ಸಾಫ್ಟ್‌ವೇರ್ ಜಗತ್ತಿನವರ ಹಾರ್ಡ್‌ಕೋರ್ ಮೋಕ್ಷ!

[adning id="4492"]

ಸಿನಿಮಾ ವ್ಯಾಮೋಹವೆಂಬುದು ಯಾವ ಕ್ಷೇತ್ರದ ಮಂದಿಯನ್ನೂ ಬಿಟ್ಟಿಲ್ಲ. ಅದರಲ್ಲಿಯೂ ಸಾಫ್ಟ್‌ವೇರ್ ಎಂಬೋ ಥಳುಕು ಬಳುಕಿನ ಲೋಕದ ಜನರನ್ನಂತೂ ಸಿನಿಮಾ ಜಗತ್ತು ಸಲೀಸಾಗಿ ಸೆಳೆದುಕೊಳ್ಳುತ್ತದೆ. ಈ ಕಾರಣದಿಂದಲೇ ಈ ವರೆಗೂ ಸಾಫ್ಟ್‌ವೇರ್ ಮಂದಿ ಕನ್ನಡ ಚಿತ್ರರಂಗಕ್ಕೆ ಬಂದು ಒಂದಷ್ಟು ಸಿನಿಮಾಗಳನ್ನು ರೂಪಿಸಿದ್ದಾರೆ. ಈ ಮೂಲಕವೇ ಹೊಸತನದ ಗಾಳಿ ಬೀಸುವಂತೆಯೂ ಮಾಡಿದ್ದಾರೆ. ಇದೀಗ ಮೋಕ್ಷ ಎಂಬ ಚಿತ್ರದ ಮೂಲಕ ಅಂಥಾದ್ದೇ ತಂಡವೊಂದು ಆಗಮಿಸಿದೆ. ಸಾಫ್ಟ್‌ವೇರಿ ಕಂಪೆನಿಗಳಿಗೆ ಜಾಹೀರಾತು ರೂಪಿಸುತ್ತಿದ್ದ ತಂಡವೇ ಸೇರಿಕೊಂಡು ಈ ಚಿತ್ರವನ್ನು ರೂಪಿಸಿ ಬಿಡುಗಡೆಗೆ ಅಣಿಯಾಗುತ್ತಿದೆ.


ಮೋಕ್ಷ ಚಿತ್ರವನ್ನು ನಿರ್ದೇಶನ ಮಾಡಿರುವವರು ಸಮರ್ಥ್ ನಾಯಕ್. ಇವರು ಕನ್ನಡ ಚಿತ್ರರಂಗಕ್ಕೆ ಅಪರಿಚಿತರಾದರೂ ಸಾಫ್‌ವೇರ್ ಜಗತ್ತಿನಲ್ಲಿ ಬಹು ಬೇಡಿಕೆ ಮತ್ತು ಖ್ಯಾತಿ ಹೊಂದಿರೋ ನಿರ್ದೇಶಕ. ಕ್ರಿಯೇಟಿವ್ ಆದ ಸಾಫ್‌ವೇರ್ ಕಂಪೆನಿಗಳ ಅದೆಷ್ಟೋ ಜಾಹೀರಾತುಗಳನ್ನು ನಿರ್ದೇಶನ ಮಾಡುವ ಮೂಕಕ ಈತ ಬೇಡಿಕೆ ಪಡೆದುಕೊಂಡಿದ್ದಾರೆ. ಒಂದಷ್ಟು ವರ್ಷಗಳಿಂದ ಸಿನಿಮಾ ಕನಸನ್ನು ಮನಸಲ್ಲಿಟ್ಟುಕೊಂಡೇ ಜಾಹೀರಾತು ನಿರ್ದೇಶನ ಮಾಡುತ್ತಾ ಬಂದಿದ್ದ ಸಮರ್ಥ್ ಸಮರ್ಥವಾದ ತಂಡವೊಂದನ್ನು ಕಟ್ಟಿಕೊಂಡಿದ್ದಾರೆ. ಆ ತಂಡವನ್ನೇ ಜೊತೆಗಿಟ್ಟುಕೊಂಡು ಈ ಚಿತ್ರವನ್ನು ರೂಪಿಸಿದ್ದಾರೆ.


ಇದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನೊಳಗೊಂಡಿರೋ ಚಿತ್ರ. ಇಲ್ಲಿ ನಾಯಕ ನಾಯಕಿ ಎಂಬಂಥಾ ಸಿದ್ಧ ಸೂತ್ರಗಳಿಲ್ಲ. ಕಥೆಯೇ ಆ ಸ್ಥಾನ ನಿರ್ವಹಿಸುವ ರೀತಿಯಲ್ಲಿ ಸಮರ್ಥ್ ಆ ಚಿತ್ರವನ್ನು ರೂಪಿಸಿದ್ದಾರಂತೆ. ಇದು ಓರ್ವ ಮಾಸ್ಕ್ ಧರಿಸಿದ ವ್ಯಕ್ತಿಯ ಸುತ್ತಾ ಬಿಚ್ಚಿಕೊಳ್ಳುವ ಕಥೆ. ಆತನ ಬೆಂಬಿದ್ದ ಕಥೆ ಪ್ರೇಕ್ಷಕರನ್ನು ಕ್ಷಣ ಕ್ಷಣವೂ ಕುತೂಹಲದಿಂದ ತಲ್ಲಣಿಸುವಂತೆ ಮಾಡಬಲ್ಲಷ್ಟು ಸಶಕ್ತವಾಗಿ ಈ ಚಿತ್ರ ಮೂಡಿ ಬಂದಿದೆಯಂತೆ. ಕಾರ್ಪೊರೇಟ್ ಜಾಹೀರಾತುಗಳೆಂದ ಮೇಲೆ ಅಲ್ಲಿ ಅದ್ದೂರಿತನವೇ ಜೀವಾಳ. ಅದೇ ರಿಚ್‌ನೆಸ್‌ನೊಂದಿಗೆ ಮೋಕ್ಷ ಮೂಡಿ ಬಂದಿದೆಯಂತೆ.

[adning id="4492"]

LEAVE A REPLY

Please enter your comment!
Please enter your name here