ರಂಗನಾಯಕಿಯ ಸಮ್ಮುಖದಲ್ಲಿ ಆಸ್ಕರ್ ಆಸೆಯ ಒರತೆ!

[adning id="4492"]

ದುವರೆಗೂ ಸೂಕ್ಷ್ಮಾತಿ ಸೂಕ್ಷ್ಮ ಕಥಾ ವಸ್ತುಗಳನ್ನೇ ಆರಿಸಿಕೊಂಡು ದೃಷ್ಯ ಕಟ್ಟುತ್ತಾ, ಆ ಮೂಲಕವೇ ನಿರ್ದೇಶಕರಾಗಿ ಗೆಲ್ಲುತ್ತಾ ಬಂದಿರುವವರು ದಯಾಳ್ ಪದ್ಮನಾಭನ್. ಇತ್ತೀಚೆಗೆ ತೆರೆ ಕಂಡಿದ್ದ ತ್ರಯಂಬಕಂ ಚಿತ್ರದ ಮೂಲಕ ಕಮರ್ಶಿಯಲ್ ಚೌಕಟ್ಟಿನಲ್ಲಿಯೇ ಗೆಲ್ಲಬಲ್ಲೆ ಎಂಬುದನ್ನವರು ನಿರೂಪಿಸಿದ್ದಾರೆ. ಅದಾದ ನಂತರದಲ್ಲಿ ದಯಾಳ್ ನಿರ್ದೇಶನ ಮಾಡಿರೋ ಸಿನಿಮಾ ರಂಗನಾಯಕಿ. ರಕ್ಕಸರ ವಿಕೃತಿಗೆ ತುತ್ತಾದ ಹೆಣ್ಣುಮಗಳೊಬ್ಬಳ ಕಥೆ ಹೊಂದಿರೋ ರಂಗನಾಯಕಿ ನವೆಂಬರ್ ಒಂದರಂದು ತೆರೆಗಾಣಲಿದೆ.


ಇತ್ತೀಚೆಗಷ್ಟೇ ದಯಾಳ್ ಚಿತ್ರತಂಡದೊಂದಿಗೆ ಪತ್ರಿಕಾ ಗೋಷ್ಟಿ ಕರೆದಿದ್ದರು. ಈ ಸಂದರ್ಭದಲ್ಲಿ ರಂಗನಾಯಕಿಯ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಲೇ ತಾನು ಮುಂಬರುವ ದಿನಗಳಲ್ಲಿ ಕನ್ನಡಕ್ಕೊಂದು ಆಸ್ಕರ್ ಪ್ರಶಸ್ತಿ ತಂದುಕೊಡುವ ಭರವಸೆಯ ಮಾತುಗಳನ್ನಾಡಿದ್ದಾರೆ. ಅಂದಹಾಗೆ ಕನ್ನಡಕ್ಕೆ ಆಸ್ಕರ್ ಪ್ರಶಸ್ತಿಯ ಗರಿ ಮೂಡಿಸಲೋಸ್ಕರ ಈಗಾಗಲೇ ಒಂದು ಕಥೆಯನ್ನು ರೆಡಿ ಮಾಡಿಕೊಂಡಿದ್ದಾರಂತೆ. ಅದು ಅರ್ಧ ಭಾಗದಷ್ಟು ಮುಗಿದಿದೆ ಎಂಬ ಮಾಹಿತಿಯನ್ನು ದಯಾಳ್ ನೀಡಿದ್ದಾರೆ. ಈ ಮೂಲಕ ರಂಗನಾಯಕಿಯ ಸಮ್ಮುಖದಲ್ಲಿ ದಯಾಳ್ ಆಸ್ಕರ್ ಪ್ರಶಸ್ತಿಯ ಆಸೆಯ ಒರತೆ ಮೂಡಿಸಿದ್ದಾರೆ.


ಅಂದಹಾಗೆ ದಯಾಳ್ ಅವರೊಳಗೆ ಮುಂದಿನ ಚಿತ್ರದಲ್ಲಿ ಆಸ್ಕರ್ ಪ್ರಶಸ್ತಿ ಬಾಚಿಕೊಳ್ಳುವಂಥಾ ಕಸುವು ತುಂಬಿದ್ದೇ ರಂಗನಾಯಕಿ. ಈ ಸಿನಿಮಾಗೆ ಈಗಾಗಲೇ ಸಿಗುತ್ತಿರೋ ಅಭೂತಪೂರ್ವ ಸ್ವಾಗತ ಕಂಡು, ಜನಸಾಮಾನ್ಯರ ಮೆಚ್ಚುಗೆಗಳಿಂದ ದಯಾಳ್ ಉತ್ತೇಜಿತರಾಗಿದ್ದಾರೆ. ಅದಕ್ಕೆ ತಕ್ಕುದಾಗಿ ಗೋವಾ ಫಿಲಂ ಫೆಸ್ಟಿವಲ್‌ಗೆ ಇಂಡಿಯನ್ ಪನೋರಮಾ ವಿಭಾಗದಿಂದ ರಂಗನಾಯಕಿ ಆಯ್ಕೆಯಾಗಿದೆ. ಈ ಸಲ ಆಯ್ಕೆಯಾಗಿರೋ ಏಕೈಕ ಕನ್ನಡ ಚಿತ್ರವೆಂಬ ಹೆಗ್ಗಳಿಕೆಯೂ ರಂಗನಾಯಕಿಯ ಪಾಲಾಗಿದೆ. ಇದುವೇ ದಯಾಳ್ ಅವರ ಆಸ್ಕರ್ ಕನಸಿನ ಮೊದಲ ಮೆಟ್ಟಿಲಂತೆಯೂ ಕಾಣಿಸುತ್ತಿದೆ.

[adning id="4492"]

LEAVE A REPLY

Please enter your comment!
Please enter your name here