ಕನ್ನಡಕ್ಕೆ ಅಪರೂಪದ ರುಚಿ ಹತ್ತಿಸುತ್ತಾ ಸವರ್ಣದೀರ್ಘ ಸಂಧಿ?

[adning id="4492"]

ವೀರೇಂದ್ರ ಶೆಟ್ಟಿ ನಿರ್ದೇಶನದ ಸವರ್ಣದೀರ್ಘ ಸಂಧಿ ಬಿಡುಗಡೆಗೆ ಇನ್ನು ನಾಲಕ್ಕು ದಿನಗಳಷ್ಟೇ ಬಾಕಿ ಉಳಿದಿವೆ. ತನ್ನ ಶೀರ್ಷಿಕೆಯ ಕಾರಣದಿಂದ ಗಮನ ಸೆಳೆಯುತ್ತಾ ಇದೀಗ ಕಥೆಯ ಕಾರಣದಿಂದ, ಡೈಲಾಗುಗಳ ಕಾಮಿಡಿ ಝಲಕ್‌ನಿಂದ ಸದ್ದು ಮಾಡುತ್ತಿರೋ ಸವರ್ಣದೀರ್ಘ ಸಂಧಿಯ ಬಗ್ಗೆ ಅಪಾರ ನಿರೀಕ್ಷೆಗಳಿವೆ. ತುಳು ಚಿತ್ರರಂಗದಲ್ಲಿ ಚಾಲಿಪೋಲಿಲು ಎಂಬ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶನ ಮಾಡಿದ್ದ ವೀರೇಂದ್ರ ಶೆಟ್ಟಿ ಈ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಅಪರೂಪದ ಜಾನರ್ ಒಂದರ ರುಚಿ ಹತ್ತಿಸಿ ಗೆಲ್ಲುವ ಭರವಸೆಯಿಂದಿದ್ದಾರೆ.


ಕನ್ನಡದ ಮಟ್ಟಿಗೆ ಗ್ಯಾಂಗ್‌ಸ್ಟರ್ ಕಾಮಿಡಿ ಎಂಬುದು ಅತ್ಯಂತ ಅಪರೂಪದ ಜಾನರ್ ಸಿನಿಮಾ. ಕೆಲ ಚಿತ್ರಗಳಲ್ಲಿ ಕಾಮಿಡಿ ನಟರನ್ನೇ ಗ್ಯಾಂಗ್‌ಸ್ಟರ್ ಎಂಬಂತೆ ಬಿಂಬಿಸಿ ನಗಿಸೋ ಪ್ರಯತ್ನ ಮಾಡಲಾಗುತ್ತದೆ. ಆದರೆ ಗ್ಯಾಂಗ್ ಸ್ಟರ್ ನಾಯಕನೇ ಕಾಮಿಡಿ ಮಾಡೋದು ಮತ್ತು ಅದು ಇಡೀ ಚಿತ್ರದ ತುಂಬಾ ಹರಿಡಿಕೊಳ್ಳೋದೇ ಮಜವಾದ ವಿಚಾರ. ಅಂಥಾ ಭರಪೂರ ಮನೋರಂಜನೆಯನ್ನು ಸವರ್ಣದೀರ್ಘ ಸಂಧಿ ಈಗಾಗಲೇ ಖಾತರಿ ಮಾಡಿದೆ. ಯಾಕೆಂದರೆ ಇದು ಗ್ಯಾಂಗ್‌ಸ್ಟರ್ ಕಾಮಿಡಿ ಜಾನರಿನಲ್ಲಿಯೇ ಮೂಡಿ ಬಂದಿರೋ ಚಿತ್ರ!


ವೀರೇಂದ್ರ ಶೆಟ್ಟಿ ಇಲ್ಲಿ ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಅವರ ಪಂಚಿಂಗ್ ಡೈಲಾಗ್‌ಗಳು ಮತ್ತು ಕಾಮಿಡಿ ಟೈಂಮಿಂಗಿನ ಚಹರೆಗಳು ಟ್ರೇಲರ್ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿವೆ. ಅದರಲ್ಲಿರೋ ಮಜಾ ಚಿತ್ರದುದ್ದಕ್ಕೂ ಇದ್ದರೆ ಗೆಲುವು ಗ್ಯಾರೆಂಟಿ ಎಂಬ ಅಭಿಪ್ರಾಯವನ್ನು ನೋಡುಗರು ವ್ಯಕ್ತಪಡಿಸುತ್ತಿದ್ದರೆ, ಚಿತ್ರತಂಡ ಅದಕ್ಕೆ ಪೂರಕವಾದ ನಿಖರವಾದ ಮಾತುಗಳನ್ನೇ ಆಡುತ್ತಿದೆ. ಒಟ್ಟಾರೆಯಾಗಿ ವ್ಯಾಕರಣದ ಒಂದು ಸಂಧಿಯ ಹೆಸರನ್ನೇ ಶೀರ್ಷಿಕೆಯಾಗಿಟ್ಟುಕೊಂಡಿರೋ ಈ ಸಿನಿಮಾ ವ್ಯಾಕರಣ ಮತ್ತು ರೌಡಿಯೊಬ್ಬನಿಗೆ ಕನೆಕ್ಷನ್ನು ಕೊಟ್ಟಿರೋ ಕಾಮಿಡಿ ಕಥನವನ್ನೊಳಗೊಂಡಿದೆ. ಅದೆಲ್ಲವೂ ಇದೇ ಹದಿನೆಂಟನೇ ತಾರೀಕಿನಂದು ನಿಮ್ಮ ಮುಂದೆ ಬಿಚ್ಚಿಕೊಳ್ಳಲಿದೆ.

[adning id="4492"]

LEAVE A REPLY

Please enter your comment!
Please enter your name here