ಪ್ರಣಿತಾಳದ್ದೀಗ ಫಿಟ್ನೆಸ್ ಮಂತ್ರ!

[adning id="4492"]

ನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದರ್ಶನ್‌ರಂಥಾ ನಟರಿಗೆ ನಾಯಕಿಯಾಗಿ ನಟಿಸಿದ್ದವರು ಪ್ರಣೀತಾ ಸುಭಾಷ್. ಆ ನಂತರವೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರಾದರೂ ಅದೇಕೋ ಪ್ರಣೀತಾ ನಂತರದ ದಿನಗಳಲ್ಲಿ ನೇಪತ್ಯಕ್ಕೆ ಸರಿದಿದ್ದರು. ಆದರೆ ಆ ನಿರ್ವಾತ ವಾತಾವರಣದಲ್ಲಿಯೂ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಪೊರೆಯುವಂಥಾ ಸಾಥ್ಕ ಕೆಲಸದ ಮೂಲಕವೇ ಅವರು ಸುದ್ದಿ ಕೇಂದ್ರದಲ್ಲಿದ್ದರು. ಎಲ್ಲರಿಗೂ ಮಾದರಿಯಂಥಾ ಈ ಕಾರ್ಯದ ಮೂಲಕ ವ್ಯಾಪಕ ಮನ್ನಣೆ ಗಳಿಸಿಕೊಂಡಿದ್ದ ಪ್ರಣೀತಾ ಈಗ ಬಾಲಿವುಡ್‌ಗೆ ಹಾರಿದ್ದಾರೆ. ಅಜಯ್ ದೇವಗನ್‌ಗೆ ನಾಯಕಿಯಾಗೋ ಅವಕಾಶ ಗಿಟ್ಟಿಸಿಕೊಂಡು ಇದೀಗ ಯೋಗದ ಮೂಲಕ ಫಿಟ್ನೆಸ್ ಮಂತ್ರ ಪಠಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನಕ್ಕೆ ಕಾರಣವಾಗಿದ್ದಾರೆ.


ಆರಂಭದಿಂದಲೂ ಫಿಟ್ನೆಸ್‌ನತ್ತ ಒಲವು ಹೊಂದಿದ್ದವರು ಪ್ರಣೀತಾ ಸುಭಾಶ್. ಈ ಕಾರಣದಿಂದಲೇ ವರ್ಷಾಂತರಗಳಿಂದ ದೇಹಸಿರಿಯನ್ನು ಮೋಹಕವಾಗಿ ಕಾಪಾಡಿಕೊಂಡು ಬಂದಿದ್ದ ಪ್ರಣೀತಾ ಈಗ ಆಕ್ರೋ ಯೋಗದ ಮೊರೆ ಹೋಗಿದ್ದಾರೆ. ಪ್ರತೀ ದಿನ ನಿಯಮಿತವಾಗಿ ಯೋಗ ಮಾಡುತ್ತಿರೋ ಅವರು ಒಂದಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಯೋಗ ಗುರು ಶ್ರುತಿ ಅವರೊಂದಿಗೆ ಯೋಗದಲ್ಲಿ ನಿರತರಾಗಿರೋ ಪ್ರಣೀತಾರ ಫೋಟೋಗಳೀಗ ವೈರಲ್ ಆಗಿ ಬಿಟ್ಟಿವೆ. ಇದು ಅವರು ಹೊಸಾ ಚಿತ್ರಕ್ಕಾಗಿ ಮಾಡುತ್ತಿರೋ ತಯಾರಿ ಎಂಬ ಮಾತುಗಳೂ ಕೂಡಾ ವ್ಯಾಪಕವಾಗಿಯೇ ಕೇಳಿ ಬರುತ್ತಿವೆ.


