ಮತ್ತೆ ಅಖಾಡಕ್ಕಿಳಿದ ರಾಬರ್ಟ್!

[adning id="4492"]

ಣೇಶ ಹಬ್ಬಕ್ಕೂ ಮುಂಚಿತವಾಗಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಮೊದಲ ಹಂತದ ಚಿತ್ರೀಕರಣ ಪೂರೈಸಿಕೊಂಡಿತ್ತು. ಹಬ್ಬವೆಲ್ಲ ಮುಗಿದ ಕೂಡಲೆ ಎರಡನೇ ಹಂತದ ಚಿತ್ರೀಕರಣ ಮುಗಿಯಲಿದೆ ಎಂದೂ ಚಿತ್ರತಂಡ ಹೇಳಿಕೊಂಡಿತ್ತು. ಅದಕ್ಕನುಗುಣವಾಗಿಯೇ ಇಂದಿನಿಂದ ಹೈದರಾಬಾದ್‌ನಲ್ಲಿ ಚಿತ್ರೀಕರಣ ಶುರುವಾಗಿದೆ. ನೆಲ್ಲೆ ರಾತ್ರಿಯೇ ಹೈದ್ರಾಬಾದ್‌ಗೆ ತೆರಳಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.


ಹೆಬ್ಬುಲಿ ಖ್ಯಾತಿಯ ಉಮಾಪತಿ ನಿರ್ಮಾಣ ಮಾಡುತ್ತಿರೋ ಈ ಸಿನಿಮಾಕ್ಕೀಗ ಹೈದ್ರಾಬಾದಿನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದೀಗ ಇಲ್ಲಿ ಸಾಹಸ ಸನ್ನಿವೇಶಗಳು ಸೇರಿದಂತೆ ರಾಬರ್ಟ್‌ನ ಮುಖ್ಯಭಾಗಗಳ ಚಿತ್ರೀಕರಣ ನಡೆಯುತ್ತಿದೆ. ಆರಂಭದಲ್ಲಿಯೇ ಈ ದ್ರಷ್ಯಾವಳಿಗಳನ್ನು ಇಲ್ಲಿಯೇ ಸೆರೆ ಹಿಡಿಯಬೇಕೆಂದು ನಿರ್ದೇಶಕ ತರುಣ್ ಸುಧೀರ್ ಪ್ಲ್ಯಾನು ಮಾಡಿಕೊಂಡಿದ್ದರಂತೆ. ನಿರ್ಮಾಪಕ ಉಮಾಪತಿಯವರ ಸಂಪೂರ್ಣ ಸಹಕಾರದೊಂದಿಗೆ ಇದೀಗ ಅಲ್ಲಿಯೇ ಎರಡನೇ ಹಂತದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಬಹುತೇಕ ಇಡೀ ಚಿತ್ರತಂಡವೇ ಅಲ್ಲಿ ಜಮೆಯಾಗಿದೆ.


ಮೊದಲ ಹಂತದ ಚಿತ್ರೀಕರಣದ ಸಂದರ್ಭದಲ್ಲಿ ಜಾಹೀರಾಗಿದ್ದ ಫಸ್ಟ್ ಲುಕ್‌ನಿಂದಲೇ ರಾಬರ್ಟ್ ದರ್ಶನ್ ಅಭಿಮಾನಿಗಳನ್ನು ಥ್ರಿಲ್ ಆಗಿಸಿತ್ತು. ಆದರೆ ಆ ಅವಧಿಯ ತುಂಬೆಲ್ಲ ರಾಬರ್ಟ್ ಜೋಡಿಯಿಲ್ಲದೆ ಏಕಾಂಗಿಯಾಗಿಯೇ ಚಿತ್ರೀಕರಣ ಪೂರೈಸಿಕೊಂಡಿದ್ದ. ಎರಡನೇ ಹಂತದ ಚಿತ್ರೀಕರಣಕ್ಕೆ ನಾಯಕಿ ಆಶಾ ಭಟ್ ಜೊತೆಯಾಗಿದ್ದಾರೆ. ಈ ಸಿನಿಮಾಗೆ ಭದ್ರಾವತಿ ಹುಡುಗಿ ಹಾಗೂ ಮಾಡೆಲ್ ಆಶಾ ಭಟ್ ನಾಯಕಿ ಎಂಬ ವಿಚಾರ ವಾರದ ಹಿಂದೆಯೇ ಭಹಿರಂಗಗೊಂಡಿತ್ತು. ಅದಕ್ಕಾಗಿ ಆಶಾ ಭರ್ಜರಿ ತಯಾರಿ ನಡೆಸುತ್ತಿರೋದರ ಬಗ್ಗೆಯೂ ಸುದ್ದಿಯಾಗಿತ್ತು. ಇದೀಗ ಆಶಾ ಭಟ್ ಕೂಡಾ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here