ಹತ್ತೊಂಬತ್ತರ ಹರೆಯದ ಕಥೆಗೆ ಮನಸೋತ ಸೆನ್ಸಾರ್ ಮಂಡಳಿ!

[adning id="4492"]

ಹೊಸಾ ಅಲೆಯ ಚಿತ್ರಗಳಿಗೆ ಅದ್ದೂರಿ ಸ್ವಾಗತ ಸಿಗುವಂಥಾ ಸಕಾರಾತ್ಮಕ ವಾತಾವರಣವೀಗ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. ಹೊಸಾ ತಂಡದೊಂದಿಗೆ ಹಸಾ ಆವೇಗದ ಕಥೆಗಳೂ ಸೃಷ್ಟಿಯಾಗೋದರಿಂದ ಇಂಥಾ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲೂ ಭರವಸೆ ಮನೆ ಮಾಡಿಕೊಂಡಿದೆ. ಇದೇ ಜಾಡಿನಲ್ಲಿರೋ ಚಿತ್ರ ೧೯ ಏಜ್ ಈಸ್ ನಾನ್‌ಸೆನ್ಸ್. ಲೋಕೇಶ್ ನಿರ್ಮಾಣದಲ್ಲಿ ಮೂಡಿಬನಂದಿರೋ ಈ ಸಿನಿಮಾ ಕಳೆದೊಂದಷ್ಟು ದಿನಗಳಿಂದ ಸುದ್ದಿಯಲ್ಲಿದೆ. ಇನ್ನೇನು ಬಿಡುಗಡೆಗೆ ಸಜ್ಜಾಗಿರೋ ಈ ಹತ್ತೊಂಭತ್ತರ ಹರೆಯದ ತಾಜಾ ಕಥೆಗೀಗ ಸೆನ್ಸಾರ್ ಅಧಿಕಾರಿಗಳೇ ಮನಸೋತು ಮನಸಾರೆ ಮೆಚ್ಚಿಕೊಂಡಿದ್ದಾರೆ.


ಸುರೇಶ್ ಎಂ ಗಿಣಿ ನಿರ್ದೇಶನದ ೧೯ ಏಜ್ ಈಸ್ ನಾನ್‌ಸೆನ್ಸ್ ಚಿತ್ರವೀಗ ಸೆನ್ಸಾರ್ ಮುಗಿಸಿಕೊಂಡಿದೆ. ಯು/ಎ ಸರ್ಟಿಫಿಕೆಟ್ ಕೂಡಾ ಸಿಕ್ಕಿದೆ. ಯಾವುದೇ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ನಡೆಯೋದಾಗಲಿ, ಸರ್ಟಿಫಿಕೆಟ್ ಸಿಗೋದಾಗಲಿ ವಿಶೇಷ ಸಂಗತಿಯೇನಲ್ಲ. ಆದರೆ ತಿಂಗಳಿಗೆ ಅದೆಷ್ಟೋ ಸಿನಿಮಾಗಳನ್ನು ನೋಡುವ ಸೆನ್ಸಾರ್ ಮಂಡಳಿ ಅಧಿಕಾರಿಗಳೇ ಒಂದು ಸಿನಿಮಾವನ್ನು ಮೆಚ್ಚಿಕೊಂಡು ಖುಷಿಗೊಳ್ಳೋದು, ಚಿತ್ರತಂಡವನ್ನು ಅಭಿನಂದಿಸೋದು ನಿಜಕ್ಕೂ ಅಪರೂಪದ ಬೆಳವಣಿಗೆ. ಅದು ೧೯ ಏಜ್ ಈಸ್ ನಾನ್‌ಸೆನ್ಸ್ ಚಿತ್ರದ ವಿಚಾರದಲ್ಲಿಯೂ ನಡೆದಿದೆ.


ಈ ಸಿನಿಮಾದ ಕಥೆಗೆ, ಒಟ್ಟಾರೆ ಅದು ಮೂಡಿಬಂದಿರೋ ರೀತಿಗೆ ಸೆನ್ಸಾರ್ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದು ಈ ಹೊಸಬರ ತಂಡಕ್ಕೆ ಮತ್ತಷ್ಟು ಭರವಸೆ ತುಂಬಿದೆ. ಅಂದಹಾಗೆ, ಈ ಸಿನಿಮಾ ಹತ್ತೊಂಭತ್ತರ ಹರೆಯದ ಸುತ್ತಾ ಘಟಿಸೋ ರೋಚಕ ಕಥಾ ಹಂದರವನ್ನೊಳಗೊಂಡಿದೆ. ನಿರ್ಮಾಪಕ ಲೋಕೇಶ್ ಅವರ ಪುತ್ರ ಮನುಷ್ ಇದರ ನಾಯಕನಾಗಿ ನಟಿಸಿದ್ದಾನೆ. ಇದೀಗ ಮೊದಲ ವರ್ಷದ ಬಿ ಕಾಂ ಪದವಿ ವ್ಯಾಸಂಗ ಮಾಡುತ್ತಿರೋ ಮನುಷ್ ನಟನೆ ಸೇರಿಒದಂತೆ ಎಲ್ಲದರಲ್ಲಿಯೂ ತರಬೇತಿ ಪಡೆದುಕೊಂಡೇ ನಾಯಕನಾಗಿ ಅಖಾಡಕ್ಕಿಳಿದಿದ್ದಾನೆ. ಸದ್ದೇ ಇಲ್ಲದೆ ಚಿತ್ರೀಕರಣ ಪೂರೈಸಿಕೊಂಡು ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಬೇಗನೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದೆ.

[adning id="4492"]

LEAVE A REPLY

Please enter your comment!
Please enter your name here