ಹೀಗೆ ಸುದ್ದಿಯಲ್ಲಿರೋ ಪ್ರಣೀತಾ ಸಾಮಾಜಿಕ ಕೆಲಸ ಕಾರ್ಯಗಳ ಮೂಲಕವೂ ಗಮನೀಯ ಛಾಪು ಮೂಡಿಸಿದ್ದಾರೆ. ಕನ್ನಡದಲ್ಲಿ ನಟಿಯಾಗಿ ಹೊರಹೊಮ್ಮುತ್ತಲೇ ಬೇರೆ ಬೇರೆ ಭಾಷೆಗಳಲ್ಲಿಯೂ ಬ್ಯುಸಿಯಾಗಿರುವವರು ಪ್ರಣೀತಾ. ಸಾಮಾನ್ಯವಾಗಿ ಇಂಥಾ ನಟಿಯರು ಕೂತಲ್ಲಿ ನಿಂತಲ್ಲಿ ಸುದ್ದಿಯಾಗೋದು ಮಾಮೂಲು. ಆದರೆ ಪ್ರಣೀತಾ ಮಾತ್ರ ಸದ್ದೇ ಇಲ್ಲದಂತೆ ಒಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅದರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಿಡುವಾದಾಗ ತಾವೇ ಹೋಗಿ ಮಕ್ಕಳಿಗೆ ಪಾಠ ಮಾಡಿ ಸಂಭ್ರಮಿಸುತ್ತಿದ್ದಾರೆ. ಪ್ರಣೀತಾ ಹಾಸನ ಜಿಲ್ಲೆಯ ಆಲೂರಿನ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಕಳೆದ ವರ್ಷವೇ ಪ್ರಣೀತಾ ಸರ್ಕಾರಿ ಶಾಲೆಗಳು ಸಾಲು ಸಾಲಾಗಿ ಬೀಗ ಜಡಿದುಕೊಳ್ಳುತ್ತಿರೋದನ್ನು ತಡೆಯ ಬೇಕೆಂಬ ಬಗ್ಗೆ ಚಿಂತಿಸಿದ್ದರಂತೆ. ಇದಕ್ಕಾಗಿ ಒಂದು ತಂಡ ಕಟ್ಟಿಕೊಂಡು ಅಕಾಡಕ್ಕಿಳಿದಿರುವ ಪ್ರಣೀತಾ ಇದೀಗ ಈ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ.


ಹಲವಾರು ವರ್ಷಗಳ ಕಾಲ ಪ್ರಣೀತಾ ಯಾವ ಷಚಿತ್ರಗಳಲ್,ಲಿಯೂ ಕಾಣಿಸಿಕೊಳ್ಳದೇ ಇದ್ದ ಸಂದರ್ಭದಲ್ಲಿ ಅವಕಾಶಗಳ ಕೊರತೆಯೂ ಸೇರಿದಂತೆ ನಾನಾ ಸುದ್ದಿಗಳು ಹರಡಿಕೊಂಡಿದ್ದವು. ಆದರೆ ಅವರು ಮಾತ್ರ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಹಾಸನದಂಥಾ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಕಾಯಕಲ್ಪ ನೀಡೋದರಲ್ಲಿ ಬ್ಯುಸಿಯಾಗಿದ್ದರು. ಇದೆಲ್ಲವನ್ನೂ ಒಂದು ಹಂತಕ್ಕೆ ತಂದುಕೊಂಡಿರುವ ಪ್ರಣೀತಾ ಪಾಲಿಗೆ ಮತ್ತೆ ಸಿನಿಮಾ ಲೋಕದಲ್ಲಿ ಅವಕಾಶಗಳು ಶುರುವಾಗಿವೆ. ಸದ್ಯಕ್ಕೆ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರೋ ಅವರು ಮತ್ತೊಂದು ದೊಡ್ಡ ಚಿತ್ರವನ್ನೇ ಒಪ್ಪಿಕೊಂಡಿದ್ದಾರೆ. ಅದಕ್ಕೆಂದೇ ಯೋಗಾ ಮೂಲಕ ಫಿಟ್ನೆಸ್ ಮಂತ್ರ ಪಠಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.

[adning id="4492"]

LEAVE A REPLY

Please enter your comment!
Please enter your name here