ಉಳಿದವರು ಕಂಡಂತೆ ಹುಡುಗಿಯ ದಾಂಪತ್ಯ ಯಜ್ಞ!

[adning id="4492"]

ನ್ನಡವೂ ಸೇರಿದಂತೆ ನಾನಾ ಬಾಷೆಗಳಲ್ಲಿ ನಾಯಕಿಯಾಗಿ ಮಿಂಚಿದ್ದವರು ಯಜ್ಞಾ ಶೆಟ್ಟಿ.  ಕನ್ನಡದಲ್ಲಿಯಂತೂ ನಾನಾ ಥರದ ಪಾತ್ರಗಳ ಮೂಲಕ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿದ್ದ ಯಜ್ಞಾ, ಉಳಿದವರು ಕಂಡಂತೆ ಚಿತ್ರದ ಮೂಲಕ ದೊಡ್ಡ ಹೆಸರು ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿಯೂ ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದ ಅವರೀಗ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತುಳು ಚಿತ್ರರಂಗದಲ್ಲಿ ಒಂದಷ್ಟು ಸಿನಿಮಾಗಳ ಮೂಲಕ ಪ್ರಸಿದ್ಧರಾಗಿರುವ ನಟ ಸಂದೀಪ್ ಶೇಟ್ಟಿಯವರೊಂದಿಗೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.


ಇತ್ತೀಚೆಗಂತೂ ತುಂಬಾನೇ ಬ್ಯುಸಿಯಾಗಿದ್ದ ಯಜ್ಞಾ ಶೆಟ್ಟಿ ವಿವಾಹ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ನಟ ನಟಿಯರನೇಕರು ಪಾಲ್ಗೊಂಡು ಶುಭ ಕೋರಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಮುಂತಾವದರೆಲ್ಲ ಯಜ್ಞಾ ಶೆಟ್ಟಿಯ ವಿವಾಹ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಯಜ್ಞಾ ಶೆಟ್ಟಿ ಎದ್ದೇಳು ಮಂಜುನಾಥ್, ಉಳಿದವರು ಕಂಡಂತೆ ಸೇರಿದಂತೆ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗೆ ಕನ್ನಡದಲ್ಲಿ ನಾಯಕಿಯಾಗಿ ಬೇಡಿಕೆ ಹೊಂದಿರುವಾಗಲೇ ಯಜ್ಞಾ ತೆಲುಗು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದರು. ತೆಲುಗಿನ ಲಕ್ಷ್ಮೀಸ್ ಎನ್‌ಟಿಆರ್ ಚಿತ್ರದಲ್ಲಿ ಎನ್‌ಟಿಆರ್ ಮಡದಿಯ ಪಾತ್ರದ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದರು.


ಈ ಮೂಲಕ ಯಜ್ಞಾ ತೆಲುಗು ಚಿತ್ರರಂಗದಲ್ಲಿ ಮತ್ತೊಂದಷ್ಟು ಅವಕಾಶಗಳ ಮೂಲಕ ಸಕ್ರಿಯರಾಗಿದ್ದಾರೆ. ಇದೇ ಹೊತ್ತಿನಲ್ಲಿ ತಮಿಳಿನಲ್ಲಿಯೂ ಒಂದಷ್ಟು ಅವಕಾಶಗಳು ಅವರನ್ನರಸಿ ಬಂದಿವೆ. ಇದೆಲ್ಲದರ ನಡುವೆಯೇ ಅವರು ಉಡುಪಿ ಮೂಲಕ ಸಂದೀಪ್ ಶೆಟ್ಟಿಯನ್ನು ವರಿಸಿದ್ದಾರೆ. ಸಂದೀಪ್ ಶೆಟ್ಟಿ ಕೂಡಾ ತುಳು ಚಿತ್ರರಂಗದಲ್ಲಿ ಖ್ಯಾತಿ ಪಡೆದುಕೊಂಡಿರೋ ನಟ. ಮದಿಮೆ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸುವ ಮೂಲಕ ಅವರು ನಟನಾಗಿ ಗುರುತಿಸಿಕೊಂಡಿದ್ದಾರೆ. ಇವರಿಬ್ಬರ ವಿವಾಹ ಸಂಭ್ರಮದಲ್ಲಿ ಕನ್ನಡ, ತುಳು ಚಿತ್ರರಂಗರ ತಾರೆಯರು ಉಪಸ್ಥಿತರಿದ್ದು ಶುಭ ಕೋರಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here