ಸ್ಟಾರ್ ಕನ್ನಡಿಗ: ಸವಾಲುಗಳ ಸಂತೆಯಲ್ಲೂ ಗೆಲುವಿನ ಕನಸು!

[adning id="4492"]

ಸಿನಿಮಾ ಎಂಬುದು ಒಂದು ಕಲೆಯೆಂಬುದರಾಚೆಗೆ ಈಗ ಅದೊಂದು ಉದ್ಯಮವಾಗಿ ಬದಲಾಗಿ ಬಿಟ್ಟಿದೆ. ಈ ಕಾರಣದಿಂದಲೇ ಸಿನಿಮಾ ಮಾಡಲು ಕನಸು ಪ್ರತಿಭೆಗಳಿದ್ದರೆ ಮಾತ್ರವೇ ಸಾಲದು, ಕೈ ತುಂಬಾ ಬಂಡವಾಳವೂ ಇರಲೇ ಬೇಕಾದದ್ದು ಅವಶ್ಯಕ. ಸಿನಿಮಾ ನಿರ್ಮಾಣ ಅನ್ನೋದು ಕಾಸಿರೋ ಉದ್ಯಮಿಗಳಿಗೆ ಮಾತ್ರವೇ ತಕ್ಕುದಾದ ಕೆಲಸ ಎಂಬಂಥಾ ವಾತಾವರಣವೂ ಇದೆ. ಇಂಥಾ ವಾತಾವರಣದಲ್ಲಿ ಜನಸಾಮಾನ್ಯರೇ ಸಿನಿಮಾ ನಿರ್ಮಾಣ ಮಾಡೋದೆಂದರೆ ಅದೊಂದು ಮಹಾ ಸಾಹಸ. ಈ ವಾರ ತೆರೆ ಕಾಣಲು ರೆಡಿಯಾಗಿರುವ ಸ್ಟಾರ್ ಕನ್ನಡಿಗ ಚಿತ್ರ ಅಂಥಾ ಸಾಹಸವನ್ನು ಸಾಧ್ಯವಾಗಿಸಿದೆ.


ಇದು ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಚಿತ್ರ. ಇದರೊಂದಿಗೆ ನಿರ್ಮಾಣದಲ್ಲಿಯೂ ಅವರು ಭಾಗಿಯಾಗಿದ್ದಾರೆ. ಅಂದಹಾಗೆ ಈ ಸಿನಿಮಾವನ್ನು ಆಟೋ ಮತ್ತು ಓಲಾ ಕ್ಯಾಬ್ ಚಾಲಕ ಗೆಳೆಯರೇ ಸೇರಿ ನಿರ್ಮಾಣ ಮಾಡಿದ್ದಾರೆ. ಇವರೆಲ್ಲ ಆಟೋ ಚಾಲಕರಾಗಿದ್ದುಕೊಂಡು ಅದರಿಂದ ಬಂದ ಕಾಸಲ್ಲಿ ಕಷ್ಟಪಟ್ಟು ಜವಾಬ್ದಾರಿ ನಿರ್ವಹಣೆ ಮಾಡುವವರು. ಅವರೆಲ್ಲರೂ ಸಿನಿಮಾ ನಿರ್ಮಾಣದಂಥಾ ಮಹಾ ಸಾಹಸಕ್ಕೆ ಎದೆ ಕೊಡುವಂತೆ ಪ್ರೇರೇಪಿಸಿದ್ದು ಸ್ನೇಹ. ತಮ್ಮ ಗೆಳೆಯ ಮಂಜುನಾಥ್‌ರ ಸಿನಿಮಾ ಕನಸು, ಪ್ರತಿಭೆಗಳಿಗೆ ಹೇಗಾದರೂ ಒತ್ತಾಸೆಯಾಗಬೇಕೆಂಬ ಆಕಾಂಕ್ಷೆಯಿಂದಲೇ ಅವರೆಲ್ಲ ಸ್ಟಾರ್ ಕನ್ನಡಿಗ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದರಂತೆ.


