ಮನೆ ಮಂದಿಯನ್ನೇ ಯಾಮಾರಿಸಿದ್ದಳಂತೆ ಮಾಡೆಲ್ ಮೋಕ್ಷಾ ಕುಶಾಲ್!

[adning id="4492"]

ಕೊಡಗು ಸೀಮೆಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಾಯಕಿಯರ ಸಾಲಿಗೆ ಇತ್ತೀಚೆಗೆ ಸೇರ್ಪಡೆಗೊಂಡಿರೋ ಹೆಸರು ಮೋಕ್ಷಾ ಕುಶಾಲ್. ಈ ಹಿಂದೆ ಎರಡು ಸಿನಿಮಾ ಮಾಡಿದರೂ ಈಕೆ ಸುದ್ದಿ ಕೇಂದ್ರಕ್ಕೆ ಬಂದಿರೋದು ನವರತ್ನ ಎಂಬ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗೋ ಮೂಲಕ. ಮೂಲತಃ ಮಾಡೆಲ್ ಆಗಿರೋ ಮೋಕ್ಷಾ ಸಿನಿಮಾ ನಾಯಕಿಯಾಗೋ ಉದ್ದೇಶದಿಂದ ಮುಂದಡಿ ಇಟ್ಟಿದ್ದರೂ ಈಕೆ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರೋ ನವರತ್ನದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುವ ಆಸೆಯಿಟ್ಟುಕೊಂಡಿದ್ದಾರೆ.


ಮೋಕ್ಷಾ ಈ ಹಿಂದೆ ಆಯನ ಮತ್ತು ಆದಿ ಪುರಾಣ ಎಂಬೆರಡು ಚಿತ್ರಗಳಲ್ಲಿ ನಾಯಕಿಯರಲ್ಲೊಬ್ಬರಾಗಿ ನಟಿಸಿಸದ್ದರು. ಆದರೆ ಅವೆರಡೂ ಚಿತ್ರಗಳೂ ಸಹ ಹೇಳಿಕೊಳ್ಳುವಂಥಾ ಗೆಲುವು ದಾಖಲಿಸಿರಲಿಲ್ಲ. ಆದರೆ ಒಂದು ಮಟ್ಟಿಗೆ ಮಾಡೆಲ್ ಮೋಕ್ಷಾ ನಟನೆಯಲ್ಲಿ ಗಮನ ಸೆಳೆದಿದ್ದರು. ಆ ನಂತದ ಒಂದಷ್ಟು ಕಾಲ ಮೆರೆಯಾದಂತಿದ್ದ ಆಕೆಯ ಪಾಲಿಗೆ ನವರತ್ನ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗೋ ಅವಕಾಶ ಒಲಿದು ಬಂದಿದೆ. ಹೀಗೆ ಮೋರನೇ ಸಿನಿಮಾ ಮೂಲಕ ತನ್ನ ಲಕ್ಕು ಕುದುರಿಕೊಳ್ಳ ಬುಹುದೆಂಬ ನಿರೀಕ್ಷೆ ಹೊಂದಿರೋ ಮೋಕ್ಷಾ ಒಂದೊಳ್ಳೆ ಕೆಲಸ ಗಿಟ್ಟಿಸಿಕೊಂಡು ಸೆಟಲ್ ಆಗಬೇಕೆಂಬುದು ಮನೆ ಮಂದಿಯ ಇರಾದೆಯಾಗಿತ್ತಂತೆ. ಆದರೆ ಹೇಗೋ ಮನೆಯವರನ್ನು ಒಪ್ಪಿಸಿ ಮಾಡೆಲಿಂಗ್‌ಗೆ ಇಳಿದರೂ ನಾಯಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋದಕ್ಕೆ ಮಾತ್ರ ಮನೆ ಮಂದಿಗೆ ಇಷ್ಟವಿರಲಿಲ್ಲವಂತೆ.


