ವಿದ್ಯಾರ್ಥಿಯಾಗಿ ನಟಿಸುವಂತಿವೆಯೆಂಬ ನಂಬಿಕೆ ಚಿತ್ರತಂಡದಲ್ಲಿದೆ.


ಇಲ್ಲಿ ಮಧ್ಯಮ ವರ್ಗದ ಪಡಿಪಾಟಲುಗಳ ಕಥೆಯಿದೆ. ನಾಯಕಿಯ ಪಾತ್ರವೂ ಕೂಡಾ ಆ ಕೇಂದ್ರದಿಂದಲೇ ಬಿಚ್ಚಿಕೊಳ್ಳುತ್ತದೆ. ಈ ಸಿನಿಮಾ ಮೂಲಕವೇ ಬಹುಭಾಷಾ ನಟಿ ಧನ್ಯಾ ರಾಮಕೃಷ್ಣ ನಾಯಕಿಯಾಗಿ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ. ಅವರಿಲ್ಲಿ ರಿಷಿಯ ಪ್ರೇಯಸಿಯಾಗಿ, ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿನಿಯಾಗಿದ್ದರೂ ಸ್ವತಃ ಕಾಯಿಲೆ ಪೀಡಿತ ಹುಡುಗಿಯಾಗಿ ನಟಿಸಿದ್ದಾರಂತೆ. ಈ ಸಿನಿಮಾದಲ್ಲಿ ಮನರಂಜನೆಗೇ ಹೆಚ್ಚಾಗಿ ಒತ್ತು ಕೊಡಲಾಗಿದೆ. ಇಡೀ ಚಿತ್ರದ ಮುಕ್ಕಾಲು ಭಾಗದಷ್ಟು ಕಾಮಿಡಿಯೇ ತುಂಬಿ ತುಳುಕಿದೆ. ಅದೇ ರೀತಿ ಎಂಥವರ ಕಣ್ಣಾಲಿಗಳೂ ತೇವಗೊಳ್ಳುವಂಥಾ ಭಾವುಕ ಸನ್ನಿವೇಶಗಳೂ ಇಲ್ಲಿವೆ. ಈ ಚಿತ್ರದಲ್ಲಿ ರಿಷಿ ಮತ್ತು ಧನ್ಯಾ ಜೊತೆಗೆ ದತ್ತಣ್ಣ, ರಂಗಾಯಣ ರಘು, ಮಿತ್ರಾ ಮುಂತಾದವರೂ ವಿಶೇಷವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದೆಲ್ಲವೂ ಈ ವಾರವೇ ನಿಮ್ಮೆಲ್ಲರ ಮುಂದೆ ತೆರೆದುಕೊಳ್ಳಲಿದೆ.

[adning id="4492"]

LEAVE A REPLY

Please enter your comment!
Please enter your name here