ವಾಲ್ಮಿಕಿಗೆ ಜೊಡಿಯಾದ ಪೂಜಾ ಹೆಗ್ಡೆ ಬಲು ಮುಗ್ಧೆ!

ರುಣ್ ತೇಜ್‌ಗೆ ಕನ್ನಡದ ಹುಡುಗಿ ಪೂಜಾ ಹೆಗ್ಡೆ ನಾಯಕಿಯಾಗಿ ಅಭಿನಯಿಸುತ್ತಿರೋ ತೆಲುಗಿನ ವಾಲ್ಮೀಕಿ ಚಿತ್ರ ರೀಮೇಕ್ ಆದರೂ ಕೂಡಾ ಸಖತ್ ಆಗಿಯೇ ಸೌಂಡ್ ಮಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಹಳ್ಳಿ ಹುಡುಗಿಯ ಗೆಟಪ್ಪಿನಲ್ಲಿರೋ ಫಸ್ಟ್ ಲುಕ್ ಒಂದು ವೈರಲ್ ಆಗಿಬಿಟ್ಟಿತ್ತು. ಸದಾ ಬಿಕಿನಿಯಲ್ಲಿ ಪೋಸು ಕೊಡೋ ಪೂಜಾಳನ್ನು ಈ ಅವತಾರದಲ್ಲಿ ಕಂಡ ಪ್ರೇಕ್ಷಕರು ಥ್ರಿಲ್ ಆಗಿದ್ದರು. ಈಗ ವಾಲ್ಮಿಕಿಯ ಟ್ರೈಲರ್ ಬಿಡುಗಡೆಯಾಗಿದೆ.


ಈ ಹಿಂದೆ ಫಿದಾ ಎಂಬ ಚಿತ್ರದಲ್ಲಿ ನಟಿಸೋ ಮೂಲಕ ಗೆಲುವು ಕಂಡಿದ್ದ ವರುಣ್ ತೇಜ್ ಈ ಟ್ರೇಲರ್‌ನಲ್ಲಿ ಹೊಸಾ ಗೆಟಪ್ಪಿನಲ್ಲಿ ಕಂಗೊಳಿಸಿದ್ದಾರೆ. ಅವರ ಲುಕ್ಕು ಥೇಟು ಕನ್ನಡದ ಕೆಜಿಎಫ್ ಸೃಷ್ಟಿಸಿರೋ ಟ್ರೆಂಡಿನ ಮುಂದುವರೆದ ಭಾಗದಂತಿದೆ. ಕೆಜಿಎಫ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸಮಸ್ತ ವಿಲನ್ನುಗಳೂ ಉದ್ದ ಗಡ್ಡದ ಮೂಲಕ ವಿಕ್ಷಿಪ್ತವಾಗಿ ಕಾಣಿಸಿಕೊಂಡಿದ್ದರು. ವರುಣ್ ತೇಜ್ ಕೂಡಾ ಕೆಜಿಎಫ್ ವಿಲನ್ನುಗಳ ಅವತಾರದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆಯಂತೂ ಮುಗ್ಧತೆಯೇ ನಾಚುವಂಥಾ ಗೆಟಪ್ಪಿನಲ್ಲಿ ಮತ್ತೆ ಅಭಿಮಾನಿಗಳನ್ನು ಅಚ್ಚರಿಗೀಡು ಮಾಡಿದ್ದಾರೆ.


ವಾಲ್ಮಿಕಿ ಚಿತ್ರವನ್ನು ಹರಿಶಂಕರ್ ನಿರ್ದೇಶನ ಮಾಡಿದ್ದಾರೆ. ಇದು ತಮಿಳಿನಲ್ಲಿ ತೆರೆ ಕಂಡು ಹಿಟ್ ಆಗಿದ್ದ ಜಿಗರ್‌ಥಂಡ ಚಿತ್ರದ ರೀಮೇಕ್. ಆದರೂ ಈ ಸಿನಿಮಾವನ್ನು ತೆಲುಗಿನ ನೇಟಿವಿಟಿಗೆ ಒಗ್ಗಿಸಿಕೊಂಡು, ಒಂದಷ್ಟು ಪರಿಣಾಮಕಾರಿಯಾದ ಬದಲಾವಣೆಗಳೊಂದಿಗೆ ರೂಪಿಸಲಾಗಿದೆಯಂತೆ. ಟದರ ಸ್ಪಷ್ಟ ಸೂಚನೆಗಳು ಈ ಟ್ರೇಟರ್‌ನಲ್ಲಿ ಕಾಣಿಸಿವೆ. ಅದರಲ್ಲಿಯೂ ಪೂಜಾ ಹೆಗ್ಡೆ ಲಂಗ ದಾವಣಿ ತೊಟ್ಟು ಕಾಣಿಸಿಕೊಂಡಿರೋ ರೀತಿಯೇ ಈ ಟ್ರೇಲರ್‌ನ ಪ್ರಧಾನ ಆಕರ್ಷಣೆಯಾಗಿ ಹೋಗಿದೆ. ಇದುವರೆಗೂ ಹಾಟ್ ಆಗಿ, ಬೋಲ್ಡ್ ಪಾತ್ರಗಳ ಮೂಲಕವೇ ಕಾಣಿಸಿಕೊಳ್ಳುತ್ತಿದ್ದ ಪೂಜಾ ಹೆಗ್ಡೆ ಈ ಸಿನಿಮಾದ ತುಂಬಾ ಹಳ್ಳಿಯ ಮುಗ್ಧ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.

LEAVE A REPLY

Please enter your comment!
Please enter your name here