ಆದರೂ ತಾನು ನಾಯಕಿಯಾಗಲೇ ಬೇಕೆಂಬ ಇರಾದೆಯಿಂದ ಒಂದು ವರ್ಷ ಕಾದಿದ್ದ ಮೋಕ್ಷಾಗೆ ಆಯನ ಚಿತ್ರದ ಮೂಲಕ ನಟಿಯಾಗಿ ಎಂಟ್ರಿ ಕೊಡೋ ಅವಕಾಶ ಕೂಡಿ ಬಂದಿತ್ತು. ಇದಕ್ಕೆ ಮನೆ ಕಡೆಯಿಂದ ಒಪ್ಪಿಗೆ ಸಿಗೋದು ಕಷ್ಟ ಎಂದರಿತಿದ್ದ ಮೋಕ್ಷಾ ಯಾರಿಗೂ ಹೇಳದೆಯೇ ಅದಕ್ಕೊಪ್ಪಿಕೊಂಡಿದ್ದರಂತೆ. ಹಾಗೆ ಒಂದಷ್ಟು ಚಿತ್ರೀಕರಣ ನಡೆದ ನಂತರ ಮಾಧ್ಯಮಗಳಲ್ಲಿ ಸುದ್ದಿ ಬಂದ ಬಳಿಕವಷ್ಟೇ ಮಗಳು ಹೀರೋಯಿನ್ ಆಗಿರೋ ವಿಚಾರ ಮನೆ ಮಂದಿಗೆ ತಿಳಿದಿತ್ತು. ಆ ಬಳಿಕ ಸಂತೋಷದಿಂದಲೇ ಒಪ್ಪಿಗೆಯೂ ಸಿಕ್ಕಿತ್ತು. ಅದಾಗುತ್ತಲೇ ಆದಿಪುರಾಣ ಎಂಬ ಚಿತ್ರದಲ್ಲಿಯೂ ಆಕೆ ನಾಯಕಿಯರಲ್ಲೊಬ್ಬರಾಗಿ ನಟಿಸಿದ್ದರೂ ನಿರೀಕ್ಷಿತ ಗೆಲುವು ದಕ್ಕಿರಲಿಲ್ಲ.


ಹಾಗೆ ಎರಡು ಸಿನಿಮಾಗಳಲ್ಲಿ ನಟಿಸಿ ಒಂದಷ್ಟು ಅನುಭವ ದಕ್ಕಿಸಿಕೊಂಡಿದ್ದ ಮೋಕ್ಷಾ ಬಲು ಎಚ್ಚರಿಕೆಯಿಂದಲೇ ಒಪ್ಪಿಗೆ ಸೂಚಿಸಿರೋ ಚಿತ್ರ ನವರತ್ನ. ಈ ಹಿಂದೆ ಒಂದು ಸಿನಿಮಾ ನಿರ್ದೇಶನ ಮಾಡಿದ್ದ ಪ್ರತಾಪ್ ರಾಜ್ ನವರತ್ನವನ್ನು ನಿರ್ದೇಶನ ಮಾಡೋದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ರತ್ನಗಳ ಹುಡುಕಾಟದ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಈ ಚಿತ್ರದಲ್ಲಿ ಮೋಕ್ಷಾ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ನಟಿಸಿದ್ದಾರೆ. ಈ ಫೋಟೋಗ್ರಫಿಯ ಸಂಬಂಧವಾಗಿ ಕಾಡಿಗೆ ತೆರಳಿದಾಗ ಅಲ್ಲಿ ನಾಯಕನ ಮುಖಾಮುಖಿಯಾಗುತ್ತೆ. ಅಲ್ಲಿಂದಾಚೆಗೆ ತೆರೆದುಕೊಳ್ಳೋ ಕುತೂಹಲ ಭರಿತ ಕಥೆಯನ್ನು ನವರತ್ನ ಒಳಗೊಂಡಿದೆಯಂತೆ.

[adning id="4492"]

LEAVE A REPLY

Please enter your comment!
Please enter your name here