ಮಹಾರಾಜ ಕಾಲೇಜಿಂದ ಡಿಬಾರ್ ಆಗ್ತಾನಾ ಯುವರತ್ನ?

ಗೊಂದಷ್ಟು ದಿನಗಳಿಂದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಚುಇತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಪುನೀತ್ ಸೇರಿದಂತೆ ಒಂದಿಡೀ ಚಿತ್ರತಂಡವೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬೀಡು ಬಿಟ್ಟಿದೆ. ಈ ಚಿತ್ರದಲ್ಲಿ ಪುನೀತ್ ಕಾಲೇಜು ಸ್ಟೂಡೆಂಟ್ ಆಗಿ ನಟಿಸುತ್ತಿರೋದರಿಂದ ಆ ಭಾಗದ ಚಿತ್ರೀಕರಣ ಮಹಾರಾಜ ಕಾಲೇಜಿನಲ್ಲಿ ನಡೆಯುತ್ತಿದೆ. ಆದರೆ ಕಾಲೇಜು ನಡೆಯುತ್ತಿರುವಾಗಲೇ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿರೋದೀಗ ವಿವಾದ ಹುಟ್ಟು ಹಾಕಿದೆ. ಇದುವೇ ಯುವರತ್ನನಿಗೆ ಮಹಾರಾಜ ಕಾಲೇಜಿಂದ ಡಿಬಾರ್ ಆಗೋ ಭೀತಿಯನ್ನೂ ಉಂಟು ಮಾಡಿದೆ.

ಕಾಲೇಜಿಗೆ ರಜೆ ಇರೋ ಸಂದರ್ಭದಲ್ಲಿ ಈ ಹಿಂದೆ ಯುವರತ್ನ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪಾಠಯದ ಅವಧಿಯಲ್ಲಿ ಚಿತ್ರೀಕರಣ ನಡೆದರೆ ವಿದ್ಯಾರ್ಥಿಗಳ ಗಮನವೆಲ್ಲ ಆ ಕಡೆಯೇ ಕೀಲಿಸೋದರಿಂದ ಸಾಮಾನ್ಯವಾಗಿ ಯಾವ ಕಾಲೇಜುಗಳಲ್ಲಿಯೂ ಪಾಠದ ಅವಧಿಯಲ್ಲಿ ಚಿತ್ರೀಕರಣಕ್ಕೆ ಅವಕಾಶ ಕೊಡುವುದಿಲ್ಲ. ಆದರೆ ಯುವರತ್ನ ಚಿತ್ರೀಕರಣ ಕಾಲೇಜು ಅವಧಿಯಲ್ಲಿಯೇ ನಡೆಯುತ್ತಿತ್ತಂತೆ. ನಿರ್ದೇಶಕರು ದೃಷ್ಯಾವಳಿಗಳು ನೈಜವಾಗಿ ಮೂಡಿ ಬರಬೇಕೆಂಬ ಕಾರಣದಿಂದ ಹಾಗೆ ಮಾಡಿದರೋ ಏನೋ ಗೊತ್ತಿಲ್ಲ. ಆದರೆ ಇದರಿಂದಾಗಿ ತಮಗೆ ತೊಂದರೆಯಾಗಿದೆ ಅಂತ ವಿದ್ಯಾರ್ಥಿಗಳನೇಕರು ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ.

ಪುನೀತ್ ರಾಜ್ ಕುಮಾರ್ ಚಿತ್ರೀಕರಣದಲ್ಲಿ ತೊಡಗಿಒಸಿಕೊಂಡಿರೋದರಿಂದ ಮಹಾರಾಜ ಕಾಲೇಜಿನೊಳಗೇ ಸ್ಟಾರ್ ವಾರ್‌ಗೂ ಚಾಲನೆ ಸಿಕ್ಕಂತಾಗಿದೆ. ಪುನೀತ್‌ರನ್ನು ನೋಡುತ್ತಲೇ ಕೆಲ ವಿದ್ಯಾರ್ಥಿಗಳು ಡಿ ಬಾಸ್ ಅಂತ ಕೂಗಿದರೆ, ಮತ್ತೆ ಕೆಲ ವಿದ್ಯಾರ್ಥಿಗಳು ಕಿಚ್ಚಾ ಸುದೀಪ್‌ಗೆ ಜೈ ಅನ್ನುತ್ತಿದ್ದಾರೆ. ಈ ಗೋಜಿಗೆ ಹೋಗದೆ ತಮ್ಮ ಪಾಡಿಗೆ ತಾವಿರೋ ವಿದ್ಯಾರ್ಥಿಗಳಿಗೂ ಇಂಥಾ ಗಲಾಟೆಗಳಿಂದ ತೊಂದರೆಯಾಗಿದೆ. ಆದ್ದರಿಂದಲೇ ಅಂಥಾ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಾಂಶುಪಾಲರು ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದು ಹೊರಾಂಗಣದಲ್ಲಿ ಮಾತ್ರ. ಆದರೆ ಒಳಗೂ ಚಿತ್ರೀಕರಣ ನಡೆಸಲಾಗುತ್ತಿದೆ ಅನ್ನೋದು ಗಮನಕ್ಕೆ ಬಂದಿರೋದರಿಂದ ಅದನ್ನು ನಿಲ್ಲಿಸುವಂತೆ ಆದೇಶಿಸೋದಾಗಿಯೂ ಹೇಳಿದ್ದಾರಂತೆ.

LEAVE A REPLY

Please enter your comment!
Please enter your name here