ಸಿನಿ ಜಗತ್ತಿನ ಪುರುಷ ಪ್ರಧಾನ ವ್ಯವಸ್ಥೆಯ ಬಗ್ಗೆ ಪ್ರಿಯಾ ತಕರಾರು!

[adning id="4492"]

ಭಾರತ ಪುರುಷ ಪ್ರಧಾನ ವ್ಯವಸ್ಥೆಯ ತಳಹದಿಯ ಮೇಲೆ ರೂಪುಗೊಂಡಿರೋ ಸಂಸ್ಕೃತಿ ಹೊಂದಿರೋ ದೇಶ. ಇಲ್ಲಿ ಸ್ತ್ರೀ ಸ್ವಾತಂತ್ರ್ಯ, ಗೌರವಗಳ ಬಗ್ಗೆ ಅದೇನೇ ಚರ್ಚೆಗಳಾದರೂ, ಈವತ್ತಿಗೆ ವಾತಾವರಣ ಬದಲಾಗಿದೆ ಅಂತೆಲ್ಲ ಬಾಯಿ ಬಡಿದುಕೊಂಡರೂ ಆ ಛಾಯೆಯಿನ್ನು ಹಾಗೇ ಇದೆ. ಇದಕ್ಕೆ ಥಳುಕು ಬಳುಕಿನ ಸಿನಿಮಾ ಜಗತ್ತೂ ಕೂಡಾ ಹೊರತಾಗಿಲ್ಲ ಎಂಬುದು ವಾಸ್ತವ. ಇಲ್ಲಿ ನಟರಿಗೆ ಸಿಗುವಷ್ಟು ಬಿಲ್ಡಪ್ಪು ನಟಿಯರಿಗೆ ಸಿಗೋದಿಲ್ಲ ಮತ್ತು ಯಾವ ಸಿನಿಮಾ ಹಿಟ್ ಆದರೂ ನಟರ ಮಾರ್ಕೆಟ್ಟು ಲಕಲಕಿಸುತ್ತದೇ ಹೊರತು ಅದರ ಭಾಗವಾದ ನಟಿಯರಿಗೇನೂ ಅದರ ಫಾಯಿದೆ ಗಿಟ್ಟುವುದಿಲ್ಲ ಎಂಬ ಆರೋಪ ಇದ್ದೇ ಇದೆ. ಈ ಬಗ್ಗೆ ಅನುಷ್ಕಾ ಶೆಟ್ಟಿ, ಸಮಂತಾ ಮತ್ತು ನಯನತಾರಾರಂಥ ನಾಯಕಿಯರು ಧ್ವಿನಿಯೆತ್ತಿದ್ದಾರೆ. ಅದಕ್ಕೆ ಬಹುಭಾಷಾ ನಟಿ ಪ್ರಿಯಾಮಣಿ ಕೂಡಾ ಧ್ವನಿ ಸೇರಿಸಿದ್ದಾರೆ.


ಒಂದು ಸಿನಿಮಾ ಬಿಗ್ ಹಿಟ್ ಆದರೆ ಅದರಿಂದ ಒಂದಿಡೀ ತಂಡದ ನಸೀಬೇ ಥಳ ಥಳಿಸುತ್ತದೆ ಎಂಬ ಮಾತಿದೆ. ಆದರೆ ಹಾಗೆ ಚಿತ್ರಗಳು ಗೆಲ್ಲೋದರಿಂದ ನಟಿಯರಿಗೆ ಸಂಭಾವನೆಯ ವಿಚಾರದಲ್ಲಿ ಯಾವ ಲಾಭವೂ ಇಲ್ಲ ಎಂಬುದು ಈಗೆದ್ದಿರೋ ಕೂಗು. ಸಂಭಾವನೆ ವಿಚಾರದಲ್ಲಿನ ಈ ತಾರತಮ್ಯದ ಬಗ್ಗೆ ಅನುಷ್ಕಾ ಶೆಟ್ಟಿ, ಸಮಂತಾ ಮತ್ತು ನಯನತಾರಾ ಈಗಾಗಲೇ ಬಿಡುಬೀಸಾಗಿ, ಧೈರ್ಯದಿಂದಲೇ ಮಾತಾಡಿದ್ದಾರೆ. ಇದೀಗ ಯಾವ ಸಿನಿಮಾ ಗೆಲುವು ಕಂಡರೂ ಅದರಿಂದ ನಟಿಯರಿಗೇನೂ ಉಪಯೋಗ ಇಲ್ಲ ಎನ್ನುವ ಮೂಲಕ ಕನ್ನಡ ನಟಿ ಪ್ರಿಯಾಮಣಿಕೂಡಾ ಧ್ವನಿಗೂಡಿಸಿದ್ದಾರೆ.


ಈ ಹಿಂದೆ ತಮಿಳು ಚಿತ್ರವೊಂದರ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ಸಮಂತಾ ಆ ನಂತರದಲ್ಲಿ ತಮ್ಮ ಸಂಭಾವನೆ ಏರಿಸಿಕೊಂಡಿದ್ದರು. ಆದರೆ ಯಾವ ನಟಿಯೇ ಆದರೂ ಹೀಗೆ ಸಂಭಾವನೆ ಏರಿಸಿಕೊಂಡ ನಂತರದಲ್ಲಿ ಅವಕಾಶಗಳೇ ಕಡಿಮೆಯಾಗುವಂಥಾ ವಾತಾವರಣವೂ ಇದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಸಂಭಾವನೆ ಜಾಸ್ತಿ ಹೇಳಿದ ಕಾರಣಕ್ಕೆ ಅವರಿಗೆ ಪರ್ಯಾಯವಾಗಿ ಬೇರ‍್ಯಾರೋ ನಟಿಯರನ್ನು ಆಯ್ಕೆ ಮಾಡಿ ಟಾಂಗ್ ನೀಡುವ, ಪ್ರತಿಭೆಗೆ ಅವಮಾನ ಮಾಡುವಂಥಾ ಪ್ರಕ್ರಿಯೆಗಳೂ ಕೂಡಾ ಬಹುತೇಕ ಭಾಷೆಗಳಲ್ಲಿ ಚಾಲ್ತಿಯಲ್ಲಿವೆ. ಇಂಥಾ ಮಸಲತ್ತುಗಳ ವಿರುದ್ಧವೀಗ ನಟಿಯರೇ ಧ್ವನಿಯೆತ್ತುತ್ತಿದ್ದಾರೆ. ಅದೀಗ ಎಲ್ಲ ಭಾಷೆಗಳಿಗೂ ಹಬ್ಬಿಕೊಂಡು ಪ್ರಿಯಾಮಣಿ ಮೂಲಕ ಕನ್ನಡಕ್ಕೂ ಬಂದಿದೆ!

[adning id="4492"]

LEAVE A REPLY

Please enter your comment!
Please enter your name here