ಸಾರಾ ಮಹೇಶ್ ಬಗ್ಗೆ ಖಾರದ ಮಾತಾಡಿತು ಹಳ್ಳಿಹಕ್ಕಿ!

[adning id="4492"]

ಬಿಜೆಪಿ ರಾಜ್ಯಾಧಿಕಾರ ಹಿಡಿಯುವ ಪೂರ್ವ ಕಾಲದಲ್ಲಿ ಸಂಭವಿಸಿದ ಕೆಲ ಪಲ್ಲಟಗಳು ಇದೀಗ ರಾಜಕಾರಣದ ಕೊಚ್ಚೆ ಜನ ಸಾಮಾನ್ಯರತ್ತಲೂ ಪ್ರೋಕ್ಷಣೆಯಾಗುವಂತೆ ಮಾಡಿದೆ. ಈ ಕೊಚ್ಚೆಯ ಕಣಕ್ಕಿದು ಕಾದಾಟಕ್ಕಿಳಿದಿರುವವರು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಮತ್ತು ಸಾರಾ ಮಹೇಶ್. ರಾಜಕೀಯ ಮುತ್ಸದ್ಧಿ ಎನ್ನಿಸಿಕೊಂಡಿದ್ದ, ಸಾಹಿತ್ಯಿಕವಾಗಿಯೂ ಗುರುತಿಸಿಕೊಂಡಿದ್ದ ವಿಶ್ವನಾಥ್ ಥರದವರೇ ಆಪರೇಷನ್ ಕಮಲದ ಮಾಯೆಗೀಡಾಗಿ ಇಂದು ಆರೋಪ ಪ್ರತ್ಯಾರೋಪದಲ್ಲಿ ಕಳೆದು ಹೋಗಿ ಬಿಟ್ಟಿದ್ದಾರೆ. ಇದರ ನಿಮಿತ್ತವಾಗಿ ತಮ್ಮ ಎದುರಾಳಿ ಸಾರಾ ಮಹೇಶ್‌ರನ್ನು ಕೊಚ್ಚೆಗುಂಡಿಗೆ ಹೋಲಿಸಿ ಮಾತಾಡಿದ್ದಾರೆ!


ಸಾರಾ ಮಹೇಶ್ ಹಾಗೂ ವಿಶ್ವನಾಥ್ ನಡುವೆ ತಿಕ್ಕಾಟ ಆರಂಭವಾಗಿ ಬಹಳಷ್ಟು ಕಾಲವೇ ಕಳೆದಿದೆ. ಅದೀಗ ಬೀದಿ ಕಾಳಗದ ಸ್ವರೂಪವನ್ನೂ ಪಡೆದುಕೊಂಡಿದೆ. ಮಹೇಶ್ ಕೂಡಾ ವಿಶ್ವನಾಥ್ ವಿರುದ್ಧ ನೇರವಾದ, ಘನಗಂಭೀರ ಆರೋಪಗಳನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಅವರು ಇಂಥಾದ್ದೇ ಆರೋಪ ಮಾಡಿದ್ದಲ್ಲದೇ ತಮ್ಮ ಮೇಲೆ ಮಾಡಿರೋ ಆರೋಪ ನಿಜವೆಂದಾದರೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಿಂತು ಆಣೆ ಮಾಡಿ ಹೇಳಲಿ ಎಂಬಂತೆ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಲು ಒಪ್ಪದ ವಿಶ್ವನಾಥ್ ಇದೀಗ ಮಾಧ್ಯನಮಗಳ ಮುಂದೆ ಸಾರಾ ಮಹೇಶ್ ಕೊಚ್ಚೆ ಗುಂಡಿಯಿದ್ದಂತೆ. ಅದಕ್ಕೆ ಕಲ್ಲೆಸೆದು ನಾನೇಕೆ ಶರ್ಟು ಕೊಳೆ ಮಾಡಿಕೊಳ್ಳಲಿ ಅನ್ನುವ ಮೂಲಕ ಸಾರಾ ವಿರುದ್ಧ ಕತ್ತಿ ಮಸೆದಿದ್ದಾರೆ.


ಅಷ್ಟಕ್ಕೂ ಸಾರಾ ಮಹೇಶ್ ವಿಶ್ವನಾಥ್ ವಿರುದ್ಧ ಮಾಡಿದ್ದದ್ದು ಸಣ್ಣ ಆರೋಪವೇನಲ್ಲ. ವಿಶ್ವನಾಥ್ ಓರ್ವ ಅತೃಪ್ತ ಆತ್ಮ ಅಂದಿದ್ದ ಸಾರಾ, ಆತ ಓರ್ವ ಬ್ಲೂ ಬಾಯ್. ಬ್ಲೂಫಿಲಂ ಹೀರೋ. ಅದರ ಹೀರೋಯಿನ್ ಯಾರೆಂದೂ ತಮಗೆ ಗೊತ್ತಿರೋದಾಗಿ ಹೇಳಿಕೊಂಡಿದ್ದರು. ಈ ಆಣೆ ಪ್ರಮಾಣದ ವೃತ್ತಾಂತದ ಬಗ್ಗೆ ಮಾಧ್ಯಮ ಮಂದಿಯ ಪ್ರಶ್ನೆಗಳ ವಿರುದ್ಧ ಅಸಹನೆ ವ್ಯಕ್ತಪಡಿಸಿರುವ ವಿಶ್ವನಾಥ್ ತಾವು ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡೋದಿಲ್ಲ. ಸಂವಿಧಾನದ ಮೇಲೆ ಆಣೆ ಮಾಡಿ ಹೇಳುತ್ತೇನೆ ಅಂದಿದ್ದಾರೆ. ಈ ಮೂಲಕ ರಾಜಕೀಯ ಕೊಚ್ಚೆ ಮತ್ತೆ ಕಲಕಿದೆ. ಇದರೊಂದಿಗೆ ಹೆಚ್ ವಿಶ್ವನಾಥ್ ಮತ್ತು ಸಾರಾ ಮಹೇಶ್ ನಡುವಿನ ಕಲಹ ಮತ್ತಷ್ಟು ಬಿರುಸು ಪಡೆದುಕೊಂಡಿದೆ.

[adning id="4492"]

LEAVE A REPLY

Please enter your comment!
Please enter your name here