ನೀಲಿತಾರೆ ಸನ್ನಿ ಲಿಯೋನ್ ಕಳ್ಳಿಯಂತೆ!

[adning id="4492"]

ನೀಲಿತಾರೆಯಾಗಿ ಗುರುತಿಸಿಕೊಂಡು ಇತ್ತೀಚಿನ ದಿನಗಳಲ್ಲಿ ನಟಿಯಾಗಿಯೂ ಮುನ್ನೆಲೆಗೆ ಬಂದಿರುವಾಕೆ ಸನ್ನಿ ಲಿಯೋನ್. ಮಡಿವಂತಿಕೆಯ ಮಡ್ಡು ಹಿಡಿದ ಮನಸುಗಳಿಗೆ ಸನ್ನಿ ಲಿಯೋನ್ ಎಂದರೆ ಬೆತ್ತಲಾಗುತ್ತಲೇ ಕಾಸು ಮಾಡಿಕೊಳ್ಳುವವಳು. ಹೀಗೆ ಮಡಿವಂತಿಕೆಯ ನೆಲೆಗಟ್ಟಿನಲ್ಲಿ ಮಣಗಟ್ಟಲೆ ಪುಂಗುವ ಆಸಾಮಿಗಳೇ ಕದ್ದೂ ಕದ್ದು ಆಕೆಯ ವಿಡಿಯೋಗಳನ್ನು ನೋಡುತ್ತಾ ಬಿಸಿಯೇರಿಸಿಕೊಳ್ಳುತ್ತಾರೆಂಬುದು ಆಕೆಯ ಬೆತ್ತಲಿನಷ್ಟೇ ಸ್ಪಷ್ಟವಾದ ಸತ್ಯ. ಆದರೆ ಕರಣ್‌ಜಿತ್ ಕೌರ್ ಎಂಬ ಹುಡುಗಿ ಪಾರ್ನ್ ತಾರೆಯಾಗಿ ಬದಲಾದದ್ದರ ಹಿಂದೆಯೂ ಒಂದು ಕರುಣ ಕಥೆಯಿದೆ. ಎದೆಯೊಳಗೆ ಅಂಥಾದ್ದೊಂದು ನೋವು ಮಡುಗಟ್ಟಿರೋದರಿಂದಲೇ ಆಕೆ ಅನಾಥ ಮಕ್ಕಳಿಗೆ ಅಮ್ಮನಾಗಿದ್ದಾಳೆ. ಎಲ್ಲಿಯೇ ಕಷ್ಟನಷ್ಟಗಳೆದುರಾದಾಗಲೂ ಕೈಲಾದಷ್ಟು ಸಹಾಯವನ್ನೂ ಮಾಡುತ್ತಾ ಬಂದಿದ್ದಾಳೆ. ಇದೇ ಮನಸ್ಥಿತಿಯಿಂದ ಇತ್ತೀಚೆಗೆ ಕ್ಯಾನ್ಸರ್ ರೋಗಿಗಳಿಗೆ ನೆರವಾಗೋ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸನ್ನಿಗೆ ಕಲಾಕೃತಿ ಕಳ್ಳಿಯೆಂಬ ಆರೋಪವೊಂದು ಮೆತ್ತಿಕೊಂಡಿದೆ!


