ಬರಗೂರರ ಗರಡಿಯಲ್ಲಿ ನೀರ್ ದೋಸೆ ಹರಿಪ್ರಿಯಾ!

ಟನೆಯಲ್ಲಿ ಒಂದು ಹಂತ ದಾಟಿಕೊಂಡ ನಂತರ ಏಕತಾನತೆ ಕಾಡಿದಂತಾಗಿ ಹೊಸಾ ಬಗೆಯ ಪಾತ್ರಗಳತ್ತ ಹೊರಳಿಕೊಳ್ಳುವುದು ಪರಿಪೂರ್ಣತೆಯ ಲಕ್ಷಣ. ಚಿತ್ರರಂಗದಲ್ಲಿ ಒಂದಷ್ಟು ಭಿನ್ನ ಬಗೆಯ ಸಿನಿಮಾಗಳು ಸೃಷ್ಟಿಯಾಗೋದರಲ್ಲಿಯೂ ಇಂಥಾ ಮನಸ್ಥಿತಿ ರೂಪುಗೊಳ್ಳೋದರ ಪಾತ್ರ ಹಿರಿದಾಗಿದೆ. ಸದ್ಯಕ್ಕೆ ಸ್ಟಾರ್ ನಟರರ್ಯಾರೂ ಅಂಥಾದ್ದರತ್ತ ಹೊರಳಿಯೂ ನೋಡೋ ವಾತಾವರಣವಿಲ್ಲ. ಸೀಮೆಗಿಲ್ಲದ ಬಿಲ್ಡಪ್ಪು, ಸಿದ್ಧಸೂತ್ರದಿಂದ ಆಚೀಚೆ ಹೊರಳಿಕೊಳ್ಳದೆ ಇಮೇಜೆಂಬ ಭ್ರಮೆಗೆ ಬಹುತೇಕ ನಟರು ಗಂಟುಬಿದ್ದಿದ್ದಾರೆ. ಇಂಥಾದ್ದರ ನಡುವೆ ಹರಿಪ್ರಿಯಾರಂಥ ನಟಿಯರು ಭಿನ್ನ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡೋದರ ಮುಂದೆ ಇಮೇಜ್ ಎಂಬುದೆಲ್ಲ ಲೆಕ್ಕಕ್ಕಿಲ್ಲ ಎಂಬಂಥಾ ಧೋರಣೆಯಿಂದ ಮುಂದುವರೆಯುತ್ತಿದ್ದಾರೆ.


ಬಹುಶಃ ಅಂಥಾ ಮನಸ್ಥಿತಿ ಇಲ್ಲದೇ ಹೋಗಿದ್ದರೆ ಹರಿಪ್ರಿಯಾ ನೀರ್‌ದೋಸೆಯಂಥಾ ಸಿನಿಮಾಗಳಲ್ಲಿ ನಟಿಸೋದೇ ಸಾಧ್ಯವಿರುತ್ತಿಲ್ಲವೇನೋ… ಸುದೀರ್ಘಾವಧಿಯಲ್ಲಿ ಸರಣಿಯೋಪಾದಿಯಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಬ್ಯುಸಿಯಾಗಿದ್ದ ಹರಿಪ್ರಿಯಾ ಈಗ ಪ್ರವಾಸ ಮುಗಿಸಿಕೊಂಡು ವಾಪಾಸಾಗಿದ್ದಾರೆ. ಮುಂದೆ ಅವರು

ಯಾವ ಸಿನಿಮಾವನ್ನು ಒಪ್ಪಿಕೊಳ್ಳಬಹುದೆಂಬ ಪ್ರೇಕ್ಷಕರ ಪ್ರಶ್ನೆಗೀಗ ಉತ್ತರವೂ ಸಿಕ್ಕಿದೆ. ಅವರೀಗ ಖ್ಯಾತ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ಸಿನಿಮಾದಲ್ಲಿ ನಾಯಕಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ.
ಇದು ಮಹಾಕವಿ ಜನ್ನನ ಯಶೋಧರ ಚರಿತೆ ಕಾವ್ಯಾಧಾರಿತ ಚಿತ್ರ. ಇದಕ್ಕೆ ಅಮೃತಮತಿ ಎಂಬ ಶೀರ್ಷಿಕೆಯೂ ನಿಗಧಿಯಾಗಿದೆ. ಈ ಸಿನಿಮಾದಲ್ಲಿ ಹರಿಪ್ರಿಯಾ ಯಶೋಧರನ ಮಡದಿಯಾಗಿ, ಇಡೀ ಕಥೆಯ ಕೇಂದ್ರಬಿಂದುವಿನಂಥಾ ಪಾತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಈ ಬಗ್ಗೆ ಹರಿಪ್ರಿಯಾಗೇ ಪುಳಕವಿದೆ. ಯಾಕೆಂದರೆ, ಇಂಥಾ ಪಾತ್ರದಲ್ಲಿ ನಟಿಸಬೇಕೆಂಬ ಕನಸನ್ನು ಹಲವಾರು ವರ್ಷಗಳಿಂದ ಅವರು ಸಾಕಿಕೊಂಡಿದ್ದರಂತೆ. ಕಮರ್ಶಿಯಲ್ ಸಿನಿಮಾಗಳಲ್ಲಿ ಸಾಲು ಸಾಲಾಗಿ ನಟಿಸಿ, ಈಗಲೂ ಅಗಾಧ ಅವಕಾಶಗಳನ್ನು ಹೊಂದಿರೋ ಹರಿಪ್ರಿಯಾ ಈ ಮೂಲಕ ಮತ್ತೊಂದು ಬದಲಾವಣೆಗೆ ಒಗ್ಗಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here