ಡಿಂಪಲ್ ಕ್ವೀನ್ ಈಗ ರಿಷಿಗೆ ನಾಯಕಿ!

[adning id="4492"]

ಸೀರಿಯಲ್ ಲೋಕದಲ್ಲಿ ಮಿಂಚುತ್ತಲೇ ಹಿರಿತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ನಟಿ ರಚಿತಾ ರಾಮ್. ಯಾವಾಗ ಇಂಥಾದ್ದೊಂದು ಗ್ರ್ಯಾಂಡ್ ಓಪನಿಂಗ್ ಸಿಕ್ಕಿತೋ ಆ ಕ್ಷಣದಿಂದ ಇಲ್ಲಿಯ ವರೆಗೂ ತಿರುಗಿ ನೋಡದೆ ಯಶಸ್ಸಿನ ನಾಗಾಲೋಟದಲ್ಲಿರೋ ಆಕೆಯ ಪಾಲಿಗೆ ಉಪ್ಪಿ ಜೊತೆಗಿನ ಐ ಲವ್‌ಯೂ ಚಿತ್ರ ಮತ್ತಷ್ಟು ಮೈಲೇಜ್ ಕೊಟ್ಟು ಬಿಟ್ಟಿದೆ. ಅತ್ತ ‘ಏಪ್ರಿಲ್’ನಂಥಾ ಹೊಸಾ ಅಲೆಯ ಚಿತ್ರಗಳಲ್ಲಿ ನಟಿಸುತ್ತಲೇ ಇತ್ತ ಪಕ್ಕಾ ಕಮರ್ಶಿಯಲ್ ಚಿತ್ರಗಳಲ್ಲಿಯೂ ಬ್ಯುಸಿಯಾಗಿರೋ ಡಿಂಪಲ್ ಕ್ವೀನ್ ಅದಾಗಲೇ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡು ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿಗೆ ನಾಯಕಿಯಾಗಿದ್ದಾರೆ.


ಸಿಂಪಲ್ ಸುನಿ ನಿರ್ದೇಶನ ಮಾಡಿದ್ದ ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕವೇ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಹುಡುಗ ರಿಷಿ. ಆಕ್ಷನ್, ಹಾಸ್ಯ ಸೇರಿದಂತೆ ಯಾವ ಪಾತ್ರಗಳಿಗಾದರೂ ಜೀವ ತುಂಬಬಲ್ಲ ರಿಷಿ ಪಾಲಿಗೆ ಭಿನ್ನವಾದ ಪಾತ್ರಗಳೇ ಹುಡುಕಿ ಬರುತ್ತಿವೆ. ಇದೀಗ ಅವರು ನಟಿಸಿರೋ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಬಿಡುಗಡೆಯ ಹಾದಿಯಲ್ಲಿದೆ. ಈ ಹೊತ್ತಿನಲ್ಲಿಯೇ ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿಕೊಂಡಿರೋ ಮೋಹನ್ ಸಿಂಗ್ ನಿರ್ದೇಶನದ ಚಿತ್ರದಲ್ಲಿ ಅವರು ನಾಯಕನಾಗಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ನಿಕ್ಕಿಯಾಗಿದ್ದಾರೆ.


ಇದು ವಿಶಿಷ್ಟವಾದ ಕಥೆಯನ್ನೊಳಗೊಂಡಿರೋ ಸಿನಿಮಾ. ಇಲ್ಲಿ ರಚಿತಾ ಪಾಲಿಗೂ ಲವಲವಿಕೆಯ, ಹೊಸತನದ ಪಾತ್ರವೇ ಸಿಕ್ಕಿದೆ. ಆಕೆ ಅನಿವಾಸಿ ಭಾರತೀಯಳಾಗಿ ನಟಿಸಿದರೆ, ರಿಷಿ ಸಾಧಾರಣ ಪಟ್ಟಣದ ಹುಡುಗನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಈ ಹಿಂದೆ ನಿರ್ದೇಶಕರಾದ ಯೋಗರಾಜ ಭಟ್ ಮತ್ತು ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ರಿಷಿ ನಾಯಕನಾಗಲಿದ್ದಾರೆಂಬ ಗುಲ್ಲೆದ್ದಿತ್ತು. ಆ ಸಿನಿಮಾ ಕಥೆ ಏನಾಯ್ತೋ ಗೊತ್ತಿಲ್ಲ. ಆದರೆ, ಯೋಗರಾಜ ಭಟ್ಟರ ಶಿಷ್ಯನ ಚಿತ್ರದಲ್ಲಿ ರಿಷಿ ನಾಯಕನಾಗೋದು ಪಕ್ಕಾ. ಇದರ ಟೈಟಲ್ ಸೇರಿದಂತೆ ಇನ್ನೊಂದಷ್ಟು ಸಂಗತಿಗಳ ಬಗ್ಗೆ ಇಷ್ಟರಲ್ಲಿಯೇ ಅಧಿಕೃತ ಮಾಹಿತಿ ಹೊರ ಬೀಳಲಿದೆ

[adning id="4492"]

LEAVE A REPLY

Please enter your comment!
Please enter your name here