ಬಿಡುಗಡೆಯಾಯ್ತು ಕಪಟ ನಾಟಕ ಪಾತ್ರಧಾರಿಯ ವೀಡಿಯೋ ಸಾಂಗ್!

[adning id="4492"]

ಕ್ರಿಶ್ ನಿರ್ದೇಶನದ ಕಪಟ ನಾಟಕ ಪಾತ್ರಧಾರಿ ತೆರೆಗಾಣಲು ದಿನಗಣನೆ ಶುರುವಾಗಿದೆ. ಈ ಹಿಂದೆ ಒಂದು ಟ್ರೇಲರ್ ಮತ್ತು ಹಂತ ಹಂತವಾಗಿ ಬಿಡುಗಡೆಯಾಗುತ್ತಾ ಬಂದಿದ್ದ ಚೆಂದದ ಹಾಡುಗಳ ಮೂಲಕವೇ ಈ ಚಿತ್ರ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಯಾವ ಪ್ರಚಾರದ ಗಿಮಿಕ್ಕುಗಳೂ ಇಲ್ಲದೆ ಹೀಗೆ ಹಾಡುಗಳ ಹಬ್ಬ ಸೃಷ್ಟಿಸಿ ಈ ಸಿನಿಮಾ ಕ್ರೇಜ್ ಹುಟ್ಟು ಹಾಕಿತ್ತು. ಇದರ ಭಾಗವಾಗಿತೇ ತಿಂಗಳ ಹಿಂದೆ ‘ಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ’ ಅಂತೊಂದು ಹಾಡು ಬಿಡುಗಡೆಯಾಗಿತ್ತು. ಹೊಸತನದ ಸಾಹಿತ್ಯ ಮತ್ತು ಸೌಂಡಿಂಗ್‌ನೊಂದಿಗೆ ಮನ ಸೆಳೆದಿದ್ದ ಈ ಹಾಡಿನ ವೀಡಿಯೋ ಇದೀಗ ಬಿಡುಗಡೆಗೊಂಡಿದೆ.


ಸಾಹಿತ್ಯಕ್ಕೆ ತಕ್ಕುದಾದ ದೃಷ್ಯಾವಳಿಗಳೊಂದಿಗೆ ಮೂಡಿ ಬಂದಿರೋ ಈ ವೀಡಿಯೋ ಒಂದೇ ಸಲಕ್ಕೆ ಯಾರನ್ನಾದರೂ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಆದಿಲ್ ನದಾಫ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದ್ದ ಈ ಹಾಡಿನಲ್ಲಿ ಬಾಲು ನಾಗೇಂದ್ರ ಮತ್ತು ಸಂಗೀತ ಭಟ್ ರೊಮ್ಯಾಂಟಿಕ್ ಮೂಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹುಲಿರಾಯ ನಂತರದಲ್ಲಿ ಬಾಲು ನಾಗೇಂದ್ರ ನಟಿಸುತ್ತಿರೋ ಈ ಚಿತ್ರ ಇದೇ ನವೆಂಬರ್ ಎಂಟನೇ ತಾರೀಕಿನಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈಗಾಗಲೇ ಈ ಸಿನಿಮಾ ಮೇಲೆ ಕೀಲಿಸಿಕೊಂಡಿರೋ ಕುತೂಹಲವನ್ನು ಸದರಿ ವಿಡಿಯೋ ಸಾಂಗ್ ಮತ್ತಷ್ಟು ತೀವ್ರವಾಗಿಸುವಂತಿದೆ.


ಬಾಲು ನಾಗೇಂದ್ರ ಮತ್ತು ಸಂಗೀತಾ ಭಟ್ ನಾಯಕ ನಾಯಕಿಯರಾಗಿರೋ ಈ ಚಿತ್ರದತ್ತ ಸದರಿ ವೀಡಿಯೋ ಸಾಂಗ್ ಮೂಲಕವೇ ಪ್ರೇಕ್ಷಕರ ಚಿತ್ರ ನೆಟ್ಟುಕೊಂಡಿದೆ. ಈ ಚಿತ್ರವನ್ನು ಕಥೆ, ಚಿತ್ರಕಥೆ ಬರೆದು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಈ ಹಾಡಿಗೆ ವೇಣು ಹಸ್ರಾಳಿ ಸಾಹಿತ್ಯ ಒದಗಿಸಿದ್ದರೆ, ಆದಿಲ್ ನದಾಫ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹರಿಚರಣ್ ಶೇಷಾದ್ರಿಯವರ ಕಂಠದಲ್ಲಿ ಮೂಡಿ ಬಂದಿರೋ ಈ ಹಾಡು ಹೊಸಾ ಪ್ರಯೋಗ ಹಾಗೂ ರೊಮ್ಯಾಂಟಿಕ್ ಶೈಲಿಯಲ್ಲಿ ಸಿನಿಮಾ ಪ್ರೇಮಿಗಳ ಮನಗೆದ್ದಿದೆ. ಇನ್ನುಳಿದಂತೆ ಶ್ರೀಕಾಂತ್ ಸಂಕಲನ, ಪರಮೇಶ್ ಛಾಯಾಗ್ರಹಣ, ಕಿರಣ್ ಚಂದ್ರ, ವೇಣು ಹಸ್ರಾಳಿ ಸಂಭಾಷಣೆ, ಕ್ರಿಶ್, ಚಾಣಕ್ಯ, ವೇಣು ಹಸ್ರಾಳಿ ಮತ್ತು ಅನಿರುದ್ಧ್ ಶಾಸ್ತ್ರಿ ಸಾಹಿತ್ಯವಿದೆ.

[adning id="4492"]

LEAVE A REPLY

Please enter your comment!
Please enter your name here