ಎಲ್ಲಿದ್ದೆ ಇಲ್ಲಿತನಕ: ಟಾಕಿಂಗ್ ಸ್ಟಾರ್ ಸೃಜಾಗೆ ಸಖಿಯಾದ ಹರಿಪ್ರಿಯಾ!

[adning id="4492"]

ನ್ನಡ ಚಿತ್ರರಂಗದ ಈ ತಲೆಮಾರಿನ ನಟಿಯರಲ್ಲಿ ಇಮೇಜಿನಾಚೆಗೆ ಹೊಸಾ ಬಗೆಯ ಪಾತ್ರಗಳಿಗೆ ತೆರೆದುಕೊಂಡ ನಟಿಯರ ಸಾಲಿನಬಲ್ಲಿ ಹರಿಪ್ರಿಯಾರದ್ದು ಮುಂಚೂಣಿ ಹೆಸರು. ಒಂದು ಪಾತ್ರವನ್ನು ಪಾತ್ರವಾಗಿಯಷ್ಟೇ ಪರಿಭಾವಿಸುತ್ತಾ, ಅದರ ಪರಿಣಾಮ ಏನೇ ಇದ್ದರು ತಲೆ ಕೆಡಿಸಿಕೊಳ್ಳದ ಹರಿಪ್ರಿಯಾರ ಮನಸ್ಥಿತಿ ಮಾಗಿದ ನಟಿಯದ್ದು. ಅದಕ್ಕೆ ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ನೀರ್ ದೋಸೆಯ ಪಾತ್ರಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಇಂಥಾ ಹರಿಪ್ರಿಯಾ ಪಾತ್ರಗಳನ್ನು ಒಪ್ಪಿಕೊಳ್ಳೋದರಲ್ಲಿಯೂ ಬಲು ಚೂಸಿ. ಆದ್ದರಿಂದಲೇ ಅವರೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆಂದ ಮೇಲೆ ಅದರ ಬಗ್ಗೆ ಪ್ರೇಕ್ಷಕರಿಗೆಲ್ಲ ಸಹಜವಾಗಿಯೇ ನಿರೀಕ್ಷೆಗಳಿರುತ್ತವೆ. ಹಾಗಿದ್ದ ಮೇಲೆ ಅವರು ನಟಿಸಿ ಬಿಡುಗಡೆಗೆ ರೆಡಿಯಾಗಿರೋ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಮೇಲೆ ಪ್ರೇಕ್ಷಕರು ಆಕರ್ಷಿತರಾಗದಿರಲು ಸಾಧ್ಯವೇ?


ಮಜಾ ಟಾಕೀಸ್ ಶೋ ಮೂಲಕವೇ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ಸೃಜನ್ ಲೋಕೇಶ್ ನಾಯಕನಾಗಿ ನಟಿಸಿರೋ ಚಿತ್ರ ಎಲ್ಲಿದ್ದೆ ಇಲ್ಲಿತನಕ. ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಅವರೇ ನಿರ್ಮಾಣವನ್ನೂ ಮಾಡಿರುವ ಈ ಚಿತ್ರದ ಬಗ್ಗೆ ರಾಜ್ಯಾದ್ಯಂತ ಹುಟ್ಟಿಕೊಂಡಿರೋ ಕ್ರೇಜ್ ಸಣ್ಣ ಮಟ್ಟದ್ದೇನಲ್ಲ. ಅದಕ್ಕೆ ಕಾರಣವಾಗಿರೋದು ಹಾಡುಗಳು ಮತ್ತು ಟ್ರೇಲರ್ ಮೂಡಿ ಬಂದಿರೋ ರೀತಿ. ಈ ಹಾಡುಗಳ ಮೂಲಕವೇ ಸೃಜನ್‌ಗೆ ಜೋಡಿಯಾಗಿ ಹರಿಪ್ರಿಯಾ ರೊಮ್ಯಾಂಟಿಕ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಅಷ್ಟಕ್ಕೂ ನಿರ್ದೇಶಕ ತೇಜಸ್ವಿ ಈ ಸಿನಿಮಾ ಪಾತ್ರಗಳನ್ನು ಸೃಷ್ಟಿಸುವಾಗಲೇ ಅದನ್ನು ನಿರ್ವಹಿಸುವ ಕಲಾವಿದರನ್ನೂ ಕೂಡಾ ನಿಕ್ಕಿ ಮಾಡಿಕೊಂಡಿದ್ದರು. ನಾಯಕಿ ಪಾತ್ರವನ್ನಂತೂ ಹರಿಪ್ರಿಯಾ ಅವರೇ ನಿರ್ವಹಿಸಬೇಕೆಂಬ ಇಂಗಿತವನ್ನೂ ಹೊಂದಿದ್ದರು.


ಹಾಗೆ ತನಗೆಂದೇ ಸೃಷ್ಟಿಯಾದ ಪಾತ್ರ ಮತ್ತು ಇಡೀ ಕಥೆಯ ಸೊಗಸನ್ನು ಮೆಚ್ಚಿಕೊಂಡೇ ಹರಿಪ್ರಿಯಾ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸೃಜನ್ ಲೋಕೇಶ್ ಪರಿಚಿತರೆಂಬುದನ್ನೂ ಮೀರಿ ಈ ಕಥೆ ಮೆಚ್ಚುಗೆಯಾಗಿರೋದರಿಂದಲೇ ಎಲ್ಲಿದ್ದೆ ಇಲ್ಲಿತನಕ ನಾಯಕಿಯಾಗಲು ಒಪ್ಪಿಕೊಂಡಿರೋದಾಗಿ ಹರಿಪ್ರಿಯಾ ಹೇಳಿಕೊಂಡಿದ್ದಾರೆ. ಇದೀಗ ಬಿಡುಗಡೆಗೊಂಡಿರೋ ಹಾಡುಗಳ ಮೂಲಕ ಹರಿಪ್ರಿಯಾರ ರೊಮ್ಯಾಂಟಿಕ್ ಲುಕ್ಕು ಮಾತ್ರವೇ ಅನಾವರಣಗೊಂಡಿದೆ. ಆದರೆ ಅದನ್ನೂ ಮೀರಿದ ಚಹರೆ ಅವರ ಪಾತ್ರಕ್ಕಿದೆ. ಅದು ಪ್ರೇಕ್ಷಕರೆಲ್ಲರನ್ನು ಥ್ರಿಲ್ ಆಗಿಸುವಂತಿದೆಯಂತೆ. ಆದರೆ ಅದು ಎಂಥಾದ್ದೆಂಬ ಸಣ್ಣ ಸುಳಿವನ್ನೂ ಕೂಡಾ ಚಿತ್ರ ತಂಡ ಬಿಟ್ಟು ಕೊಟ್ಟಿಲ್ಲ. ಈ ಸಿನಿಮಾ ಮತ್ತು ಪಾತ್ರ ಕೂಡಾ ಹರಿಪ್ರಿಯಾರ ಭಿನ್ನವಾದ ಪಾತ್ರಗಳ ಸಿನಿಮಾ ಯಾನದಲ್ಲಿ ಒಂದಾಗಿ ದಾಖಲಾಗಲಿದೆಯೆಂಬ ಭರವಸೆ ಕುದ್ದು ಅವರಲ್ಲಿಯೇ ಇದೆ. ಈ ವಾರ ಅದು ಪ್ರೇಕ್ಷಕರೆದುರು ಅನಾವರಣಗೊಳ್ಳಲಿದೆ.

[adning id="4492"]

LEAVE A REPLY

Please enter your comment!
Please enter your name here