ಕಾಣದಂತೆ ಮಾಯವಾದನು: ಮೆಲೋಡಿ ಸಾಂಗಿಗೆ ಪವರ್‌ಸ್ಟಾರ್ ವಾಯ್ಸ್!

[adning id="4492"]
ಸಿನಿಮಾವೊಂದು ವಿಶೇಷವಾದ ಟೈಟಲ್ ಮೂಲಕವೇ ಪ್ರೇಕ್ಷಕರ ಮನದಂಗಳಕ್ಕೆ ಅಡಿಯಿಡೋದು ಗೆಲುವಿನ ಪ್ರಾರಂಭದ ಹೆಜ್ಜೆ. ರಾಜ್ ಪತ್ತಿಪಾಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಕಾಣದಂತೆ ಮಾಯವಾದನು’ ಚಿತ್ರ ಈಗಾಗಲೇ ಅದರಲ್ಲಿ ಗೆದ್ದಿದೆ. ಒಂದೇ ಸಲಕ್ಕೆ ಮನಸೆಳೆಯುವಂಥಾ ಪೋಸ್ಟರ್‌ಗಳ ಮೂಲಕವೇ ಸದ್ದು ಮಾಡುತ್ತಾ ಸಾಗಿ ಬಂದಿದ್ದ ಈ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕ ಸೃಷ್ಟಿಸಿದ್ದ ಸಂಚಲನ ಸಣ್ಣ ಪ್ರಮಾಣದ್ದೇನಲ್ಲ. ಇದರ ಬೆನ್ನಲ್ಲಿಯೇ ಇದೀಗ ಹಾಡುಗಳ ಮೂಲಕ ಈ ಸಿನಿಮಾ ಪ್ರೇಕ್ಷಕರಿಗೆ ಕಚಗುಳಿ ಇಡಲಾರಂಭಿಸಿದೆ. ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿರುವ ಮಾಧುರ್ಯ ತುಂಬಿದ ಹಾಡೊಂದು ಬಿಡುಗಡೆಯಾಗಿದೆ.
ಅಷ್ಟಕ್ಕೂ ಕಾಭಣದಂತೆ ಮಾಯವಾದನು ಎಂಬ ಸಾಲು ಕೇಳಿದರೆ ಮೊದಲು ನೆನಪಾಗೋದೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.
ಚಲಿಸುವ ಮೋಡಗಳು ಚಿತ್ರದಲ್ಲಿ ಬಾಲನಟರಾಗಿದ್ದ ಪುನೀತ್ ಹಾಡಿದ್ದ ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಎಂಬ ಹಾಡನ್ನು ಪ್ರೇಕ್ಷಕರ‍್ಯಾರೂ ಮರೆಯಲು ಸಾಧ್ಯವೇ ಇಲ್ಲ. ಇದೀಗ ಅಪ್ಪು ಈ ಚಿತ್ರದ ಮೆಲೋಡಿ ಸಾಂಗೊಂದಕ್ಕೆ ಧ್ವಿನಿಯಾಗಿದ್ದಾರೆ. ಅವರು ಹಾಡಿರೋ ಕಳೆದೋದ ಕಾಳಿದಾಸ ನೋಡುತ್ತ ಮಂದಹಾಸ ಹಾಡು ಬಿಡುಗಡೆಯಾಗಿದೆ. ಡಾ ವಿ ನಾಗೇಂದ್ರ ಪ್ರಸಾದ್ ಬರೆದಿರೋ ಈ ಸಾಲುಗಳಿಗೆ ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ಮೂಲಕವೇ ಕಾಣದಂತೆ ಮಾಯವಾದವನ ರೊಮ್ಯಾಂಟಿಕ್ ಅವತಾರ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.

ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಚಿತ್ರದ ಮೂಲಕ ವಿಕಾಸ್ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜಯಮ್ಮನ ಮಗ ಎಂಬ ಸಿನಿಮಾ ನಿರ್ದೇಶನ ಮಾಡೋ ಮೂಲಕವೂ ಗೆದ್ದಿದ್ದವರು ವಿಕಾಸ್. ಆ ನಂತರದಲ್ಲಿ ಒಂದಷ್ಟು ಅವಧಿಯಲ್ಲಿ ಕಣ್ಮರೆಯಾದಂತಿದ್ದ ಅವರೀಗ ನಾಯಕ ನಟನಾಗಿ, ಚಾಲೆಂಜಿಂಗ್ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ತಲುಪಿಕೊಳ್ಳಲು ತಯಾರಾಗಿದ್ದಾರೆ. ಆತ್ಮವೊಂದರ ಪ್ರೇಮಕಥೆ ಹೊಂದಿರೋ ಈ ಸಿನಿಮಾ ಕಥೆಯ ಬಗ್ಗೆ ಈಗಾಗಲೇ ಸೋಜುಗವೊಂದು ಪ್ರತೀ ಪ್ರೇಕ್ಷಕರ ಮನಸುಗಳಲ್ಲಿಯೂ ಪ್ರತಿಷ್ಠಾಪಿತವಾಗಿದೆ. ಈಗ ಹೊರ ಬಂದಿರೋ ಈ ಮಧುರ ಗೀತೆಯ ಮೂಲಕ ಅದು ಮತ್ತಷ್ಟು ಭದ್ರವಾಗಿದೆ.
[adning id="4492"]

LEAVE A REPLY

Please enter your comment!
Please enter your name here