ಅವತಾರ್ ಪುರುಷನೊಂದಿಗೆ ಮತ್ತೆ ಅರ್ಜುನ ಸಂಗಮ!

[adning id="4492"]

ನ್ನಡದಲ್ಲಿ ಕಾಮಿಡಿ ನಟರ ಸಂಖ್ಯೆಯೇ ಕಡಿಮೆ ಇದೆ. ಈ ಹಿಂದೆ ಮತ್ತು ಈಗ ಗಮನಿಸಿದರೂ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಕಾಮಿಡಿ ಖಿಲಾಡಿಗಳು ಶೋ ನಂತರ ಆ ಕೊರತೆ ನೀಗಿಯೇ ಬಿಡುತ್ತದೆ ಎಂಬಂಥಾ ನಂಬಿಕೆಯೂ ಈಗ ಭ್ರಮೆಯಾಗಿದೆ. ಯಾಕೆಂದರೆ ಅಷ್ಟೂ ಜನರಲ್ಲಿ ಕೊಂಚ ನೆಲೆ ಕಂಡುಕೊಂಡಿರೋದು ಶಿವರಾಜ್ ಕೆ ಆರ್ ಪೇಟೆ ಮಾತ್ರ. ಇಂಥಾ ವಿರಳ ಕಾಮಿಡಿ ನಟರೂ ಹೀರೋಗಳಾಗೋ ಹುಚ್ಚಿಗೆ ಬಿದ್ದು ಎಲ್ಲವನ್ನೂ ಹಡಾಲೆಬ್ಬಿಸಿಕೊಳ್ಳುತ್ತಾರೆ. ಇದಪಕ್ಕೆ ಸೂಕ್ತ ಉದಾಹರಣೆಯಂತಿರುವಾತ ಜಗ್ಗೇಶ್ ತಮ್ಮ ಕೋಮಲ್. ಈ ಕಾರಣದಿಂದಲೇ ಶರಣ್ ನಾಯಕನಾಗಲು ಹೊರಟಾಗಲೂ ಪ್ರೇಕ್ಷಕರಲ್ಲಿ ಇದೆಲ್ಲ ಬೇಕಿತ್ತಾ ಎಂಬಂಥಾ ಭಾವನೆ ಇದ್ದದ್ದು ಸುಳ್ಳಲ್ಲ. ಆದರೆ ಅದೆಲ್ಲವನ್ನೂ ಮೀರಿ ಶರಣ್ ನಾಯಕನಾಗಿ ನೆಲೆ ಕಂಡುಕೊಂಡಿದ್ದಾರೆ.


ಶರಣ್ ಇದುವರೆಗೆ ನಟಿಸಿರೋ ಚಿತ್ರಗಳೆಲ್ಲವೂ ಆರಂಭದಲ್ಲಿ ಸದ್ದು ಮಾಡಿದ್ದೇ ಹಾಡುಗಳ ಮೂಲಕ. ಶರಣ್ ಸಿನಿಮಾಗಳೆಂದರೆ ಅಲ್ಲಿ ಎವರ್‌ಗ್ರೀನ್ ಹಾಡುಗಳಿದ್ದೇ ಇರುತ್ತವೆಂಬಂಥಾ ವಾತಾವರಣ ಮೂಡಿಕೊಂಡಿದೆ. ಇಂಥಾ ನಂಬಿಕೆ ಬಲಗೊಳ್ಳಲು ಕಾರಣವಾಗಿರುವವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. ಈ ಕಾರಣದಿಂದಲೇ ಜನ್ಯಾ ಮತ್ತು ಶರಣ್ ಅವರದ್ದು ಯಶಸ್ವೀ ಕಾಂಬಿನೇಷನ್ ಎಂಬ ನಂಬಿಕೆ ಎಲ್ಲರಲ್ಲಿದೆ. ವಿಶೇಷವೆಂದರೆ ಹಲವಾರು ಸಿನಿಮಾಗಳ ಮೂಲಕ ಸಾಗಿ ಬಂದಿರೋ ಈ ಜೋಡಿ ಪ್ರತೀ ಚಿತ್ರದಲ್ಲಿಯೂ ಗುನುಗುನಿಸೋ ಹಿಟ್ ಸಾಂಗ್‌ಗಳನ್ನೇ ಕೊಟ್ಟಿದೆ. ಈ ಪರಂಪರೆ ಶರಣ್ ನಟನೆಯ ಬಹು ನಿರೀಕ್ಷಿತ ಅವತಾರ್ ಪುರುಷ ಚಿತ್ರದ ಮೂಲಕ ಮತ್ತೆ ಮುಂದುವರೆದಿದೆ.


