ಊರಿನ ಗ್ರಾಮಸ್ಥರಲ್ಲಿ ವಿನಂತಿ ಬರಲಿದೆ ಮತ್ತೊಂದು ‘ತಿಥಿ’!

ನ್ನಡ ಚಿತ್ರರಂಗದಲ್ಲೀಗ ಹೊಸಾ ಲಜಾಡಿನ, ಭಿನ್ನ ಆಲೋಚನೆಗಳ ಸಿನಿಮಾ ಹಂಗಾಮಾ ಶುರುವಾಗಿದೆ. ಸಿದ್ಧ ಸೂತ್ರಗಳಮ್ಮೀ ಮೀರಿಕೊಂಡ ಅನೇನಾಕಾನೆಕ ಚಿತ್ರಗಳು ಸಾಲು ಸಾಲಾಗಿ ತಯಾರಾಗುತ್ತಿವೆ. ವರ್ಷಾಂತರಗಳ ಹಿಂದೆ ತಿಥಿ ಎಂಬ ಗ್ರಾಮೀಣ ಸೊಗಡಿನ ಸಹಜ ಸುಂದರ ಚಿತ್ರವೊಂದು ತೆರೆಗಂಡು ಸೂಪರ್ ಹಿಟ್ ಆಗಿತ್ತು. ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡು ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಎಂಬ ತಿಥಿಯ ಜಾಡಿನ ಚಿತ್ರವೊಂದು ತಯಾರಾಗಿದೆ. ಚಿತ್ರತಂಡವೀಗ ಅದರ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದೆ.


ಇದು ಸಂಪೂರ್ಣ ಗ್ರಾಮೀಣ ಸೊಗಡಿನ ಚಿತ್ರ. ಸಖತ್ ಕಾಮಿಡ್ ಪಂಚ್ ಡೈಲಾಗುಗಳ ಮೂಲಕವೇ ಈ ಸಿನಿಮಾ ಟ್ರೇಲರ್ ಪ್ರೇಕ್ಷಕರನ್ನು ಆಕರ್ಷಿಸಿಕೊಂಡಿದೆ. ಎಂ ವೈ ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದಲ್ಲಿ ರಮ್ಯಾ, ರಾಹುಲ್, ಉದಯ್ ಮತ್ತು ಅರುಣ್ ಕುಮಾರ್ ಮುಂತಾದವರು ಮುಖ್ಯ ಪಾತ್ರಧಾರಿಗಳಾಗಿ ನಟಿಸಿದ್ದಾರೆ. ಗ್ರಾಮವೊಂದರಲ್ಲಿ ನಡೆಯೋ ಫ್ಯಾಮಿಲಿ ಕಥೆಗೆ ಸಂಪೂರ್ಣವಾಗಿ ಕಾಮಿಡಿ ಟಚ್ ಕೊಟ್ಟು ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ಫ್ರೆಶ್‌ನೆಸ್ ಇದೀಗ ಬಂದಿರೋ ಟ್ರೇಲರ್‌ನಲ್ಲಿ ಸ್ಪಷ್ಟವಾಗಿಯೇ ಕಾಣಿಸುತ್ತಿದೆ.


ಕುಡಕು ಆಸಾಮಿಯಂಥಾ ಗಂಡ ಹೆಂಡತಿ ಮತ್ತು ಮಗನ ನಡುವೆ ನಡೆಯೋ ಕಥೆಯ ಈ ಚಿತ್ರದಲ್ಲಿ ಅಪರೂಪದ ಹಳ್ಳಿ ವಾತಾವರಣವನ್ನು ಸೆರೆ ಹಿಡಿಯಲಾಗಿದೆ. ಹಳ್ಳಿಗಾಡಿನ ಆತ್ಮದಂತಿರೋ ಬಯಲಾಟಯದಂಥಾ ಕಲೆಗಳ ಮೂಲಕವೇ ಪಕ್ಕಾ ಮನೋರಂಜನೆಯ ಜಾಡಿನಲ್ಲಿ ಈ ಸಿನಿಮಾ ರೂಪುಗೊಂಡಿದೆ. ಯಾವ ಬಿಲ್ಡಪ್ಪುಗಳೂ ಇಲ್ಲದೇ ಅತ್ಯಂತ ಸಹಜವಾಗಿ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ಈ ಟ್ರೇಲರ್ ನೋಡಿದರೆ ವರ್ಷಗಳ ನಂತರ ಮತ್ತೆ ‘ತಿಥಿ; ಶುರುವಾಗೋ ಲಕ್ಷಣಗಳೂ ಢಾಳಾಗಿಯೇ ಗೋಚರಿಸುತ್ತಿವೆ.

LEAVE A REPLY

Please enter your comment!
Please enter your name here