ಆಗಾಗ ಸಾಮಾಜಿಕ ಕಳಕಳಿಯ ಕೆಲಸ ಕಾರ್ಯಗಳ ಮೂಲಕವೇ ಸನ್ನಿ ಲಿಯೋನ್ ಸದ್ದು ಮಾಡುತ್ತಿರುತ್ತಾಳೆ. ಇದರ ಭಾಗವಾಗಿ ಕ್ಯಾನ್ಸರ್ ರೋಗಿಗಳಿಗೆ ನೆರವಾಗೋ ಉದ್ದೇಶದಿಂದ ಸನ್ನಿ ಕಲಾಕೃತಿಯೊಂದನ್ನು ಹರಾಜಿಗಿಟ್ಟಿದ್ದಳು. ಆ ಕಲಾಕೃತಿ ತನ್ನದೆಂಬಂತೆಯೇ ಬಿಂಬಿಸಿಕೊಂಡಿದ್ದಳು. ಬಹುತೇಕರು ಅದು ಸನ್ನಿಯೇ ಬಿಡಿಸಿದ ಕಲಾಕೃತಿ ಎಂದುಕೊಂಡು ಆಕೆಯ ಬಹುಮುಖ ಪ್ರತಿಭೆಯನ್ನು ಮೆಚ್ಚಿ ಕೊಂಡಾಡಿದ್ದರು. ಆದರೆ ಈ ಕಲಾಕೃತಿ ಫ್ರಾನ್ಸ್ ದೇಶದ ಚಿತ್ರ ಕಲಾವಿದೆ ಮಲೈಕಾ ಫಾರ್ವೆ ಎಂಬಾಕೆಯದ್ದಂತೆ. ಕೆಲ ಮಂದಿ ಇನ್‌ಸ್ಟಾಗ್ರಾಮ್ ಮೂಲಕ ಈ ವಿಚಾರವನ್ನು ಬಯಲು ಮಾಡುತ್ತಿದ್ದಾರೆ. ಸನ್ನಿ ಲಿಯೋನ್ ಅವರ ಉದ್ದೇಶ ಸರಿಯಾದದ್ದೇ. ಆದರೆ ಯಾರದ್ದೋ ಕಲಾಕೃತಿಯನ್ನು ತನ್ನದೆಂಬಂತೆ ಬಿಂಬಿಸಿಕೊಂಡಿದ್ದ ತಪ್ಪು ಎಂಬ ಅಭಿಪ್ರಾಯವೇ ಎಲ್ಲೆಡೆಯಿಂದಲೂ ಕೇಳಿ ಬರುತ್ತಿದೆ.


ಆದರೆ ಈ ಬಗ್ಗೆ ಇದುವರೆಗೂ ಸನ್ನಿ ಕಡೆಯಿಂದ ಯಾವ ಸ್ಪಷ್ಟೀಕರಣವೂ ಬಂದಿಲ್ಲ. ಇದೀಗ ಸಾಮಾಜಿಕ ಜಾಲತಾಣಗಳಲ್ದಲಿ ಈ ಬಗ್ಗೆ ಪರ ವಿರೋಧದ ಚರ್ಚೆಗಳು ಕಾವೇರಿಕೊಂಡಿವೆ. ಅನೇಕರು ಇದರ ಹಿಂದೆ ಸಾಮಾಜಿಕ ಕಳಕಳಿ ಇರೋದರಿಂದ ಕೃತಿ ಚೌರ್ಯವೇನು ದೊಡ್ಡ ಸಂಗತಿಯಲ್ಲ ಎಂಬಂತೆಯೂ ಮಾತಾಡುತ್ತಿದ್ದಾರೆ. ಸನ್ನಿ ಲಿಯೋನ್ ಈ ಕೃತಿಯನ್ನು ತನ್ನದೇ ಎಂಬಂತೆ ಬಿಂಬಿಸಿಕೊಂಡು ಮೈಲೇಜು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದಾಳೆಂಬಂಥಾ ಆರೋಪಗಳೂ ಕೂಡಾ ಕೇಳಿ ಬರುತ್ತಿವೆ. ಒಟ್ಟಾರೆಯಾಗಿ ಆಗಾಗ ಮಾದಕ ಮೈಮಾಟದಿಂದ ಸುದ್ದಿ ಕೇಂದ್ರದಲ್ಲಿರೋ ಸನ್ನಿ ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳ್ಳಿ ಅನ್ನಿಸಿಕೊಂಡಿದ್ದಾಳೆ. ಇದಕ್ಕೆ ಆಕೆಯ ಕಡೆಯಿಂದ ಯಾವ ಸ್ಪಷ್ಟೀಕರಣ ಬರಬಹುದೆಂಬುದೇ ಸದ್ಯದ ಕುತೂಹಲ!

[adning id="4492"]

LEAVE A REPLY

Please enter your comment!
Please enter your name here