ರ‍್ಯಾಂಬೋ, ವಿಕ್ಟರಿ, ಅಧ್ಯಕ್ಷ, ಬುಲೆಟ್ ಬಸ್ಯಾ, ಜೈ ಮಾರುತಿ ೮೦೦, ವಿಕ್ಟರಿ ೨, ರ‍್ಯಾಂಬೋ ೨ ಹಾಡುಗಳೆಲ್ಲ ಇಂದಿಗೂ ಟ್ರೆಂಡಿಂಗ್‌ನಲ್ಲಿವೆ. ಅವುಗಳಲ್ಲಿ ಬಹುತೇಕವು ಎವರ್‌ಗ್ರೀನ್ ಸಾಂಗುಗಳಾಗಿಯೂ ದಾಖಲಾಗಿವೆ. ಇವೆಲ್ಲವಕ್ಕೂ ಸಂಗೀತ ಸಂಯೋಜನೆ ಮಾಡಿರುವವರು ಅರ್ಜುನ್ ಜನ್ಯಾ. ಈಗ ಹೇಗಾಗಿದೆಯೆಂದರೆ ಶರಣ್ ಒಂದು ಚಿತ್ರಕ್ಕೆ ಕಮಿಟ್ ಆದರೆ ಅರ್ಜುನ್ ಜನ್ಯಾ ಕೂಡಾ ಸಂಗೀತ ನಿರ್ದೇಶಕರಾಗಿ ನಿಕ್ಕಿಯಾಗಿರುತ್ತಾರೆ. ಆ ಮಟ್ಟಕ್ಕೆ ಈ ಜೋಡಿ ಕನ್ನಡ ಚಿತ್ರರಂಗದಲ್ಲಿ ಹವಾ ಸೃಷ್ಟಿಸಿದೆ. ಅದು ಅವತಾರ್ ಪುರುಷ ಚಿತ್ರದ ಮೂಲಕವೂ ಮುಂದುವರೆದಿದೆ.


ಅವತಾರ್ ಪುರುಷ ಸಿಂಪಲ್ ಸುನಿ ನಿರ್ದೇಶನದಲ್ಲಿ ತಯಾರಾಗುತ್ತಿರೋ ಚಿತ್ರ. ಅದ್ದೂರಿ ಸಿನಿಮಾಗಳ ಮೂಲಕವೇ ನಿರ್ಮಾಪಕರಾಗಿ ಹೆಸರು ಮಾಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿಂಪಲ್ ಸುನಿ ಆರಂಭ ಕಾಲದಿಂದಲೂ ಶರಣ್ ಅವರಿಗಾಗಿ ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂಬ ಕನಸು ಹೊಂದಿದ್ದವರು. ಅದೀಗ ಅವತಾರ್ ಪುರುಷ ಚಿತ್ರದ ಮೂಲಕ ಸಾಕಾರಗೊಂಡಿದೆ. ಅಷ್ಟಕ್ಕೂ ಸುನಿ ಎಲ್ಲರನ್ನೂ ಮೋಡಿಗೀಡು ಮಾಡುವಂಥಾ ಡೈಲಾಗುಗಳ ಮೂಲಕವೇ ಹೆಸರಾಗಿರುವವರು. ಈ ಬಾರಿ ಅವರು ಸಂಪೂರ್ಣ ಕಾಮಿಡಿ ಸಬ್ಜೆಕ್ಟ್ ಒಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಅರ್ಜುನ್ ಜನ್ಯಾ ಮತ್ತು ಶರಣ್ ಮತ್ತೆ ಒಂದಾಗಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here