ಬಬ್ರೂ’ಗಾಗಿ ಅಮೆರಿಕಾದಿಂದ ಬಂದಿಳಿದ ಮಂಗಳೂರು ಚೆಲುವೆ!

[adning id="4492"]

ಬೆಳದಿಂಗಳ ಬಾಲೆಯಾಗಿ ಕನ್ನಡ ಸಿನಿಮಾ ಪ್ರೇಕ್ಷಕರ ಮನದಂಗಳದಲ್ಲಿ ಬೆಳುದಿಂಗಳಂಥಾ ನೆನಪನ್ನುಳಿಸಿರುವವರು ಸುಮನ್ ನಗರ್‌ಕರ್. ಈ ಚಿತ್ರದ ಮೂಲಕವೇ ಕನ್ನಡದಲ್ಲಿ ಮಿಂಚಿದ್ದ ಅವರು ನಂಟರದಲ್ಲಿ ನಟಿಯಾಗಿ ನಾನಾ ರೂಪಾಂತರ ಹೊಂದಿ, ಹಲವಾರು ಪಾತ್ರಗಳನ್ನು ನಿರ್ವಹಿಸಿ ಇದೀಗ ನಿರ್ಮಾಪಕಿಯಾಗಿದ್ದಾರೆ. ಅವರ ನಿರ್ಮಾಣದಲ್ಲಿಯೇ ‘ಬಬ್ರೂ’ ಅಂತೊಂದು ಸಿನಿಮಾ ರೆಡಿಯಾಗಿದೆ. ಈ ಮೂಲಕ ಕೈ ತುಂಬಾ ಕಾಸು ಬರೋ ಕೆಲಸ ಹಿಡಿದು ಅಮೆರಿಕಾ ಪಾಲಾಗಿದ್ದ ಮಂಗಳೂರಿನ ಚೆಲುವೆ ಗಾನಾ ಭಟ್ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ.


ಮಂಗಳೂರಿನಲ್ಲಿಯೇ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿಕೊಂಡಿದ್ದ ಗಾನಾ ಭಟ್ ಪಾಲಿಗೆ ಆ ಹೊತ್ತಿನಲ್ಲಿಯೇ ಸಿನಿಮಾ ಕನಸು ಆವರಿಸಿಕೊಂಡಿತ್ತು. ಶಾಲಾ ಕಾಲೇಜು ದಿನಗಳಲ್ಲಿಯೇ ನೃತ್ಯದಲ್ಲಿ ಪಾರಂಗತೆಯಾಗಿದ್ದ ಗಾನಾ ನಟಿಯಾಗಲು ಬೇಕಾದ ಎಲ್ಲ ಅರ್ಹತೆಗಳನ್ನೂ ತನ್ನದಾಗಿಸಿಕೊಂಡಿದ್ದರು. ಆದರೆ ಮನೆ ಮಂದಿಗೆ ಈಕೆ ಲಕ್ಷಣವಾಗಿ ಓದಿ ಒಂದೊಳ್ಳೆ ಕೆಲಸ ಹಿಡಿದು ಸೆಟಲ್ ಆಗಲಿ ಎಂಬಂಥಾ ಆಸೆಯಿತ್ತು. ಅದಕ್ಕೆ ಕಟ್ಟು ಬಿದ್ದ ಗಾನಾ ಚೆಂದದ ಕೆಲಸ ಗಿಟ್ಟಿಸಿಕೊಂಡು ಅಮೆರಿಕದಲ್ಲಿ ಕಾರ್ಯಾರಂಭ ಮಾಡಿದ್ದರು. ಆದರೆ ಸಿನಿಮಾ ಕನಸೆಂಬುದು ಎತ್ತ ಎಸೆದರೂ ಹಾರಿ ಬಂದು ಮಿನುಗೋ ಮಿಂಚುಹುಳದಂಥಾದ್ದು. ಅದರ ಬೆಳಕಿನ ಪ್ರಭೆಯಿಂದ ತಪ್ಪಿಸಿಕೊಳ್ಳಲಾರದ ಗಾನಾ ಕಡೆಗೂ ತಮ್ಮ ಆಸಕ್ತಿಗನುಗುಣವಾದ ನಿರ್ಧಾರವನ್ನೇ ಕೈಗೊಂಡಿದ್ದರು.


ವರ್ಷಗಳಿಂದೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಡ್ಯಾನ್ಸು ಮಾಡುತ್ತಾ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡಿದ್ದ ಗಾನಾ, ಕಿರು ಚಿತ್ರಗಳಲ್ಲಿ ನಟಿಸಲಾರಂಭಿಸಿದ್ದರು. ವರ್ಷಗಳ ಹಿಂದೆ ಹಿಂದಿ ಸಿನಿಮಾದಲ್ಲಿಯೂ ನಟಿಸಿದ್ದರು. ಬಳಿಕ ಅದೇನಾಯ್ತೋ… ಮತ್ತೆ ಅಮೆರಿಕಾ ಸೇರಿಕೊಂಡಿದ್ದ ಅವರು ಬಬ್ರೂ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆರ್ನಿ ಕಥೆ ಹೊಂದಿರೋ ಈ ಚಿತ್ರದಲ್ಲಿ ಅವರು ನಾಯಕಿಯಾಗಿ ನೆಲೆಗಾಣಿಸುವಂಥಾ ಶಶಕ್ತ ಪಾತ್ರದಲ್ಲಿ ನಟಿಸಿದ್ದಾರಂತೆ. ಸುಮನ್ ನಗರ್‌ಕರ್ ಬಲು ಆಸ್ಥೆಯಿಂದ ನಿರ್ಮಾಣ ಮಾಡಿರೋ ಈ ಚಿತ್ರದ ಕಥಾ ಎಳೆ ಕನ್ನಡಕ್ಕೆ ಅಪರೂಪದ್ದಂತೆ. ಅಂತೂ ಈ ಮೂಲಕ ಮಂಗಳೂರಿನ ಹುಡುಗಿಯ ಮಹಾ ಕನಸು ನನಸಾದಂತಾಗಿದೆ.

[adning id="4492"]

LEAVE A REPLY

Please enter your comment!
Please enter your name here