ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ನಟಿಸೋ ಕಾಲ ಸನ್ನಿಹಿತ!

[adning id="4492"]

ಮಂಗಳೂರಿನ ಹುಡುಗಿ ಅನುಷ್ಕಾ ಶೆಟ್ಟಿ ಕನ್ನಡದ ಗಡಿ ದಾಟಿಕೊಂಡು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ರೀತಿಯೇ ಅಚ್ಚರಿ. ಆಕೆ ಆರಂಭಿಕ ಅವಮಾನ, ತಿರಸ್ಕಾರಗಳನ್ನು ದಾಟಿಕೊಂಡು ಹೇಗೆ ಗುರಿ ತಲುಪಬೇಕೆಂಬುದಕ್ಕೆ ಯಾವತ್ತಿಗೂ ರೋಲ್ ಮಾಡೆಲ್. ಹೆಜ್ಜೆಯೊಂದು ಶುರುವಾಗೋ ಘಳಿಗೆಯಲ್ಲಿ ಎದುರಾಗೋ ನೋವು, ನಿರಾಸೆಗಳನ್ನು ನುಂಗಿಕೊಂಡು ಮುಂದುವರೆದರೆ ಮಹಾ ಗೆಲುವು ಗ್ಯಾರೆಂಟಿ ಎಂಬುದಕ್ಕೂ ಆಕೆಯೇ ಜೀವಂತ ಉದಾಹರಣೆ. ಆರಂಭದಲ್ಲಿ ಆಕೆ ಅವಕಾಶಗಳಿಗೇನು ಕಡಿಮೆ ಅಲೆದಾಡಿದ್ದಳಾ? ಆದರೆ ಕನ್ನಡದಲ್ಲಿಯೇ ಅನುಷ್ಕಾಗೆ ಅವಕಾಶ ಸಿಕ್ಕಿರಲಿಲ್ಲ. ಆದರಿಂದು ಈ ಪ್ರಬುದ್ಧ ನಟಿ ಕನ್ನಡದಲ್ಲಿ ನಟಿಸಬೇಕೆಂದು ಕನ್ನಡದ ಪ್ರೇಕ್ಷಕರೆಲ್ಲ ಕಾತರಿಸುವಂತಾಗಿದೆ. ಈಗ ಗಾಂಧಿನಗರದಲ್ಲಿ ಒಳಗಿಂದೊಳಗೇ ನಡೆಯುತ್ತಿರೋ ಪ್ರಯತ್ನಗಳು ಸಾಕಾರಗೊಂಡರೆ ಆ ಇಂಗಿತ ಈಡೇರುವ ದಿನಗಳು ದೂರವಿದ್ದಂತಿಲ್ಲ.


ಯಾವಾಗ ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾದಳೋ ಆ ಕ್ಷಣದಿಂದಲೇ ಆಕೆಯನ್ನು ಕನ್ನಡಕ್ಕೆ ಕರೆತರುವ ಪ್ರಯತ್ನಗಳಿಗೆ ಚಾಲನೆ ಸಿಕ್ಕಿತ್ತು. ಆದರೆ ಅಂಥಾ ಪ್ರಯತ್ನಗಳೆಲ್ಲವೂ ಆರಂಭದಲ್ಲಿಯೇ ಉಸಿರು ಚೆಲ್ಲುತ್ತಿದ್ದವು. ಆದರೆ ಇದೀಗ ಹೇಗಾದರೂ ಮಾಡಿ ಅನುಷ್ಕಾಳನ್ನು ಕನ್ನಡಕ್ಕೆ ಕರೆತಂದೇ ತೀರುವಂಥಾ ಗಂಭೀರ ಪ್ರಯತ್ನಗಳಾಗುತ್ತಿವೆ. ಆಕೆಯ ಛಾರ್ಮಿಗೆ ತಕ್ಕುದಾದ, ಕನ್ನಡದ ಮಟ್ಟಿಗೆ ಹೊಸದಾದಂಥಾ ಕಥೆಯೊಂದು ಸಿದ್ಧಗೊಂಡಿದೆ. ಇಷ್ಟರಲ್ಲಿಯೇ ಅನುಷ್ಕಾಗೆ ಕಥೆ ಹೇಳಿ ಒಪ್ಪಿಗೆ ಪಡೆದುಕೊಂಡ ನಂತರ ಆ ತಂಡ ಯಾವುದು? ಈ ಚಿತ್ರದ ರೂಪುರೇಷೆಗಳೇನೆಂಬುದು ಜಾಹೀರಾಗಲಿದೆ.


ಅಷ್ಟಕ್ಕೂ ಅನುಷ್ಕಾ ಶೆಟ್ಟಿಯೇ ಈ ಹಿಂದೆ ಅನೇಕ ಸಲ ಕನ್ನಡದಲ್ಲಿ ನಟಿಸಲು ಉತ್ಸುಕಳಾಗಿರೋದರ ಬಗ್ಗೆ ಹೇಳಿಕೊಂಡಿದ್ದಾಳೆ. ಆಕೆಗೆ ಆಗಾಗ ಕನ್ನಡದಲ್ಲಿ ನಟಿಸೋದಿಲ್ಲವಾ ಎಂಬ ಪ್ರಶ್ನೆ ಎದುರಾಗೋದು ಕಾಮನ್. ಇದಕ್ಕೆ ಪ್ರತೀ ಬಾರಿಯೂ ಸಕಾರಾತ್ಮಕ ಪ್ರತಿಕ್ರಿಯೆ ಕೊಡುತ್ತಾ ಬಂದಿರೋ ಅನುಷ್ಕಾ ಚೆಂದದ ಕಥೆ ಬಂದರೆ ಗ್ಯಾರೆಂಟಿ ನಟಿಸೋದಾಗಿ ಹೇಳುತ್ತಲೇ ಬಂದಿದ್ದಾಳೆ. ಈಗ ಕನ್ನಡದಲ್ಲೊಂದು ತಂಡ ಅನುಷ್ಕಾಗಾಗಿ ಚೆಂದದ ಕಥೆಯನ್ನೇ ರೆಡಿ ಮಾಡಿಕೊಂಡಿದೆ. ಈ ಬಗೆಗಿನ ಅಧಿಕೃತ ಮಾಹಿತಿ ಇಷ್ಟರಲ್ಲಿಯೇ ಹೊರ ಬೀಳಲಿದೆ.

[adning id="4492"]

LEAVE A REPLY

Please enter your comment!
Please enter your name here