ಹೌಸ್‌ಫುಲ್‌ಗಾಗಿ ಸಖತ್ ಹಾಟ್ ಆದಳು ಪೂಜಾ ಹೆಗ್ಡೆ!

[adning id="4492"]

ಬಾಲಿವುಡ್ಡಿಂದ ತೆಲುಗು ಚಿತ್ರರಂಗಕ್ಕೆ ಬಂದು ಅಲ್ಲಿಯೇ ನೆಲೆಗೊಂಡಿರುವಾಕೆ ಮಂಗಳೂರು ಮೂಲದ ಹುಡುಗಿ ಪೂಜಾ ಹೆಗ್ಡೆ. ತೆಲುಗಿನಲ್ಲಿ ಸದ್ಟಾರ್ ನಟರೊಂದಿಗೆ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದ ಪೂಜಾ ಇದೀಗ ಹೌಸ್‌ಫುಲ್ ೪ ಎಂಬ ಚಿತ್ರಕ್ಕಾಗಿ ಸಖತ್ ಹಾಟ್ ಮೂಡಿಗೆ ಜಾರಿದಾರೆ. ಈ ಚಿತ್ರಕ್ಕಾಗಿ ಪೂಜಾ ಫೋಟೋಶೂಟ್ ಅನ್ನೂ ಮಾಡಿ ಮುಗಿಸಿಒಕೊಂಡಿದ್ದಾಳೆ. ಅದರ ಕೆಲ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿವೆ. ಈ ಮೂಲಕವೇ ತೆಲುಗಿನ ಈ ಸ್ಟಾರ್ ನಟಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮತ್ತೆ ಜೋರಾಗಿಯೇ ಸದ್ದು ಮಾಡಿದ್ದಾಳೆ.


ಹೌಸ್‌ಫುಲ್ ೪ ನಲ್ಲಿ ಅಕ್ಷಯ್ ಕುಮಾರ್, ರಿತೇಶ್, ಕೃತಿ ಕರಬಂಧ ಮತ್ತು ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಇದು ಔಟ್ ಆಂಡ್ ಔಟ್ ಕಾಮಿಡಿ ಶೈಲಿಯ ಚಿತ್ರ. ಒಂದಾದ ಮೇಲೊಂದರಂತೆ ಭಿನ್ನ ಜಾನರಿನ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿರುವ ಪೂಜಾ ಹೆಗ್ಡೆ ಇಲ್ಲಿ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾಳಂತೆ. ಈ ಸಿನಿಮಾದಲ್ಲಿ ಪೂಜಾ ಹೇಗೆ ಮಿಂಚಲಿದ್ದಾಳೆಂಬುದಕ್ಕೆ ಹಾಟ್ ಫೋಟೋಗಳೇ ಸಾಕ್ಷಿಯಂತಿವೆ. ಸದಾ ಬಿಕಿನಿಯಲ್ಲೇ ಕಾಣಿಸಿಕೊಳ್ಳುವ ಪೂಜಾ ಈ ಹಿಂದೆ ವಾಲ್ಮೀಕಿ ಚಿತ್ರಕ್ಕಾಗಿ ತದ್ವಿರುದ್ಧ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಳು. ಎಲ್ಲರೂ ಆಕೆಯನ್ನು ಲಂಗದಾವಣಿಯಲ್ಲಿ ಕಂಡು ಥ್ರಿಲ್ ಆಗಿದ್ದರು.


ಪೂಜಾ ಹೆಗ್ಡೆ ಹಳ್ಳಿ ಹುಡುಗಿಯಾಗಿ ಲಂಗ ದಾವಣಿಯಲ್ಲಿ ಕಾಣಿಸಿಕೊಂಡಿದ್ದ ವಾಲ್ಮಿಕಿ ಚಿತ್ರವನ್ನು ಹರಿಶಂಕರ್ ನಿರ್ದೇಶನ ಮಾಡಿದ್ದಾರೆ. ಇದು ತಮಿಳಿನಲ್ಲಿ ತೆರೆ ಕಂಡು ಹಿಟ್ ಆಗಿದ್ದ ಜಿಗರ್‌ಥಂಡ ಚಿತ್ರದ ರೀಮೇಕ್. ಆದರೂ ಈ ಸಿನಿಮಾವನ್ನು ತೆಲುಗಿನ ನೇಟಿವಿಟಿಗೆ ಒಗ್ಗಿಸಿಕೊಂಡು, ಒಂದಷ್ಟು ಪರಿಣಾಮಕಾರಿಯಾದ ಬದಲಾವಣೆಗಳೊಂದಿಗೆ ರೂಪಿಸಲಾಗಿದೆಯಂತೆ. ಅದರ ಸ್ಪಷ್ಟ ಸೂಚನೆಗಳು ಈ ಟ್ರೇಟರ್‌ನಲ್ಲಿ ಕಾಣಿಸಿವೆ. ಅದರಲ್ಲಿಯೂ ಪೂಜಾ ಹೆಗ್ಡೆ ಲಂಗ ದಾವಣಿ ತೊಟ್ಟು ಕಾಣಿಸಿಕೊಂಡಿರೋ ರೀತಿಯೇ ಈ ಟ್ರೇಲರ್‌ನ ಪ್ರಧಾನ ಆಕರ್ಷಣೆಯಾಗಿ ಹೋಗಿದೆ. ಇದುವರೆಗೂ ಹಾಟ್ ಆಗಿ, ಬೋಲ್ಡ್ ಪಾತ್ರಗಳ ಮೂಲಕವೇ ಕಾಣಿಸಿಕೊಳ್ಳುತ್ತಿದ್ದ ಪೂಜಾ ಹೆಗ್ಡೆ ಈ ಸಿನಿಮಾದ ತುಂಬಾ ಹಳ್ಳಿಯ ಮುಗ್ಧ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾಳೆ. ಅದರ ಬೆನ್ನಿಗೇ ಈಗ ಪೂಜಾ ಮತ್ತೆ ಹಾಟ್ ಲುಕ್‌ನಲ್ಲಿ ಬಿಸಿಯೇರಿಸಿದ್ದಾಳೆ.

[adning id="4492"]

LEAVE A REPLY

Please enter your comment!
Please enter your name here