ಹಾಗೆ ಎಲ್ಲೆಲ್ಲಿಂದಲೋ ಕಾಸು ಹೊಂದಿಸಿ ಚಿತ್ರೀಕರಣ ಆರಂಭಿಸಿದ್ದ ಇವರಿಗೆಲ್ಲ ತಿಂಗಳು ಕಳೆಯೋದರೊಳಗಾಗಿಯೇ ಅದರ ನಿಜವಾದ ಸವಾಲುಗಳೇನೆಂಬುದರ ಅರಿವಾಗಲಾರಂಭಿಸಿತ್ತು. ತೀರಾ ಕೈ ತುಂಬಾ ಕಾಸಿಟ್ಟುಕೊಂಡವರಿಗೇ ಸಿನಿಮಾ ಆರಂಭಿಸಿದ ಮೇಲೆ ಸಾಲು ಸಾಲಾಗಿ ಸವಾಲುಗಳೆದುರಾಗುತ್ತವೆ. ಎಷ್ಟೋ ಚಿತ್ರಗಳ ಏಕಾಏಕಿ ಸದ್ದಡಗಿಸಿಕೊಳ್ಳೋದರ ಹಿಂದೆಯೂ ಇಂಥಾ ಆರ್ಥಿಕ ಹೊಡೆತದ ಬಾಧೆಯಿರುತ್ತದೆ. ಹಾಗಿದ್ದ ಮೇಲೆ ಆಟೋ ಡ್ರೈವರುಗಳನ್ನು ಆರ್ಥಿಕ ಬಾಧೆ ಕಂಗೆಡಿಸದೇ ಇರಲು ಸಾಧ್ಯವೇ? ಆರಂಭವಾಗಿ ಒಂದಷ್ಟು ಸಮಯ ಕಳೆಯೋದರೊಳಗಾಗಿ ಆರ್ಥಿಕ ಹೊಡೆತ ಬೀಳಲಾರಂಭಿಸಿತ್ತು. ಆ ನಂತರದ್ದು ಭಯಂಕರ ಸರ್ಕಸ್ಸು.


ಹೀಗೆ ಒಂದು ಬಾರಿ ಕಾಸು ಖಾಲಿಯಾದಾಉಗ ಚಿತ್ರೀಕರಣ ನಿಲ್ಲಿಸದಿ ನಂತರ ಹೇಇಗೋ ಕಾಸು ಹೊಂದಿಸಿ ಮತ್ತೆ ಚಿತ್ರೀಕರಣ ಶುರು ಮಾಡುತ್ತಿದ್ದರು. ನಂತರ ನಿಲ್ಲಿಸಿ ಕಾಸು ಹೊಂದಿಸೋ ಕಸರತ್ತು ಮುಂದುವರೆಯುತ್ತಿತ್ತು. ಬಹುಶಃ ಮಂಜುನಾಥ್ ಮತ್ತವರ ತಂಡಪಕ್ಕೆ ನಿಜವಾದ ಸಿನಿಮಾ ಪ್ರೇಮ ಇಲ್ಲದಿದ್ದರೆ ಸ್ಟಾರ್ ಕನ್ನಡಿಗ ಉಸಿರೆತ್ತೋದೇ ಸಾಧ್ಯವಾಗುತ್ತಿರಲಿಲ್ಲ. ಇಂಥಾ ನಾನಾ ಪಡಿಪಾಟಲುಗಳನ್ನು ಜಯಿಸಿಕೊಂಡೇ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹೊಸಬರ ಚಿತ್ರವೀಗ ಒಂದಷ್ಟು ನಿರೀಕ್ಷೆಗಳನ್ನೂ ಮೂಡಿಸಿವೆ. ಇದರಲ್ಲಿ ವಿ ಆರ್ ಮಂಜುನಾಥ್‌ಗೆ ಶಾಲಿನಿ ಭಟ್ ಜೋಡಿಯಾಗಿ ನಟಿಸಿದ್ದಾರೆ. ಬದುಕಿಗೆ ಹತ್ತಿರವಾದ ಕಥೆ ಮತ್ತು ಅದ್ದೂರಿ ತಾರಾಗಣದೊಂದಿಗೆ ಸ್ಟಾರ್ ಕನ್ನಡಿಗ ಕನ್ನಡ ರಾಜ್ಯೋತ್ಸವದಂದು ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾನೆ.

[adning id="4492"]

LEAVE A REPLY

Please enter your comment!
Please enter your name here