ಚಿರಂಜೀವಿ ಅಳಿಯನ ಚಿತ್ರಕ್ಕೆ ರಚಿತಾ ರಾಮ್ ನಾಯಕಿ!

[adning id="4492"]

ಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ರೂಪಾಂತರಗೊಂಡು ಬಹಳಷ್ಟು ಕಾಲವೇ ಕಳೆದಿದೆ. ಆಕೆ ರಿಯಲ್ ಸ್ಟಾರ್ ಉಪ್ಪಿ ಜೊತೆ ನಟಿಸಿದ್ದ ಐ ಲವ್ ಯೂ ದೊಡ್ಡ ಮಟ್ಟದಲ್ಲಿ ಗೆಲು ಕಾಣುತ್ತಲೇ ಮತ್ತಷ್ಟು ಬ್ಯುಸಿಯಾಗಿ ಬಿಟ್ಟಿದ್ದಾಳೆ. ಆಪ್ತಮಿತ್ರ, ಆಪ್ತ ರಕ್ಷಕ ಚಿತ್ರಗಳ ಗುಂಗಿನಲ್ಲಿರುವಂತೆ ಕಾಣಿಸುವ ವಾಸು ನಿರ್ದೇಶನದ ಆಯುಷ್ಮಾನ್ ಭವ ಚಿತ್ರದಲ್ಲಿ ರಚಿತಾ ನಟಿಸಿದ್ದಾಳಾದರೂ ಅದು ಹೇಳಿಕೊಳ್ಳುವಂಥಾ ಗೆಲುವು ತಂದುಕೊಡುವ ಲಕ್ಷಣಗಳೇನಿಲ್ಲ. ಆದರೂ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿರೋ ರಚಿತಾ ಇದೀಗ ತೆಲು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರೋ ಸುದ್ದಿಯೊಂದು ಹರಿದಾಡಲಾರಂಭಿಸಿದೆ.


ಅಷ್ಟಕ್ಕೂ ಕನ್ನಡ ನಟಿಯರು ಪರಭಾಚಾ ಚಿತ್ರರಂಗಕ್ಕೆ ಹಾರುತ್ತಾರೆಂಬ ಬಗ್ಗೆ ಸುದ್ದಿ ಹರಿದಾಡೋದು ಹೊಸತೇನಲ್ಲ. ಕನ್ನಡದಲ್ಲಿ ಅವಕಾಶಗಳು ಕಡಿಮೆಯಾಗುತ್ತಲೇ ಲಕ್ಷಣವಾಗಿ ಫೋಟೋಶೂಟ್ ಮಾಡಿಸಿಕೊಂಡು ಪರಭಾಷಾ ಚಿತ್ರರಂಗಕ್ಕೆ ಹಾರೋದಾಗಿ ಹುಯಿಲಿಡುವ ನಟಿಯರ ಸಂಖ್ಯೆ ಬಹಳಷ್ಟಿದೆ. ಆದರದು ನಿಜವಾಗಿದ್ದು ತೀರಾ ವಿರಳ. ರಚಿತಾ ರಾಮ್ ವಿಚಾರದಲ್ಲಿ ವಾತಾವರಣ ಕೊಂಚ ಬದಲಾಗಿದೆ. ಕನ್ನಡದಲ್ಲಿಯೇ ಕಮರ್ಶಿಯಲ್ ಸಿನಿಮಾದ ಜೊತೆಗೆ ಏಪ್ರಿಲ್‌ನಂಥಾ ಒಂದಷ್ಟು ಸಿನಿಮಾಗಳಲ್ಲಿ ರಚಿತಾ ಬ್ಯುಸಿಯಾಗಿದ್ದಾಳೆ. ಅದರ ಜೊತೆ ಜೊತೆಗೇ ತೆಲು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಆಕೆ ಮನಸು ಮಾಡಿದಂತಿದೆ.


ಈ ಹಿಂದೆ ರಚಿತಾ ರಾಮ್ ನಂದಮೂರಿ ಬಾಲಕೃಷ್ಣ ಸಿನಿಮಾ ನಾಯಕಿಯಾಗೋದರ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಒಂದು ಮೂಲದ ಪ್ರಕಾರ ಈಕೆ ಸದರಿ ಸಿನಿಮಾವನ್ನು ಒಪ್ಪಿಕೊಂಡಿರೋದು ನಿಜವಂತೆ. ಅದರ ಮಾತುಕತೆಗಳೂ ಕೂಡಾ ಫೈನಲ್ ಆಗಿವೆ. ಅದರ ಬೆನ್ನಿಗೇ ಈಗ ರಚಿತಾ ಮತ್ತೊಂದು ತೆಲುಗು ಚಿತ್ರವನ್ನು ಒಪ್ಪಿಕೊಂಡಿದ್ದಾಳೆ. ಈ ಮೂಲಕ ಮೆಘಾ ಸ್ಟಾರ್ ಚಿರಂಜೀವಿ ಅಳಿಯನ ಚಿತ್ರಕ್ಕೆ ನಾಯಕಿಯಾಗಿದ್ದಾಳೆ. ಚಿರು ಅಳಿಯ ಕಲ್ಯಾಣ್ ದೇವ್ ನಟಿಸಲಿರೋ ಎರಡನೇ ಸಿನಿಮಾಗೆ ರಚಿತಾ ನಾಯಕಿಯಾಗಿದ್ದಾಳೆ. ಈ ಬಗ್ಗೆ ನಿರ್ಮಾಪಕರುಗಳೇ ಅಧಿಕೃತ ಮಾಹಿತಿ ನೀಡಿದ್ದಾರೆ. ಇದೆಲ್ಲವೂ ರಚಿತಾ ರಾಮ್ ಮುಂದಿನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿಯೂ ಮುಖ್ಯ ನಾಯಕಿಯಾಗಿ ಮೆರೆಯೋ ಮುನ್ಸೂಚನೆಯಂತೆಯೇ ಕಾಣಿಸುತ್ತಿವೆ.

[adning id="4492"]

LEAVE A REPLY

Please enter your comment!
Please enter your name here