ಬಿಗ್‌ಬಾಸ್: ಬುಸ್ ಅನ್ನೋ ನಾಗಿಣಿ ದೀಪಿಕಾ ಯಶ್ ತಂಗಿ!

[adning id="4492"]

ಬಾರಿ ಬಿಗ್ ಬಾಸ್ ಮನೆ ಸೀರಿಯಲ್ ನಟಿಯರಿಂದಲೇ ತುಂಬಿ ತುಳುಕುತ್ತಿದೆ. ಬಿಗ್‌ಬಾಸ್ ಎಂಬುದು ಬಕ್ವಾಸ್ ಶೋ ಎಂಬುದು ಈ ಹಿಂದಿನ ಸೀಜನ್ನುಗಳಲ್ಲಿಯೇ ಸಾಬೀತಾಗಿದ್ದರೂ ಕೂಡಾ, ಬೇರೆಯವರ ಬದುಕಿನ ಬಗ್ಗೆ ಇರೋ ಮನುಷ್ಯ ಸಹಜ ಕುತೂಹಲವೇ ಈ ಶೋವನ್ನು ಹೇಗೋ ಬಚಾವು ಮಾಡುತ್ತಿದೆ. ಪ್ರತೀ ಬಾರಿ ಬಿಗ್ ಬಾಸ್ ಮುಗಿದಾಗಲೂ ಖುದ್ದು ಕಿಚ್ಚನನ್ನು ಮೆಚ್ಚಿಕೊಳ್ಳುವ ಮಂದಿಯೇ ಮುಂದಿನ ಸಲ ಅವರು ಈ ಶೋವನ್ನು ನಡೆಸಿ ಕೊಡದಿದ್ದರೇ ಉತ್ತಮ ಅಂದುಕೊಳ್ಳೋದು ಸತ್ಯ. ಆದರೆ ಒಂದು ವರ್ಷ ಕಳೆಯುತ್ತಲೇ ಮತ್ತೆ ಅದು ಮಿಥ್ಯವಾಗಿ ಬಿಗ್‌ಬಾಸ್ ಭರಾಟೆ ಹುರಿಗೊಳ್ಳಲಾರಂಭಿಸುತ್ತೆ. ಈ ಬಾರಿಯೂ ಅದು ಆರಂಭವಾಗಿ ಒಂದು ವಾರ ಕಳೆದಿದೆ.


ಈ ಬಾರಿ ವೀಕ್ಷಕರನ್ನು ರಂಜಿಸಬಲ್ಲ ಸ್ಪರ್ಧಿಗಳ ಸಂಖ್ಯೆಯೇ ಕಡಿಮೆ ಇದೆ. ಅಲ್ಲಿರೋ ಸ್ಪರ್ಧಿಗಳ ನಡುವೆ ಪ್ರೇಮಪ್ರಕರಣಗಳನ್ನು ಹುಟ್ಟು ಹಾಕಿ ಮ್ಯಾನೇಜು ಮಾಡಿದರೂ ಅದು ಈಗಾಗಲೇ ಸವಕಲಾಗಿದೆ. ಮಜಾ ಟಾಕೀಸ್ ಶೋ ಮೂಲಕ ಯಾರೋ ಬರೆದು ಕೊಟ್ಟ ಡೈಲಾಗುಗಳನ್ನು ಉರು ಹೊಡೆದು ಒಪ್ಪಿಸುತ್ತಿದ್ದ ಕುರಿ ಪ್ರತಾಪ್ ಏಳ ಬಾರದ ಜಾಗದಲ್ಲಿ ಕುರ ಎದ್ದವರಂತೆ ಬಾತುಮೋರೆ ಹಾಕಿ ಕೂತು ಬಿಟ್ಟಿದ್ದಾನೆ. ಇದೆಲ್ಲದರಾಚೆಗೆ ಒಂದಷ್ಟು ಸ್ಪರ್ಧಿಗಳು ಒಂದಿಷ್ಟು ಕುತೂಹಲ ಮೂಡಿಸಿರೋದನ್ನು ಅಲ್ಲಗಳೆಯುವಂತಿಲ್ಲ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವಾಕೆ ದೀಪಿಕಾ ಅಲಿಯಾಸ್ ನಾಗಿಣಿ!


ಕಿರುತೆರೆಯ ನಾಗಿಣಿ ಎಂಬ ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿಯಾಗಿ ವರ್ಷಗಟ್ಟಲೆ ಚಾಲ್ತಿಯಲ್ಲಿದ್ದಾಕೆ ನಾಗಿಣಿ. ತನ್ನ ನಟನೆಯ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಕಿರುತೆರೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಾಗಿಣಿ ಯಶ ಕಂಡಿದ್ದಾಳೆ. ತಾನು ಈ ವರೆಗೆ ನಿರ್ವಹಿಸಿರೋ ಪಾತ್ರಕ್ಕೆ ಅನ್ವರ್ಥವೆಂಬಂತೆ ಸದಾ ಬುಸುಗುಡೋ ಸ್ವಭಾವದ ದೀಪಿಕಾ ಹಿಂದೆ ಇಂಟರೆಸ್ಟಿಂಗ್ ಆಗಿರೋ ಒಂದು ವಿಚಾರವಿದೆ. ಅದು ಕೆಜಿಎಫ್ ಮೂಲಕ ದೇಶಾದ್ಯಂತ ರಾಕಿ ಭಾಯ್ ಎಂದೇ ಖ್ಯಾತಿ ಪಡೆದುಕೊಂಡಿರೋ ರಾಕಿಂಗ್ ಸ್ಟಾರ್ ಯಶ್ ಜೊತೆ ನೇರಾ ನೇರ ಕನೆಕ್ಷನ್ನು ಹೊಂದಿದೆ!


