ಮಮ್ಮಿಯಾದ ಮೇಘನಾ ರಾಜ್!

ರ್ಷದ ಹಿಂದಷ್ಟೇ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದರು. ಆದ್ದರಿಂದ ಅವರೀಗ ಮಮ್ಮಿಯಾದ ಸುದ್ದಿ ಹೊರಬೀಳೋದರಲ್ಲಿ ಅಚ್ಚರಿ ಪಡುವಂಥಾದ್ದೇನೂ ಇಲ್ಲ. ಆದರೆ ಮೇಘನಾ ಮಮ್ಮಿಯಾಗಿರೋದು ಸಿನಿಮಾ ಪಾತ್ರಕ್ಕಾಗಿ. ಅವರು ಸೃಜನ್ ಲೋಕೇಶ್‌ಗೆ ಜೋಡಿಯಾಗಿ ನಟಿಸಲಿದ್ದಾರೆಂಬ ಸುದ್ದಿ ತಿಂಗಳ ಹಿಂದೆಯೇ ಹೊರ ಬಂದಿತ್ತು. ಈಗ ಆ ಸಿನಿಮಾಗೆ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಎಂಬ ನಾಮಕರಣವಾಗಿದೆ.


ಇದೀಗ ತೇಜಸ್ವಿ ನಿರ್ದೇಶನದ ಎಲ್ಲಿದ್ದೆ ಇಲ್ಲಿತನಕ ಚಿತ್ರದಲ್ಲಿ ಸೃಜನ್ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಮುಗಿಸಿಕೊಂಡಿರೋ ಎಲ್ಲಿದ್ದೆ ಇಲ್ಲಿತನಕ ಬಿಡುಗಡೆಯ ಹೊಸ್ತಿಲಲ್ಲಿದೆ. ಅದಾಗಲೇ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರ ಟೆಕಾಫ್ ಆಗಿದೆ. ಈ ಟೈಟಲ್ ಬಗ್ಗೆ ಮೇಘನಾ ಸಾಮಾಜಿಕ ಜಾಲತಾಣದ ಮೂಲಕ ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಅಂದಹಾಗೆ ಇದರ ಟೈಟಲ್‌ಗಾಗಿಯೇ ಆರು ತಿಂಗಳಿಗೂ ಹೆಚ್ಚು ಕಾಲದಿಂದ ಹುಡುಕಾಟ, ಚರ್ಚೆಗಳು ನಡೆದಿದ್ದವಂತೆ. ಕಡೆಗೂ ಚಿತ್ರತಂಡದ ಒಕ್ಕೊರಲ ಅಭಿಪ್ರಾಯದಂತೆ ಕಥೆಗೆ ಪೂರಕವಾಗಿ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಎಂಬ ಟೈಟಲ್ ಫಿಕ್ಸಾಗಿದೆ. ಅದಕ್ಕೆ ಮಕ್ಕಳ ಕಥೆ ಕೇಳ್ಲೇ ಬೇಡಿ ಅನ್ನೋ ಟ್ಯಾಗ್ ಲೈನ್ ಕೂಡಾ ಫಿಕ್ಸಾಗಿದೆ.


ಈ ಚಿತ್ರವನ್ನು ಮಧುಚಂದ್ರ ನಿರ್ದೇಶನ ಮಾಡಲಿದ್ದಾರೆ. ಹೆಸರಿಗೆ ತಕ್ಕುದಾದ ಕಥೆಯನ್ನು ಹೊಂದಿರೋ ಈ ಸಿನಿಮಾ ಈಗ ಎಲ್ಲರನ್ನೂ ಆವರಿಸಿಕೊಂಡಿರೋ ಮೊಬೈಲ್ ಹುಚ್ಚಿನ ಸುತ್ತಾ ಹೊಸೆದ ಕಥೆಯನ್ನೊಳಗೊಂಡಿದೆ. ಪಕ್ಕಾ ಮನೋರಂಜನೆಯ ಉದ್ದೇಶದೊಂದಿಗೆ ಮಜವಾದ ಕಥೆಯನ್ನು ಮಧುಚಂದ್ರ ಹೊಸೆದಿದ್ದಾರಂತೆ. ಇದೆ ಮೊದಲ ಬಾರಿ ಈ ಸಿನಿಮಾ ಮೂಲಕ ಮೇಘನಾ ಮತ್ತು ಸೃಜನ್ ಜೋಡಿಯಾಗಿ ನಟಿಸಿದ್ದಾರೆ. ಮಜಾ ಟಾಕೀಸ್ ಎಂಬ ಕಿರುತೆರೆ ಶೋನಲ್ಲಿ ಬ್ಯುಸಿಯಾಗಿರೋ ಸೃಜಾ ಅದರ ನಡುವಲ್ಲಿಯೇ ಹೋಂ ಬ್ಯಾನರಿನಲ್ಲಿ ಎಲ್ಲಿದ್ದೆ ಇಲ್ಲಿತನಕ ಎಂಬ ಚಿತ್ರವನ್ನು ಮುಗಿಸಿಕೊಂಡು ಈಗ ಗೂಗಲ್ ಡ್ಯಾಡಿಯಾಗಲು ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here