ಕಳೆದು ಹೋಗಿದ್ದ ಬಾಲಕ ಸಿಗಲು ಕಿಚ್ಚ ಕಾರಣ!

[adning id="4492"]

ಕಿಚ್ಚ ಸುದೀಪ್ ಸಿನಿಮಾ, ಬಿಗ್ ಬಾಸ್‌ನಂಥಾ ಶೋಗಳಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ ಸಹ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡಿರುತ್ತಾರೆ. ಓಟರ್, ಫೇಸ್‌ಬುಕ್‌ನಂಥಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರೋ ಸುದೀಪ್, ಕೇಲವ ಸಿನಿಮಾ ಮಾತ್ರವಲ್ಲದೇ ಇತರೇ ಸಾಮಾಜಿಕ ಪಲ್ಲಟಗಳತ್ತಲೂ ಕಣ್ಣಾಗುತ್ತಾರೆ. ಕೆಲವೊಮ್ಮೆ ಅದಕ್ಕೆ ಸೊಪಂದಿಸುತ್ತಾರೆ. ಅವರಲ್ಲಿ ಅಂಥಾದ್ದೊಂದು ಸೂಕ್ಷ್ಮತೆ ಇಲ್ಲದೇ ಹೋಗಿದ್ದರೆ ಸುಮಾರು ದಿನಗಳ ಹಿಂದೆ ಕಳೆದು ಹೋಗಿದ್ದ ಬಾಲಕ ಮತ್ತೆ ಹೆತ್ತವರ ಮಡಿಲು ಸೇರೋದು ಸಾಧ್ಯವಿರುತ್ತಿರಲಿಲ್ಲ. ಒಂದೇ ಒಂದು ಟ್ವೀಟ್ ಮೂಲಕ ಸುದೀಪ್ ಅದನ್ನು ಸಾಧ್ಯವಾಗಿಸಿದ್ದಾರೆ.


ಓಟರ್‌ನಲ್ಲಿ ಆಚಿಜನೇಯ ಎಂಬವರು ತಮ್ಮ ಸಂಬಂಧಿಕರ ಬಾಲಕನೋರ್ವ ಕಾಣೆಯಾಗಿದ್ದರ ಬಗ್ಗೆ ಟ್ವೀಟ್ ಮಾಡಿದ್ದರು. ಯಾರಾದರೂ ಈ ಬಾಲಕನ ಗುರುತು ಹಿಡಿದಿದ್ದರೆ ತಿಳಿಸಿ, ಹುಡುಕಲು ಸಹಕರಿಸಿ ಅಂತ ಮನವಿ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ಕಿಚ್ಚ ರೀ ಟ್ವೀಟ್ ಮಾಡುತ್ತಲೇ ಈ ಪೋಸ್ಟ್ ವ್ಯಾಪಕವಾಗಿ ಹರಡಿಕೊಂಡಿತ್ತುಕ್ಕಿದನ್ನು ಮನಗಂಡ ಪೊಲೀಸರೂ ಕೂಡಾ ಮಿಂಚಿನ ಕಾರ್ಯಾಚರಣೆ ನಡೆಸಿ ಕಡೆಗೂ ಆ ಬಾಲಕನನ್ನು ಪತ್ತೆಹಚ್ಚಿದ್ದಾರೆ. ಇದೀಗ ಆ ಬಾಲಕ ಹೆತ್ತವರ ಮಡಿಲು ಸೇರಿಕೊಂಡಿದ್ದಾನೆ.


ಕಿಚ್ಚಾ ಸುದೀಪ್ ಅವರ ಈ ನಡವಳಿಕೆಗೆ ಅಭಿಮಾನಿಗಳೆಲ್ಲ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಫಾಲೋವರ್ಸ್ ಹೊಂದಿರೋ ನಟ. ಆದ್ದರಿಂದಲೇ ಅವರಿ ಈ ಪೋಸ್ಟ್ ಮಾಡುತ್ತಲೇ ಅದು ಬೇಗನೆ ಹಬ್ಬಿಕೊಂಡಿದೆ. ಪೊಲೀಸರೂ ಕೂಡಾ ಅದನ್ನು ಗಂಭೀರವಾಗಿ ಪರಿಗಣಿಸಿ ಕಡಿಮೆ ಅವಧಿಯಲ್ಲಿಯೇ ಪತ್ತೆಹಚ್ಚಿದ್ದಾರೆ. ಹೀಗೆ ಮಕ್ಕಳು ಕಾಣೆಯಾದ ಬಗ್ಗೆ ಆಗಾಗ ಸುದ್ದಿಯಾಗುತ್ತೆ. ಆದರೆ ಹೆಚ್ಚಿನವರು ಅದೊಂದು ಮಾಮೂಲಿ ವಿದ್ಯಮಾನವೆಂಬಂತೆ ಸುಮ್ಮನಿರುತ್ತಾರೆ. ಅದರ ಹಿಂದೆ ಅದೆಷ್ಟೋ ಜೀವಗಳ ಕಣ್ಣೀರಿನ ಕಥೆಯಿದೆ ಎಂಬುದು ಹೆಚ್ಚಿನವರಿಗೆ ಗೊತ್ತಾಗೋದಿಲ್ಲ. ಆದರೆ ಸುದೀಪ್ ಅದನ್ನು ಅರ್ಥೈಸಿಕೊಂಡಿದ್ದಾರೆ. ಅವರ ಈ ಸೂಕ್ಷ್ಮವಂತಿಕೆಯನ್ನು ಮೆಚ್ಚಿಕೊಳ್ಳಲೇಬೇಕಿದೆ.

[adning id="4492"]

LEAVE A REPLY

Please enter your comment!
Please enter your name here