ನಾಗಿಣಿ ಖ್ಯಾತಿಯ ದೀಪಿಕಾ ಹಾಸನ ಮೂಲದ ಹುಡುಗಿ. ತುಮಕೂರಿನಲ್ಲಿ ಸೆಟಲ್ ಆಗಿರೋ ದೀಪಿಕಾ ಯಶ್ ತಂಗಿ. ರಾಕಿಂಗ್ ಸ್ಟಾರ್ ಯಶ್ ಅವರ ಚಿಕ್ಕಮ್ಮನ ಮಗಳೀಕೆ. ಆದರೆ ಅದೇನು ಕೌಟುಂಬಿಕ ಭಿನ್ನಾಭಿಪ್ರಾಯವೋ, ಸ್ವಾಭಿಮಾನವೋ ಗೊತ್ತಿಲ್ಲ, ದೀಪಿಕಾ ತಾನು ವರಸೆಯಲ್ಲಿ ಯಶ್ ತಂಗಿ ಎಂಬ ವಿಚಾರವನ್ನು ಯಾವತ್ತೂ ಹೇಳಿಕೊಂಡಿಲ್ಲ. ರಾಕಿಂಗ್ ಸ್ಟಾರ್ ತಂಗಿಯಾಗಿದ್ದರೂ ಈ,ಕೆ ಅದನ್ನು ಯಾಕೆ ಎಲ್ಲಿಯೂ ಹೇಳಿಕೊಳ್ಳೋದಿಲ್ಲ ಎಂಬ ಪ್ರಶ್ನೆಗೆ ಮೇಲು ನೋಟಕ್ಕೆ ಕಂಡು ಬರೋದು ಸ್ವಾಭಿಮಾನದ ಸಂಗತಿ. ತಾನು ಯಶ್ ತಂಗಿಯೆಂದು ಹೇಳಿಕೊಂಡು ಅವಕಾಶ ಗಿಟ್ಟಿಸಿಕೊಳ್ಳುತ್ತಿರೋದಾಗಿ ಯಾರಾದರೂ ಅಂದುಕೊಳ್ಳೋದು ನಾಗಿಣಿಗೆ ಇಷ್ಟವಿಲ್ಲವಂತೆ. ಆ ಕಾರಣದಿಂದಲೇ ಆಕೆ ಎಲ್ಲಿಯೂ ಈ ವಿಚಾರವನ್ನು ಹೇಳಿಕೊಳ್ಳೋದಿಲ್ಲವಂತೆ.


ನಾಗಿಣಿ ಖ್ಯಾತಿಯ ದೀಪಿಕಾ ಬಿಗ್ ಬಾಸ್ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಲೇ ಈಕೆ ಬಿಗ್ ಬಾಸ್ ಮನೆಯೊಳಗಿನ ಒಂದಷ್ಟು ಜಗಳಗಳಲ್ಲಿ ಮೊದಲಿಗಳಾಗಿ ನಿಲ್ಲಬಹುದೆಂಬಂಥಾ ಅಭಿಪ್ರಾಯ ಮೂಡಿಕೊಂಡಿತ್ತು. ಯಾಕೆಂದರೆ, ದೀಪಿಕಾಳ ಡೋಂಟ್ ಕೇರ್ ಸ್ವಭಾವದ ಝಲಕ್‌ಗಳು ಧಾರಾವಾಹಿ ಜಗತ್ತಿನ ಮೂಲಕವೇ ಅನಾವರಣಗೊಂಡಿವೆ. ಆದರೆ ಸಿಟ್ಟೆಲ್ಲವನ್ನೂ ಕಂಟೋಲು ಮಾಡಿಕೊಂಡು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗೋ ಮನಸ್ಥಿತಿಯೂ ಈಕೆಗಿದೆ ಅನ್ನೋ ಸಂಗತಿ ಮೊದಲ ವಾರದಲ್ಲಿಯೇ ಗೊತ್ತಾಗಿದೆ. ಆದರೆ ರಾಜು ತಾಳಿಕೋಟಿಯ ಕೈ ಬಿಟ್ಟು ಮಾತಾಡಿಸೋ ಶೈಲಿಯ ವಿರುದ್ಧ ಈಕೆ ಆರಂಭಿಕವಾಗಿಯೇ ರೆಬೆಲ್ ಆಗಿದ್ದಾಳೆ. ಮುಂದಿನ ವಾರದಿಂದ ನಾಗಿಣಿಯ ಬುಸುಗುಡುವಿಕೆ ಆರಂಭವಾದೀತೇನೋ…

[adning id="4492"]

LEAVE A REPLY

Please enter your comment!
Please enter your name here