ವೀರಂ ಜೊತೆ ಅಖಾಡಕ್ಕಿಳಿದ ರಚಿತಾ ರಾಮ್!

ಗುಳಿಗೆನ್ನೆಯತ್ತ ಹರಿದು ಬರುತ್ತಿದೆ ಅವಕಾಶಗಳ ಮಹಾಪೂರ!
ಡಿಂಪಲ್ ಕ್ವೀನ್ ರಚಿತಾ ರಾಮ್ ಅದೃಷ್ಟ ಯಾತ್ರೆ ಅನೂಚಾನವಾಗಿ ಮುಂದುವರೆಯುತ್ತಿದೆ. ಅಷ್ಟಕ್ಕೂ ಒಂದೆರಡು ಸೀರಿಯಲ್ಲುಗಳಲ್ಲಿ ನಟಿಸಿದ್ದ ರಚಿತಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ನಟಿಸೋ ಅವಕಾಶ ಸಿಕ್ಕಿದ್ದೇ ಮಹಾ ಅದೃಷ್ಟು. ಅಂಥಾದ್ದೊಂದು ದೊಡ್ಡ ಅವಕಾಶ ಪಡೆದುಕೊಂಡು ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದ ರಚಿತಾ ಈ ಕ್ಷಣಕ್ಕೂ ಒಂದರ ಹಿಂದೊಂದರಂತೆ ಅವಕಾಶಗಳನ್ನು ಗಿಟ್ಟಿಸಿಕೊಂಡು ಬ್ಯುಸಿಯಾಗಿದ್ದಾಳೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಐ ಲವ್ ಯೂ ಚಿತ್ರ ಹಿಟ್ ಆದ ನಂತರವಂತೂ ಗುಳಿಗೆನ್ನೆಯತ್ತ ಅವಕಾಶಗಳ ಮಹಾ ಪೂರವೇ ಹರಿದು ಬರಲಾರಂಭಿಸಿದೆ.


ಇತ್ತೀಚೆಗಷ್ಟೇ ರಚಿತಾ ಸೀರೆ ಎಂಬ ಚಿತ್ರದಲ್ಲಿ ರಿಷಿಗೆ ಜೋಡಿಯಾದ ಬಗ್ಗೆ ಸುದ್ದಿಯಾಗಿತ್ತು. ಅದರ ಬೆನ್ನಿಗೇ ಇದೀಗ ಪ್ರಜ್ವಲ್ ದೇವರಾಜ್‌ಗೂ ಜೋಡಿಯಾಗಿರೋ ಅಧಿಕೃತ ಸುದ್ದಿಯೇ ಹೊರ ಬಿದ್ದಿದೆ. ಪ್ರಜ್ವಲ್ ದೇವರಾಜ್ ಕೂಡಾ ಇತ್ತೀಚಿನ ದಿನಗಳಲ್ಲಿ ಸಾಲು ಸಾಲಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ವಯರ್ಷ ಮಾತ್ರವಲ್ಲದೇ ಮುಂದಿನ ವರ್ಷಕ್ಕೂ ಅವರ ಲಿಸ್ಟಿನಲ್ಲಿ ನಾನಾ ಸಿನಿಮಾಒಗಳಿದ್ದಾವೆ. ಅದರಲ್ಲಿ ಖದರ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ವೀರಂ ಎಂಬ ಚಿತ್ರವೂ ಸೇರಿಕೊಂಡಿದೆ. ಈ ಸಿನಿಮಾಗೆ ಬಹು ಕಾಲದಿಂದಲೂ ನಾಯಕಿಯ ಆಯ್ಕೆ ಕಾರ್ಯ ಚಾಲ್ತಿಯಲ್ಲಿತ್ತು. ಕಡೆಗೂ ಅದಕ್ಕೆ ರಚಿತಾ ರಾಮ್ ಆಯ್ಕೆಯಾಗಿದ್ದಾಳೆ.


ಪ್ರೊಜ್ವಲ್ ದೇವರಾಜ್ ಪಾಲಿಗೂ ಮದುವೆ ನಂತರದಲ್ಲಿ ಅದೃಷ್ಟವೆಂಬುದು ಲಕ ಲಕಿಸುತ್ತಿದೆ. ಅದರ ಭಾಗವಾಗಿ ಅವರು ಪಕ್ಕಾ ಮಾಸ್ ಚಿತ್ರಗಳಲ್ಲಿಯೇ ನಟಿಸುತ್ತಿದ್ದಾರೆ. ವೀರಂ ಚಿತ್ರವಂತೂ ಟೈಟಲ್ಲಿನಲ್ಲಿಯೇ ಮಾಸ್ ಖದರ್ ಹೊಂದಿದೆ. ನಿರ್ದೇಶಕ ಪವನ್ ಒಡೆಯರ್ ಗರಡಿಯಲ್ಲಿ ವರ್ಷಾಂತರಗಳ ಕಾರ್ಯ ನಿರ್ವಹಿಸಿ ಪಳಗಿಕೊಂಡಿರುವ ಖದರ್ ಕುಮಾರ್ ಖದರಿನ ಕಥೆಯೊಂದಿಗೇ ವೀರಂ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಈ ಸಿನಿಮಾದ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿದೆ. ಮುಂದಿನ ವರ್ಷದ ಆರಂಭದಿಂದಲೇ ಇದರ ಚಿತ್ರೀಕರಣ ಚಾಲೂ ಆಗಲಿದೆಯಂತೆ.

LEAVE A REPLY

Please enter your comment!
Please enter your name here