ಮತ್ತೆ ಹರಡಿಕೊಂಡ ಭಜರಂಗಿ ಮೇನಿಯಾ!

[adning id="4492"]

ಕೆಜಿಎಫ್ ತೆರೆ ಕಂಡು ದೇಶಾದ್ಯಂತ ಭರ್ಜರಿ ಯಶಸ್ಸು ದಾಖಲಿಸಿದ ನಂತರದಲ್ಲಿ ಬೇರೆ ಭಾಷೆಗಳಲ್ಲಿಯೂ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಸೃಷ್ಟಿಯಾಗಿದೆ. ಆದ್ದರಿಂದಲೇ ಈಗ ಕನ್ನಡದಲ್ಲಿ ತಯಾರಾಗೋ ಚಿತ್ರಗಳನ್ನು ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡುವಂತೆಯೇ ರೂಪಿಸುವ ಟ್ರೆಂಡ್ ಶುರುವಾಗಿದೆ. ಈ ಕಾರಣದಿಂದ ಕಥೆ, ಕ್ವಾಲಿಟಿಯತ್ತ ಪ್ರಧಾನವಾಗಿ ಗಮನ ಹರಿಸುವಂಥಾ ಸಕಾರಾತ್ಮಕ ಬೆಳವಣಿಗೆಯೂ ಆರಂಭವಾಗಿದೆ. ಈ ಹಾದಿಯಲ್ಲಿ ಕುರುಕ್ಷೇತ್ರ ಯಶ ಕಂಡು ಪೈಲ್ವಾನ್ ರೆಡಿಯಾಗಿರುವಾಗಲೇ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡಾ ಅದಕ್ಕಾಗಿ ತಯಾರಾಗಲಾರಂಭಿಸಿದ್ದಾರೆ. ಇಂಥಾ ಆವೇಗದೊಂದಿಗೆ ರೆಡಿಯಾಗುತ್ತಿರೋ ಭಜರಂಗಿ ೨ ಚಿತ್ರದ ಮೂರನೇ ಹಂತದ ಚಿತ್ರೀಕರಣಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ.


ಶಿವರಾಜ್ ಕುಮಾರ್ ಎ ಹರ್ಷ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಭಜರಂಗಿ ೨ ಚಿತ್ರದಲ್ಲಿ ನಟಿಸುತ್ತಿರೋ ವಿಚಾರ ಗೊತ್ತೇ ಇದೆ. ಈ ಹಿಂದೆ ಹರ್ಷ ನಿರ್ದೇಶನದಲ್ಲಿ, ಶಿವಣ್ಣನ ಕಾಂಬಿನೇಷನ್ನಿನಲ್ಲಿಜರಂಗಿ ಚಿತ್ರ ತೆರೆಗಂಡು ಯಶ ಕಂಡಿತ್ತು. ಇದೀಗ ಭಜರಂಗಿ ೨ಗಾಗಿ ಮೊದಲ ಹಂತದ ಚಿತ್ರೀಕರಣವೂ ಸುಸೂತ್ರವಾಗಿ ನಡೆದಿದೆ. ಆದರೆ ಆ ಹಂತದಲ್ಲಿಯೇ  ಭುಜದ ನೋವಿಗೆ ಶಸ್ತ್ರ ಚಿಕಿತ್ಸೆಗಾಗಿ ಲಂಡನ್ನಿಗೆ ತೆರಳಿದ ಶಿವಣ್ಣ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ರೆಡಿಯಾಗಿದ್ದಾರೆ. ಈ ಗ್ಯಾಪಿನಲ್ಲಿಯೇ ಭಜರಂಗಿ ೨ವನ್ನು ಪ್ಯಾನಿಂಡಿಯಾ ಸ್ವರೂಪದಲ್ಲಿ ರೂಪಿಸಲು ಚಿತ್ರತಂಡ ಪಕ್ಕ ಪ್ಲಾನು ಮಾಡಿಕೊಂಡಿದೆ.


ಭಜರಂಗಿ ೨ ಚಿತ್ರ ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಈ ಮೂಲಕವೇ ಶಿವರಾಜ್ ಕುಮಾರ್ ಮೊದಲ ಸಲ ಬೇರೆ ಭಾಷೆಗಳಿಗೂ ಅಡಿಯಿರಿಸೋ ಖುಷಿಯಲ್ಲಿದ್ದಾರೆ. ಈ ಹಿಂದೆ ತೆಲುಗಿನಲ್ಲಿ ಶಾತಕರ್ಣಿ ಎಂಬ ಚಿತ್ರದಲ್ಲಿ ಶಿವಣ್ಣ ಒಂದು ಪಾತ್ರ ಮಾಡಿದ್ದರು. ಅದು ಬಿಟ್ಟರೆ ಬೇರೆ ಭಾಷೆಗಳಿಗೆ ಪಾದಾರ್ಪಣೆ ಮಾಡುವತ್ತ ಅವರು ಯೋಚಿಸಿರಲೇ ಇಲ್ಲ. ಆದರೀಗ ಕನ್ನಡ ಚಿತ್ರವೊಂದರ ಮೂಲಕವೇ ಶಿವರಾಜ್ ಕುಮಾರ್ ಇತರೇ ನಾಲಕ್ಕು ಭಾಷೆಗಳಿಗೂ ಎಂಟ್ರಿ ಕೊಡಲಿದ್ದಾರೆ. ನಿರ್ದೇಶಕ ಹರ್ಷ ಈ ಬಾರಿ ಅತ್ಯಂತ ವೇಗವಾಗಿ ಚಿತ್ರೀಕರಣ ನಡೆಸುತ್ತಿದ್ದಾರೆ. ಇಂದಿನಿಂದ ಮೂರನೇ ಹಂತದ ಚಿತ್ರೀಕರಣ ಚಾಲೂ ಆಗಿ ಭಜರಂಗಿ ಮೇನಿಯಾ ಮತ್ತೆ ಶುರುವಾಗಿದೆ.

[adning id="4492"]

LEAVE A REPLY

Please enter your comment!
Please enter your name here