ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸುತ್ತಿಕೊಂಡಿತು ಡಿಕೆಶಿ ಸಂಕಟ!

[adning id="4492"]
ದೇನೇ ಸರ್ಕಸ್ಸು ನಡೆಸಿದರೂ ಇಡಿ ವಿಚಾರಣೆಯಿಂದ ಪಾರಾಗಲಾಗದ ಸ್ಥಿತಿಯಲ್ಲಿ ಡಿ.ಕೆ ಶಿವಕುಮಾರ್ ಕಂಗಾಲಾಗಿದ್ದಾರೆ. ಇಳಿದಷ್ಟೂ ಆಳ, ಹೊರಳಿಕೊಂಡಷ್ಟೂ ಅಗಲವಾಗುತ್ತಿರೋ ಡಿಕೇಶಿ ಸ್ರಾಮ್ರಾಜ್ಯದ ಅಷ್ಟೂ ಅಕ್ರಮಗಳನ್ನು ಬಯಲಿಗೆಳೆಯೋ ಪಣ ತೊಟ್ಟವರಂತೆ ಇಡಿ ಅಧಿಕಾರಿಗಳು ಒಂದೇ ಸಮನೆ ವಿಚಾರಣೆ ನಡೆಸುತ್ತಿದ್ದಾರೆ. ಯಾವಾಗ ಡಿಕೆಶಿಯನ್ನು ಇಡಿ ಬಂಧಿಸಿಟ್ಟುಕೊಂಡಿತೋ ಆ ಕ್ಷಭಣದಿಂದಲೇ ಅವರೊಂದಿಗೆ ಆರ್ಥಿಯ ವ್ಯವಹಾರ ನಡೆಸಿದ್ದವರೆಲ್ಲರಿಗೂ ಭಯ ಶುರುವಾಗಿದೆ. ಅದಕ್ಕೆ ತಮಕ್ಕುದಾಗಿಯೇ ಇದೀಗ ಡಿಕೆಶಿ ಆಪ್ತರಿಗೂ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುತ್ತಿದೆ.

ಅದರ ಆರಂಭವೆಂಬಂತೆ ಡಿಕೆಶಿ ಆಪ್ತ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಇಡಿ ಸಮನ್ಸ್ ಬಂದಿದೆ. ಇದರಲ್ಲಿ ಸೆಪ್ಟೆಂಬರ್ ಹತ್ತೊಂಬತ್ತರಂದು ಖಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಈ ಹಿಂದೆ ಡಿಕೆಶಿ ಮನೆ ಮೇಲೆ ಐಟಿ ದಾಳಿ ನಡೆದಾಗ ಇದಕ್ಕೆ ಪೂರಕವಾದ ಅನೇಕ ದಾಖಲೆಗಳು ಸಿಕ್ಕಿವೆಯಂತೆ. ಇದಲ್ಲದೇ ಆ ದಿನ ಕಡೇಯದಾಗಿ ಡಿಕೆಶಿಯಿಂದ ಕರೆ ಹೋಗಿದ್ದದ್ದೂ ಕೂಡಾ ಈ ಲಕ್ಷ್ಮಿ ಹೆಬ್ಬಾಳ್ಕರ್‌ಗೇ. ಇದೆಲ್ಲ ಮಾಹಿತಿ ಮತ್ತು ದಾಖಲೆಗಳ ಆಧಾರದಲ್ಲಿ ಡಿಕೆಶಿ ಮನೆ ಮೇಲೆ ದಾಳಿಯಾದ ನಂತರದಲ್ಲಿ ಐಟಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಮನೆ ಮೇಲೂ ದಾಳಿ ನಡೆಸಿದ್ದರು.

ಲಕ್ಷ್ಮಿ ಹೆಬ್ಬಾಳ್ಕರ್ ಡಿಕೆಶಿ ಬೆಂಬಲದೊಂದಿಗೇ ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಭಾವೀ ಮಹಿಳಾ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಒಂದಷ್ಟು ವಿವಾದಗಳೊಂದಿಗೇ ಆಗಾಗ ಸದ್ದು ಮಾಡುತ್ತಾ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕಿಯಾಗಿಯೂ ಲಕ್ಷ್ಮಿ ಬಿಂಬಿತರಾಗಿದ್ದರು. ಡಿಕೆಶಿ ಬಂಧನವಾಗುತ್ತಲೇ ಬೆದರಿದಂತಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಡಿಕೆ ಬಿಡುಗಡೆಗಾಗಿ ಚಂಡಿಕಾ ಹೋಮ ಮಾಡಿದ್ದರು. ಆದರೀಗ ಇಡಿ ವಿಚಾರಣೆಯ ಕರೆ ಖುದ್ದು ಲಕ್ಷ್ಮಿಗೇ ಹೋಗಿದೆ. ನಾಳೆ ಅವರು ವಿಚಾರಣೆಗೆ ಹಾಜರಾಗಲೇ ಬೇಕಿದೆ. ಇವರ ಹೇಳಿಕೆಗಳೂ ಕೂಡಾ ಒಟ್ಟಾರೆ ಈ ಪ್ರಕರಣದಲ್ಲಿ ಪ್ರಧಾನ ಭಾಗವಾಗಿ ದಾಖಲಾಗಲಿದೆ. ಅದು ಡಿಕೆಶಿ ಪಾಲಿಗೆ ಮತ್ತಷ್ಟು ಸಂಕಟ ತಂದಿಟ್ಟರೂ ಇಡಬಹುದು!

[adning id="4492"]

LEAVE A REPLY

Please enter your comment!
Please enter your name here