ಹಿಡ್ಕ ವಸಿ ತಡ್ಕ ಅಂತ ಹಾಡಿ ಕುಣಿದರಂತೆ ಬ್ರಹ್ಮಚಾರಿ ಸತೀಶ!

ಯೋಗ್ಯ ಮತ್ತು ಚಂಬಲ್ ಚಿತ್ರಗಳ ನಂತರ ನಟ ನೀನಾಸಂ ಸತೀಶ್ ಅವರ ಗೆಲುವಿನ ರಥದ ಗಾಲಿಗಳ ವೇಗ ಹೆಚ್ಚಿಕೊಂಡಿದೆ. ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಚಿತ್ರದಲ್ಲಿಯಂತೂ ಸತೀಷ್ ಒಳಗೆಂಥಾ ಅಪ್ಪಟ ನಟನಿದ್ದಾನೆಂಬ ಸತ್ಯದರ್ಶನವಾಗಿತ್ತು. ಆ ನಂತರದಲ್ಲಿ ಅವರ‍್ಯಾವ ಚಿತ್ರದಲ್ಲಿ ನಟಿಸಲಿದ್ದಾರೆಂಬ ಕುತೂಹಲಕ್ಕೆ ಉತ್ತರವೆಂಬಂತೆ ಅನೌನ್ಸ್ ಆಗಿದ್ದದ್ದು ‘ಬ್ರಹ್ಮಚಾರಿ’ ಚಿತ್ರ. ಅದ್ದೂರಿ ಚಿತ್ರಗಳಿಗೆ ಹೆಸರಾಗಿರೋ ಉದಯ್ ಮೆಹ್ತಾ ನಿರ್ಮಾಣದ ಈ ಸಿನಿಮಾ ಚಿತ್ರೀಕರಣ ವೇಗವಾಗಿ ಸಾಗುತ್ತಿದೆ. ಇದೀಗ ಬ್ರಹ್ಮಚಾರಿಯ ಮಜವಾದ ಹಾಡೊಂದರ ಚಿತ್ರೀಕರಣ ಅವ್ಯಾಹತವಾಗಿ ನಡೆಯುತ್ತಿದೆ.


ಇಡ್ಕ ಇಡ್ಕ ಒಸಿ ತಡ್ಕ ತಡ್ಕ ಎಂಬ ಈ ಹಾಡನ್ನು ತಿಂಗಳುಗಳ ಹಿಂದೆಯೇ ನವೀನ್ ಸಜ್ಜು ಹಾಡಿದ್ದರು. ಈ ಹಿಂದೆ ನವೀನ್ ಎದೆಯೊಳಗಿನ ತಮ ತಮ ತಮಟೆ ಹಾಡಿದ್ದರಲ್ಲಾ? ಅಂಥಾದ್ದೇ ಶೈಲಿಯ ಈ ಹಾಡು ಆ ಹೊತ್ತಿನಲ್ಲಿಯೇ ಒಂದಷ್ಟು ಸದ್ದು ಮಾಡಿತ್ತು. ಧರ್ಮವಿಶ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಈ ಹಾಡಿಗೀಗ ದೃಷ್ಯ ರೂಪ ಕೊಡಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹಿಟ್ ಕಾಂಬಿನೇಷನ್ ಎಂಬ ಹೆಗ್ಗಳಿಕೆ ಹೊಂದಿರೋ ಕೊರಿಯೋಗ್ರಾಫರ್ ಮುರುಳಿ ಮತ್ತು ನೀನಾಸಂ ಸತೀಶ್ ಈ ಮೂಲಕ ಮತ್ತೆ ಒಂದಾಗಿದ್ದಾರೆ. ಮುರುಳಿ ನೀನಾಸಂ ಸತೀಶ್ ತಕ್ಕದಾದ ಮಜವಾಗಿರೋ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡು ಬ್ರಹ್ಮಚಾರಿಯ ಹೈಲೈಟ್ ಆಗೋದರಲ್ಲಿ ಯಾವುದೇ ಸಂಶಯಗಳಿಲ್ಲ.


ಈಗಾಗಲೇ ಬಾಂಬೆ ಮಿಠಾಯಿ ಮತ್ತು ಡಬಲ್ ಎಂಜಿನ್‌ನಂಥಾ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿರೋ ಚಂದ್ರಮೋಹನ್ ಬ್ರಹ್ಮಚಾರಿಯ ಸಾರಥ್ಯವನ್ನೂ ವಹಿಸಿಕೊಂಡಿದ್ದಾರೆ. ತಿಂಗಳ ಹಿಂದೆ ಈ ಚಿತ್ರದ ಫಸ್ಟ್ ನೈಟ್ ಟೀಸರ್ ಒಂದು ಬಿಡುಗಡೆಗೊಂಡಿತ್ತು. ಅದರಲ್ಲಿನ ಕಾಮಿಡಿ ಕಿಕ್ ಕಂಡು ಸತೀಶಾಭಿಮಾನಿಗಳೆಲ್ಲ ಖುಷಿಗೊಂಡಿದ್ದರು. ಬ್ರಹ್ಮಚಾರಿ ಕೂಡಾ ಅಂಥಾದ್ದೇ ಮನೋರಂಜನಾತ್ಮಕ ಚಿತ್ರ. ಪ್ರತಿಭಾವಂತ ನಟಿ ಅದಿತಿ ಪ್ರಭುದೇವ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಯಾವುದೇ ಚಿತ್ರವನ್ನಾದರೂ ಪ್ರತಿಯೊಂದ ಹಂತದಲ್ಲಿಯೂ ಜೊತೆಗಿದ್ದು ರೂಪಿಸಿಸೋ ನಿರ್ಮಾಪಕ ಉದಯ್ ಮೆಹ್ತಾ ಬ್ರಹ್ಮಚಾರಿಯನ್ನೂ ಕೂಡಾ ಅಂಥಾದ್ದೇ ಆಸ್ಥೆಯಿಂದ ನಿರ್ಮಾಣ ಮಾಡಿದ್ದಾರಂತೆ.

LEAVE A REPLY

Please enter your comment!
Please enter your name here